ಹಾಕಿ: ಸೆಮಿಫೈನಲ್‌ಗೆ ಆಸ್ಟ್ರೇಲಿಯಾ, ಹಾಲೆಂಡ್ ತಂಡಗಳು

ಶುಕ್ರವಾರ, ಮೇ 24, 2019
30 °C

ಹಾಕಿ: ಸೆಮಿಫೈನಲ್‌ಗೆ ಆಸ್ಟ್ರೇಲಿಯಾ, ಹಾಲೆಂಡ್ ತಂಡಗಳು

Published:
Updated:

ಲಂಡನ್ (ಪಿಟಿಐ): ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಹಾಲೆಂಡ್ ತಂಡಗಳು ಲಂಡನ್ ಒಲಿಂಪಿಕ್ಸ್‌ನ ಪುರುಷರ ವಿಭಾಗದ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.

ಮಂಗಳವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 7-0ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿದರೆ, ಹಾಲೆಂಡ್ 4-2ರಲ್ಲಿ ದಕ್ಷಿಣ ಕೊರಿಯಾ ಎದುರು ಜಯ ಪಡೆದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟವು.

ಏಕಪಕ್ಷೀಯವಾಗಿ ಕೊನೆಗೊಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿತು. ಆದ್ದರಿಂದ ಈ ತಂಡ ವಿರಾಮದ ವೇಳೆಗೆ 4-0ರಲ್ಲಿ ಮುನ್ನಡೆ ಸಾಧಿಸಿತ್ತು. ವಿರಾಮದ ನಂತರ ರಸೆಲ್ ಫೋರ್ಡ್ (42ನೇ ನಿಮಿಷ), ಜಾಮಿಯೆ ಡ್ವೆಯರ್ (48ನೇ ನಿ.) ಹಾಗೂ ಗ್ಲೀನ್ ಟರ್ನರ್(70ನೇ ನಿ.) ಗೋಲು ತಂದಿತ್ತು ಗೆಲುವಿನ ಅಂತರ ಹೆಚ್ಚಿಸಿದರು.

ಲೀಗ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ಎದುರು ಡ್ರಾ ಸಾಧಿಸಿತ್ತು. ಇನ್ನುಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿ 11 ಪಾಯಿಂಟ್ಸ್‌ನಿಂದ `ಎ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.  ನಾಲ್ಕರ ಘಟ್ಟದಲ್ಲಿಯೂ ಅದು ಉತ್ತಮ ಪ್ರದರ್ಶನ ನೀಡಿ ಪದಕ ಖಚಿತವಾಗಿಸುವ ವಿಶ್ವಾಸ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry