ಹಾಕಿ: ಭಾರತದ ಮಡಿಲಿಗೆ ಸರಣಿ

ಮಂಗಳವಾರ, ಜೂಲೈ 23, 2019
20 °C

ಹಾಕಿ: ಭಾರತದ ಮಡಿಲಿಗೆ ಸರಣಿ

Published:
Updated:

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಭಾರತ ಹಾಕಿ ತಂಡ ಫ್ರಾನ್ಸ್ ವಿರುದ್ಧ ಸೌಹಾರ್ದ ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.ಒಟ್ಟು ಎರಡು ಪಂದ್ಯಗಳ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8-2ಗೋಲುಗಳಿಂದ ಫ್ರಾನ್ಸ್ ಎದುರು ಜಯ ಸಾಧಿಸಿತ್ತು. ಶನಿವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ 4-0ಗೋಲುಗಳಿಂದ ಭಾರತ ಜಯ ಪಡೆದು ಸರಣಿ ತನ್ನದಾಗಿಸಿಕೊಂಡಿದೆ.ಡ್ರ್ಯಾಗ್ ಫ್ಲಿಕ್ಕರ್ ಸಂದೀಪ್ ಸಿಂಗ್ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲುಗಳಾಗಿ ಪರಿವರ್ತಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry