ಬುಧವಾರ, ಜನವರಿ 29, 2020
24 °C

ಹಾಲ್‌ಮಾರ್ಕ್: ಒಂಬತ್ತು ಸಾವಿರ ಹೊಸ ಪರವಾನಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಿನ್ನಾಭರಣಗಳಿಗೆ `ಹಾಲ್‌ಮಾರ್ಕ್~ ಗುರುತು  ಕಡ್ಡಾಯಗೊಳಿಸಿದ ನಂತರ ಇದುವರೆಗೆ 9 ಸಾವಿರ `ಹಾಲ್‌ಮಾರ್ಕ್~ ಪರವಾನಗಿ ವಿತರಿಸಲಾಗಿದೆ ಎಂದು ಭಾರತೀಯ ಮಾನಕ ಮಂಡಳಿ (ಬಿಐಎಸ್) ಹೇಳಿದೆ.ಕಳೆದ ಡಿಸೆಂಬರ್ 31ರವರೆಗೆ 9005 ಚಿನ್ನಾಭರಣ ಹಾಲ್‌ಮಾರ್ಕ್ ಮತ್ತು 528 ಬೆಳ್ಳಿಯ ಹಾಲ್‌ಮಾರ್ಕ್ ಪರವಾನಗಿ ನೀಡಲಾಗಿದೆ ಎಂದು `ಬಿಐಎಸ್~ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಕ್ರಮ ಮತ್ತು ನಕಲಿ ಚಿನ್ನಾಭರಣ ವಹಿವಾಟು ತಡೆಯಲು ಸರ್ಕಾರ ಕಳೆದ ತಿಂಗಳು `ಹಾಲ್‌ಮಾರ್ಕ್~ ಗುರುತು ಹಾಕುವುದನ್ನು ಕಡ್ಡಾಯಗೊಳಿಸಿತ್ತು.ಸದ್ಯ ದೇಶದಲ್ಲಿ 170 ಹಾಲ್    ಮಾರ್ಕ್ ಗುರುತು ನೀಡುವ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಈ ಕುರಿತು ಜಾಗೃತಿ ನೀಡುವ ಕಾರ್ಯಕ್ರಮವನ್ನೂ `ಬಿಐಎಸ್~ ಹಮ್ಮಿಕೊಂಡಿದೆ.

ಪ್ರತಿಕ್ರಿಯಿಸಿ (+)