ಶುಕ್ರವಾರ, ಏಪ್ರಿಲ್ 23, 2021
22 °C

ಹಾಕಿ: ಸ್ಪೇನ್‌ಗೆ ಮಣಿದ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗೋಲು ಗಳಿಸುವ ಕೆಲವೊಂದು ಉತ್ತಮ ಅವಕಾಶಗಳನ್ನು ಹಾಳುಮಾಡಿಕೊಂಡ ಭಾರತ ತಂಡ ಸ್ಪೇನ್ ವಿರುದ್ಧದ ಹಾಕಿ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ 1-2ರಲ್ಲಿ ಸೋಲು ಅನುಭವಿಸಿತು.ಸಂಟಾಂಡೆರ್‌ನಲ್ಲಿ ಶನಿವಾರ ನಡೆದ ಹೋರಾಟದಲ್ಲಿ ಗೆಲುವು ಪಡೆಯುವ ಮೂಲಕ ಸ್ಪೇನ್ ಎರಡು ಪಂದ್ಯಗಳ ಸರಣಿಯನ್ನು 1-0 ರಲ್ಲಿ ತನ್ನದಾಗಿಸಿಕೊಂಡಿತು. ಗುರುವಾರ ನಡೆದ ಸರಣಿಯ ಮೊದಲ ಪಂದ್ಯ 3-3 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತ್ತು.ವಿಶ್ವ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಭಾರತ ತಂಡ ಸೋಲು ಅನುಭವಿಸುವ ಮುನ್ನ ಐದನೇ ರ‌್ಯಾಂಕ್‌ನ ಎದುರಾಳಿಗಳಿಗೆ ಸಾಕಷ್ಟು ಪೈಪೋಟಿ ನೀಡಿತು. 28ನೇ ನಿಮಿಷದಲ್ಲಿ ಸಂದೀಪ್ ಸಿಂಗ್ ಪೆನಾಲ್ಟಿ ಅವಕಾಶದಲ್ಲಿ ತಂದಿತ್ತ ಗೋಲಿನ ನೆರವಿನಿಂದ ಭಾರತ 1-0 ರಲ್ಲಿ ಮುನ್ನಡೆ ಪಡೆಯಿತು.ಆದರೆ 34ನೇ ನಿಮಿಷದಲ್ಲಿ ಸ್ಪೇನ್ ಸಮಬಲ ಸಾಧಿಸಿತು. ಸ್ಟ್ರೈಕರ್ ಪೌ ಕ್ವೆಮಾಡ ಚೆಂಡನ್ನು ಗುರಿ ಸೇರಿಸಿದರು. ಎರಡನೇ ಅವಧಿಯಲ್ಲಿ ಭಾರತ ಮತ್ತು ಸ್ಪೇನ್ ಸಾಕಷ್ಟು ಗೋಲಿನ ಅವಕಾಶಗಳನ್ನು ಸೃಷ್ಟಿಸಿತು. ಆದರೆ `ಫಿನಿಷಿಂಗ್~ನಲ್ಲಿ ನಿಖರತೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.69ನೇ ನಿಮಿಷದಲ್ಲಿ ಆತಿಥೇಯ ತಂಡದ ಗೆಲುವಿನ ಗೋಲು ದಾಖಲಾಯಿತು. ನಾಯಕ ಸ್ಯಾಂಟಿ ಫ್ರೆಕ್ಸಾ ಲೊನಾರ್ಟ್ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಆ ಬಳಿಕ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಆದರೆ ಸಮಬಲದ ಗೋಲು ಗಳಿಸಲು ಪ್ರವಾಸಿ ತಂಡಕ್ಕೆ ಸಾಧ್ಯವಾಗಲಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.