ಹಳೇಬೀಡು: ನೂರಾರು ಎಕರೆ ಜಮೀನುಗಳಿಗೆ ನೀರು ಪೂರೈಕೆ ಮಾಡಿ ಹಸಿರು ವೈಭವ ಸೃಷ್ಟಿಸುತ್ತಿದ್ದ ಅಡಗೂರು ಕೆರೆಯ ಸ್ಥಿತಿಗತಿ ತಿರುಗಿ ನೋಡುವವರೆ ಇಲ್ಲದೆ ಸೊರಗುತ್ತಿದೆ. ಕೆರೆ ಈಗ ಹತ್ತಾರು ಸಮಸ್ಯೆಗಳಿಂದ ನಲುಗಿದೆ.

ಸುಮಾರು 800 ಹೇಕ್ಟೇರ್ ವಿಸ್ತಿರ್ಣದ ಕೆರೆ 100 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ. ಅಲ್ಲದೆ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಆಗಾಗ್ಗೆ ಹೂಳು ತೆಗೆಯುವ ಕಾಮಗಾರಿಗೆ ಹಣ ಮಂಜೂರಾದರೂ ಸಮರ್ಪಕವಾದ ಕೆಲಸ ಆಗುತ್ತಿಲ್ಲ. `ಪೂರ್ಣ ಪ್ರಮಾಣದ ಹೂಳು ತೆಗೆಯದೆ, ಅಲ್ಲಲ್ಲೆ ಗುಂಡಿ ಮಾಡಿ ಬಿಲ್ ಪಾವತಿ ಮಾಡುತ್ತಾರೆ. ಕೆರೆಗಾಗಿ ಪ್ರತಿ ವರ್ಷ ಮಂಜುರಾದ ಹಣ ಸೂಕ್ತರೀತಿಯಲ್ಲಿ ಬಳಕೆಯಾದರೆ ಕೆರೆ ಸಾಕಷ್ಟು ಸುಧಾರಣೆಯಾಗುತ್ತದೆ~ ಎನ್ನುತ್ತಾರೆ ಗ್ರಾಮಸ್ಥರು.

ಸ್ಥಳೀಯರು ಹಾಪು(ಸೆತ್ತೆ) ಎಂದು ಕರೆಯುವ ಸಸ್ಯ ಕೆರೆಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ. ಸಸ್ಯ ಎತ್ತರವಾಗಿ ಬೆಳೆದಂತೆ ಗೆಡ್ಡೆಯೂ ಭೂಮಿಯಲ್ಲಿ ಹರಡುತ್ತಿದೆ. ಹಿಗಾಗಿ ಗುಂಡಿಯಲ್ಲಿ ತುಂಬಿರುವ ಅಲ್ಪಸ್ವಲ್ಪ ನೀರು ಕಲುಷಿತವಾಗುತ್ತಿದೆ. ಈಗ ಗಿಡ ದಲ್ಲಿ ಹೂವಾಗಿದ್ದು, ಒಣಗಿದ ಹೂವು ಗಾಳಿಯಲ್ಲಿ ಊರು ಪ್ರವೇಶಿಸುತ್ತಿದೆ. ಒಣಗಿದ ಹೂವನ್ನು ಶರೀರಕ್ಕೆ ಮುಟ್ಟಿಸಿಕೊಂಡವರಿಗೆ ಮೈಕೈ ತುರಿಕೆ ಬರುತ್ತಿದೆ. ಕಿಟಕಿ ಬಾಗಿಲುಗಳಿಂದ ಮನೆಗೆ ಬರುವ ಹೂವಿನ ರಾಶಿಯನ್ನು ನಿಯಂತ್ರಣ ಮಾಡುವುದೆ ಒಂದು ದೊಡ್ಡ ಕೆಲಸವಾಗಿದೆ.

`ಕುಡಿಯುವ ನೀರು, ಆಹಾರ ಎನ್ನದೆ ಹೂವು ಬಂದು ಬೀಳುತ್ತದೆ. ಎಲ್ಲೆಲ್ಲೂ ಹಾಪಿನ ಹೂವಿನದ್ದೆ ಸಾಮ್ರಾಜ್ಯವಾಗಿದೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳು ಗಮನಹರಿಸಿ ಹಾಪಿನ ಗಿಡ ನಿಯಂತ್ರಣ ಮಾಡದಿದ್ದರೆ ಗ್ರಾಮಸ್ಥರ ಬದುಕು ಕಷ್ಟವಾಗುತ್ತದೆ~ ಎನ್ನುತ್ತಾರೆ ಎ.ಎಸ್.ಅತುಲ್ ಹಾಗೂ ಬಿ.ಎ.ರವಿಕುಮಾರ್.

ಗುಂಡಿಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿಯೂ ಬೀಡದೆ ಬಲೆ ಹಾಕಿ ಮೀನು ಬೇಟೆ ಮಾಡಲಾಗು ತ್ತಿದೆ. ಮೀನಿನ ಸಂಖ್ಯೆ ಕಡಿಮೆಯಾದಂತೆ ನೀರು ಕಲು ಷಿತಗೊಂಡು ವಾಸನೆ ಬರುತ್ತಿರುವುದರಿಂದ ಜಾನು ವಾರುಗಳು ನೀರನ್ನು ಕುಡಿಯುತ್ತಿಲ್ಲ. ಕೆರೆ ಆವರಣ ಮಲ ಮೂತ್ರ ವಿಸರ್ಜನೆಯ ತಾಣವಾಗಿರು ವುದರಿಂದಲೂ ಕೆರೆ ಸ್ವಚ್ಚತೆಯಿಂದ ದೂರವಾಗಿದೆ.

ಏರಿ ಜಖಂಗೊಂಡು ನಾಲ್ಕಾರು ವರ್ಷ ಅಡಗೂರು ಕೆರೆ ಏರಿಯ ಪ್ರಯಾಣ ನರಕಯಾತನೆ ಯಾಗಿತ್ತು. ಅಂದಾಜು ರೂ.5ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗ ಏರಿ ನಿರ್ಮಾಣವಾಗಿದೆ. ಆದರೆ ಕಾಮಗಾರಿಯಿಂದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಪಡಬಾರಾದ ಕಷ್ಟ ಅನುಭವಿಸುತ್ತಿದ್ದಾರೆ. ಸತ್ವ ಕಳೆದು ಕೊಂಡ ಹಳೆಯ ಏರಿಯ ಮಣ್ಣನ್ನು ದೂರಕ್ಕೆ ಸಾಗಾಟ ಮಾಡದೆ, ಅಚ್ಚುಕಟ್ಟ ಪ್ರದೇಶದ ಜಮೀನುಗಳಿಗೆ ತುಂಬಿಸಲಾಗಿದೆ. ಈ ಸಂದರ್ಭದಲ್ಲಿ ಅಳತೆ ಕಲ್ಲುಗಳೆ ಕಣ್ಮರೆ ಯಾಗಿವೆ. ರೈತರು ತಮ್ಮ ಜಮೀನು ಗುರುತಿಸಲಾಗದೆ ಪಡಬಾರಾದ ಕಷ್ಟ ಅನುಭವಿಸುತ್ತಿದ್ದಾರೆ. ಕೆಲವರ ಅಂದಾಜು ಪ್ರಕಾರ ತಮ್ಮ ಜಮೀನು ಕಂಡಹಿಡಿದರೂ ಅಲ್ಲಿ ಬೆಳೆ ಮಾಡಿ ದರೂ ಗಿಡದ ಬೆಳವಣಿಗೆ ಕುಂಠಿತ ಗೊಂಡಿದೆ. ಕಷ್ಟ ಪಟ್ಟು ಬೇಸಾಯ ಮಾಡಿದರೂ ಫಸಲು ಮಾತ್ರ ಬರುತ್ತಿಲ್ಲ.

ಅಚ್ಚುಕಟ್ಟು ಪ್ರದೇಶದ ರೈತರ ಪರಿಸ್ಥಿತಿ ಈಗ ಬಾಣಲೆ ಯಿಂದ ಬೆಂಕಿಗೆ ಬಿದ್ದಂತಾಗಿದೆ. ಸಣ್ಣನೀರಾವರಿ ಇಲಾಖೆ ಎಂಜಿನಿ ಯರ್ಗಳು ಶೀಘ್ರದಲ್ಲಿಯೇ ಕ್ರಮಕೈ ಗೊಂಡು ಕೆರೆ ಸಮಸ್ಯೆಗಳ ನಿವಾರಣೆ ಮಾಡಬೇಕು ಎಂಬುದು ಗ್ರಾಮ ಸ್ಥರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.