ಶನಿವಾರ, ಜನವರಿ 18, 2020
21 °C

ಹಾಕಿ: ಸೋಲಿನ ಹೊಣೆ ಹೊತ್ತ ನರೀಂದರ್‌ ಬಾತ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭಾರತ ಹಾಕಿ ತಂಡ ತವರಿನಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದು , ಇದರ  ಹೊಣೆಯನ್ನು  ತಾವು ಹೊರುವುದಾಗಿ ಹಾಕಿ ಇಂಡಿಯಾದ (ಹೆಚ್‌ಐ) ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ಹೇಳಿದ್ದಾರೆ.‘ಜೂನಿಯರ್ ಹಾಕಿ ತಂಡದ ನೀರಸ  ಪ್ರದರ್ಶನದ ಸಂಪೂರ್ಣ ಹೊಣೆಯನ್ನು ನಾನೇ ಹೊರಲಿದ್ದೇನೆ. ದಯವಿಟ್ಟು ತಂಡದ ಆಟಗಾರರು ಮತ್ತು ಸಿಬ್ಬಂದಿಯನ್ನು ಯಾರೂ ದೂರಬೇಡಿ. ಹಾಕಿ ಇಂಡಿಯಾದ ಸಂಪೂರ್ಣ ಜವಾಬ್ದಾರಿ ನನ್ನದಾಗಿರುವುದರಿಂದ ಈ ಬಗ್ಗೆ ನಾನು ದೇಶದ ಹಾಕಿ ಪ್ರೇಮಿಗಳು, ಕ್ರೀಡಾ ಸಚಿವಾಲಯ ಮತ್ತು ಕ್ರೀಡಾ ಪ್ರಾಧಿಕಾರಗಳ  ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)