ಶನಿವಾರ, ಮಾರ್ಚ್ 6, 2021
20 °C

ಹಾಕಿ ಕೋಚ್‌ ಓಲ್ಟಮಸ್‌ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ ಕೋಚ್‌ ಓಲ್ಟಮಸ್‌ ದೂರು

ರಿಯೊ ಡಿ ಜನೈರೊ (ಪಿಟಿಐ):   ಒಲಿಂ ಪಿಕ್ಸ್‌ನ ಕ್ರೀಡಾ ವೈಭವ ಕಣ್ತುಂಬಿ ಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಒಂದೆಡೆ ಕಾತರದಿಂದ ಕಾಯುತ್ತಿದ್ದರೆ, ಇನ್ನೊಂದಡೆ ಇಲ್ಲಿನ ಕ್ರೀಡಾ ಗ್ರಾಮದ ಅವ್ಯವಸ್ಥೆಯ ಬಗ್ಗೆ ಕೆಲವರು ಅಸ ಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಆಟಗಾರರು ಮತ್ತು ತಂಡದ ಸಿಬ್ಬಂದಿ ತಂಗಲು ನಿರ್ಮಿಸಲಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ಕುರ್ಚಿ ಹಾಗೂ ಟಿ.ವಿ ಸೌಲಭ್ಯವಿಲ್ಲದೇ  ಪರದಾಡುವ ಸ್ಥಿತಿ ಎದುರಾಗಿದೆ. ಇದರಿಂದ ಬೇಸತ್ತಿರುವ ಭಾರತ ಹಾಕಿ ತಂಡ ಕೋಚ್‌ ರೋಲಂಟ್ ಓಲ್ಟಮಸ್‌   ಭಾರತ ತಂಡದ ಚೆಫ್‌ ಡಿ ಮಿಷೆನ್‌ ರಾಕೇಶ್‌ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.‘ಒಂದು ಅಪಾರ್ಟ್‌ಮೆಂಟ್‌ನಲ್ಲಿ  ಎರಡು ಕುರ್ಚಿಗಳಷ್ಟೇ ಇವೆ.  ಟೇಬಲ್‌ ಗಳ ವ್ಯವಸ್ಥೆಯೇ ಇಲ್ಲ. ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳ ಬಳಕೆಗಾಗಿ ಒಂಬತ್ತು  ಅಪಾರ್ಟ್‌ಮೆಂಟ್‌ ಗಳನ್ನು ನೀಡಲಾಗಿದೆ.  ನಮಗೆ 28 ಕುರ್ಚಿಗಳ ಅಗತ್ಯವಿದೆ. ಏಳು ಅಪಾರ್ಟ್‌ ಮೆಂಟ್‌ಗಳಿಗೆ ಕನಿಷ್ಠ ತಲಾ ಒಂದು ಟೇಬಲ್‌ ಆದರೂ ಬೇಕಿದೆ. ನಮಗೆ ಕಠಿಣ ಎದುರಾಳಿ ಎನಿಸಿರುವ ತಂಡಗಳ ಪಂದ್ಯಗಳನ್ನು ನೋಡಲು ಟಿವಿ ಅಗತ್ಯ ವಿದೆ. ಬೇರೆ ತಂಡಗಳ ಪಂದ್ಯಗಳನ್ನು ನೋಡಿದರೆ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ’ ಎಂದು ಓಲ್ಟಮಸ್‌ ಅವರು  ರಾಕೇಶ್‌ ಗುಪ್ತಾಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.ಅನುಮತಿ ಕೋರಿದ ಓಲ್ಟಮಸ್‌:  ಹೊಸ ದಾಗಿ ಟಿ.ವಿ ಸೆಟ್‌ಗಳನ್ನು ಖರೀದಿಸಲು ಅನುಮತಿ ಕೊಡಬೇಕೆಂದು ಓಲ್ಟಮಸ್ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. ‘ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ಟಿವಿ ಸೆಟ್‌ಗಳು ಸಿಗುತ್ತಿಲ್ಲ. ಹಾಕಿ ಪಂದ್ಯ ಗಳನ್ನು ನೋಡಲು ಟಿವಿ ಅಗತ್ಯವಿದೆ. ಕ್ರೀಡಾ ಗ್ರಾಮದಲ್ಲಿಯೇ ಟಿವಿಗಳನ್ನು ಬಾಡಿಗೆ ಪಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.  ಆದ್ದರಿಂದ  ಮೂರು ಟಿ.ವಿ ಸೆಟ್‌ ಖರೀದಿಸಲು ಅನುಮತಿ ಕೊಡಬೇಕು. ಇಲ್ಲಿರುವ ಕಳಪೆ ಗುಣಮಟ್ಟದ ಕುರ್ಚಿಗಳನ್ನು ಬಳಸಿದರೆ ಆಟಗಾರರಿಗೆ ಬೆನ್ನು ನೋವು ಬರುವ ಅಪಾಯವಿದೆ’ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಕ್ರೀಡಾಗ್ರಾಮ ಕ್ರೀಡಾಪಟು ಗಳಿಗೆ ಮುಕ್ತವಾದಾಗಿನಿಂದ ಸಾಕಷ್ಟು ಸಮಸ್ಯೆಗಳು ತಲೆದೋರುತ್ತಿವೆ.  ಕ್ರೀಡಾ ಗ್ರಾಮದಲ್ಲಿರುವ ಕೊಠಡಿಗಳು ನಿರ್ಮಾಣ ಕಾರ್ಯ  ಪೂರ್ಣವಾಗಿಲ್ಲ, ಮೂಲ ಸೌಕರ್ಯಗಳೇ ಇಲ್ಲ ಎಂದು ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದ ಕ್ರೀಡಾಪಟುಗಳು ದೂರು ದಾಖಲಿಸಿ ದ್ದರು. ಈ ದೇಶದ ಕ್ರೀಡಾಪಟುಗಳು ತಂಗಿದ್ದ ಕೊಠಡಿಯಲ್ಲಿ ವಿದ್ಯುತ್‌ ಅವಘಡ ಕೂಡ ಸಂಭವಿಸಿತ್ತು.ಕೋರ್ಟ್‌ ಮೆಟ್ಟಿಲೇರಿದ ಎಫಿಮೋವಾ:  ರಷ್ಯಾದ ಕೆಲವು ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿ ಬಿದ್ದಿ ರುವ ಕಾರಣ ಅವರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅನುಮತಿ ಕೊಡುವ ಬಗ್ಗೆ ನಿರ್ಧರಿಸಲು ಅಂತರರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ತ್ರಿಸದಸ್ಯ ಸಮಿತಿ ರಚಿಸಿದೆ.ಈ ಬೆಳವಣಿಗೆಯ ಬೆನ್ನಲ್ಲೇ ರಷ್ಯಾದ ಇನ್ನೊಬ್ಬ ಈಜುಪಟು ಯೂಲಿಯಾ ಈಫಿಮೋವಾ ಕೋರ್ಟ್‌ ಮೆಟ್ಟಿಲೇರಲು ಮುಂದಾಗಿದ್ದಾರೆ.

ರಷ್ಯಾದ ಈಜುಪಟುಗಳಾದ ವ್ಲಾಡಿ ಮಿರ್‌ ಮರಜವ್ ಮತ್ತು  ನಿಕಿಟಾ ಲೊಬಿ ನತ್ಸೆವ್‌ ಅವರು ಕ್ರೀಡಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಎಫಿಮೋವಾ ಅವರು 2012ರ ಒಲಿಂಪಿಕ್ಸ್‌ನ 200 ಮೀ.ಬ್ರೆಸ್ಟ್‌ ಸ್ಟ್ರೋಕ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು.ರಷ್ಯಾದ ಏಳು  ಈಜುಪಟುಗಳು  ಉದ್ದೀಪನಾ ಮದ್ದು ಸೇವಿಸಿದ್ದಾರೆ. ಆದ್ದ ರಿಂದ ಅವರನ್ನು  ಅಂತರ ರಾಷ್ಟ್ರೀಯ ಈಜು ಫೆಡರೇಷನ್‌ (ಫಿನಾ) ಅಮಾನತು ಮಾಡಿದೆ. ಐಒಸಿ ಸೂಚನೆ ನೀಡಿದ್ದರಿಂದ ಫಿನಾ ಈ ಕ್ರಮ ಕೈಗೊಂಡಿದೆ.‘ಉದ್ದೀಪನಾ ಮದ್ದು ಸೇವನೆ ಯಂಥ  ಘಟನೆಯನ್ನು ತಡೆಯಲು ವಾಡಾ ಇದೆ.  ಅದು ತನ್ನ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಇದರಲ್ಲಿ ಐಒಸಿಯ ವೈಫಲ್ಯ ಏನೂ ಇಲ್ಲ’ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್‌ ಹೇಳಿದ್ದಾರೆ.

ಕಳ್ಳತನ: ಭದ್ರತೆ ಹೆಚ್ಚಳ

ರಿಯೊ ಡಿ ಜನೈರೊ (ಎಎಫ್‌ಪಿ):  ಕೆಲ  ದಿನಗಳ ಹಿಂದೆ ಆಸ್ಟ್ರೇಲಿಯಾದ ಕ್ರೀಡಾಪಟುಗಳ ಲ್ಯಾಪ್‌ಟಾಪ್‌ ಮತ್ತು ತಂಡದ ಟೀ ಶರ್ಟ್‌ಗಳು ಕಳ್ಳತನ ವಾಗಿವೆ. ಆದ್ದರಿಂದ ಸಂಘಟಕರು ಕ್ರೀಡಾಗ್ರಾಮದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.‘ಅಪಾರ್ಟ್‌ಮೆಂಟ್‌ನ  ಐದನೇ ಅಂತಸ್ತಿನಲ್ಲಿ ತಂಗಿದ್ದ ನಮ್ಮ ತಂಡದ ಸೈಕ್ಲಿಂಗ್ ಅಧಿಕಾರಿಯ ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಅಷ್ಟೇ ಅಲ್ಲ ಮೂರು ಸಲ ವಿದ್ಯುತ್‌ ಅವಘಡ ಕೂಡ ಸಂಭವಿಸಿತ್ತು. ಆದ್ದರಿಂದ ದೂರು ನೀಡಿದ್ದೆವು’ ಎಂದು ಆಸ್ಟ್ರೇಲಿಯಾದ ಚೆಫ್‌ ಡಿ ಮಿಷೆನ್‌ ಕೇಟಿ  ಚಿಲ್ಲರ್‌ ತಿಳಿಸಿದ್ದಾರೆ.‘ಕ್ರೀಡಾಗ್ರಾಮದಲ್ಲಿ ಕಳ್ಳತನ ನಡೆದ ಬಳಿಕ ಸಂಘಟಕರು ಭದ್ರತೆ ಹೆಚ್ಚಿಸಿದ್ದಾರೆ. ಆಸ್ಟ್ರೇಲಿಯಾದ ಕ್ರೀಡಾಪಟುಗಳನ್ನು ಗುರಿಯಾಗಿರಿಸಿ ಕೊಂಡು ನಡೆದ ಘಟನೆ ಇದಲ್ಲ. ಪ್ರತಿ ಕಟ್ಟಡಕ್ಕೂ ಖಾಸಗಿ ಭದ್ರತಾ ಸಿಬ್ಬಂದಿ ಯನ್ನು ನೇಮಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.