ಶುಕ್ರವಾರ, ಜನವರಿ 24, 2020
28 °C

ಹಾಕಿ: ಕರ್ನಾಟಕದ ಪೊನ್ನಮ್ಮಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್  ಕ್ರೀಡಾಕೂಟಕ್ಕೆ ಆಯ್ಕೆಯಾಗಲು ಫೆಬ್ರುವರಿ 18ರಿಂದ ನಡೆಯಲಿರುವ ಅರ್ಹತಾ ಸುತ್ತಿನ ಟೂರ್ನಿಗೆ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರ ಸಂಭವನೀಯರ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಮಿಡ್‌ಫೀಲ್ಡರ್ ಕರ್ನಾಟಕದ ಎಂ.ಎನ್. ಪೊನ್ನಮ್ಮ ಸ್ಥಾನ ಪಡೆದಿದ್ದಾರೆ.32 ಆಟಗಾರ್ತಿಯರನ್ನು ಒಳಗೊಂಡ ಸಂಭವನೀಯರ ಪಟ್ಟಿಯನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿತು. ಅರ್ಹತಾ ಸುತ್ತಿನ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಇಟಲಿ, ಕೆನಡಾ, ಉಕ್ರೇನ್ ಹಾಗೂ ಪೋಲ್ಯಾಂಡ್ ತಂಡಗಳು ಸ್ಪರ್ಧಿಸಲಿವೆ.ಇತ್ತೀಚಿಗೆ ಕೊನೆಗೊಂಡ ಅಜರ್‌ಬೈಜಾನ್ ವಿರುದ್ಧದ ಹಾಕಿ ಟೆಸ್ಟ್ ಸರಣಿಯಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಭಾರತ ತಂಡವನ್ನು ಆಯ್ಕೆ ಸಮಿತಿ ಆರಿಸಿದೆ. ಈ ಸರಣಿಯಲ್ಲಿ ಆತಿಥೇಯರು ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. ಈ ಸಮಿತಿಯಲ್ಲಿ ಬಲ್ದೀರ್ ಸಿಂಗ್, ಬಿ.ಪಿ. ಗೋವಿಂದ್, ಸೈಯದ್ ಅಲಿ ಹಾಗೂ ಬಿ. ರೇಖಾ ಅವರಿದ್ದರು.`ಈಗ ಆಯ್ಕೆ ಮಾಡಲಾಗಿರುವ ತಂಡ ನವದೆಹಲಿಯಲ್ಲಿ ಅಭ್ಯಾಸ ನಡೆಸಲಿದೆ. 18 ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಫೆಬ್ರುವರಿ ಆರಂಭದಲ್ಲಿ ಆಯ್ಕೆ ಮಾಡಲಾಗುವುದು~ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.ತಂಡ ಇಂತಿದೆ: ಗೋಲ್ ಕೀಪರ್ಸ್‌: ಯೋಗಿತಾ ಬಾಲಿ, ಸವಿತಾ, ರಜನಿ ಇತಿಮರ್ಪು ಹಾಗೂ ವಿ. ಸುಖಮಣಿ

ಡಿಫೆಂಡರ್ಸ್‌: ಜಸ್ಪ್ರೀತ್ ಕೌರ್, ಜಯ್ದೀಪ್ ಕೌರ್, ಸುಭದ್ರ ಪ್ರಧಾನ್ ಪಿಂಕಿ ದೇವಿ ಮತ್ತು ಎಸ್.ಕೆ. ಪ್ರೀತಿ

ಮಿಡ್‌ಫೀಲ್ಡರ್ಸ್‌: ಪಿ. ಸುಶೀಲಾ ಚಾನು, ಅಸುಂತಾ ಲಾಕ್ರಾ, ಕಿರಣ್‌ದೀಪ್ ಕೌರ್, ದೀಪಿಕಾ, ರಿತು ರಾಣಿ, ಮುಕ್ತಾ ಪರ್ವ ಬಾರ್ಲಾ, ಎಂ. ಎನ್. ಪೊನ್ನಮ್ಮ, ನಮಿತಾ ತೊಪ್ಪು, ಅಂಜು ಧಿಮಾನ್, ರೀನಾ ರಾಥೋರ್ ಹಾಗೂ ಕಿರಣ್ ಧಹಿಯಾ.ಫಾರ್ವರ್ಡ್ಸ್: ಪೂನಮ್ ರಾಣಿ, ಕೆ. ವಂದನಾ, ರಾಣಿ, ಸೌಂದರ್ಯ, ಅನುರಾಧಾ ದೇವಿ, ಡಿ. ರೋಸಲಿನೆ, ಜಸ್ಪ್ರೀತ್ ಕೌರ್, ಅನುಪಾ ಬಾರ್ಲಾ, ಲಿಲ್ಲಿ ಚಾನು, ದೀಪ್ ಗ್ರೇಸ್ ಇಕ್ಕಾ, ಅಪೂರ್ವ ವಿಶ್ವಕರ್ಮ ಹಾಗೂ ಲಿಲಿಮಾ ಮಿಂಜ್.

ಪ್ರತಿಕ್ರಿಯಿಸಿ (+)