ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ಗಳಿಗೆ ಕಾರ್ಮಿಕರನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡುವ ಕ್ರಮವನ್ನು ರದ್ದುಪಡಿಸಿ, ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಸಾವಿರಾರು ಹಾಸ್ಟೆಲ್ ಕಾರ್ಮಿಕರು ‘ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ’ದ ನೇತೃತ್ವದಲ್ಲಿ ನಗರದ ಬನ್ನಪ್ಪ ಪಾರ್ಕ್ನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಕೊಪ್ಪಳ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಾಪುರ, ದಾವಣಗೆರೆ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ಹಾಸ್ಟೆಲ್ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಂಘದ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿ, ‘ರಾಜ್ಯದ ನೂರಾರು ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ (ಮ್ಯಾನ್ ಪವರ್ ಏಜೆನ್ಸಿ) ಮೂಲಕ ನೇಮಕ ಮಾಡಿಕೊಂಡು ಕಾರ್ಮಿಕರ ಜೀವನವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಕ್ರೂರವಾದ ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು. ಸುಮಾರು 15-20 ವರ್ಷಗಳಿಂದ ಅತ್ಯಲ್ಪ ವೇತನಕ್ಕೆ ಇಲಾಖೆಗೆ ಸೇವೆ ಸಲ್ಲಿಸಿರುವ ಈ ಕಾರ್ಮಿಕರನ್ನು ಮಾನವೀಯತೆಯ ಆಧಾರದ ನೆಲೆಯಲ್ಲಿ ಕಾಯಂ ಮಾಡಿಕೊಳ್ಳಬೇಕು. ಆ ಮೂಲಕ ಕಾರ್ಮಿಕರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.

‘ಕಾಯಂ ನೌಕರರು ನಿರ್ವಹಿಸುವ ಕೆಲಸವನ್ನೇ ಈ ಕಾರ್ಮಿಕರು ನಿರ್ವಹಿಸುತ್ತಿದ್ದರೂ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ದಿನದ 12 ಗಂಟೆಗೂ ಹೆಚ್ಚಿನ ಅವಧಿಯವರೆಗೆ ಕೆಲಸ ನಿರ್ವಹಿಸುವ ಇವರಿಗೆ ಕೆಲಸದ ಭದ್ರತೆ ಇಲ್ಲ. ಭವಿಷ್ಯನಿಧಿ, ಇಎಸ್ಐ, ಬೋನಸ್ ಮತ್ತು ಕಾನೂನು ಬದ್ಧ ರಜೆಗಳನ್ನು ನೀಡುತ್ತಿಲ್ಲ. ಈ ಕೂಡಲೇ ನೌಕರರ ಸಂಘದ ೆರವಿನೊಂದಿಗೆ ಸೇವೆಯಲ್ಲಿರುವ ನೌಕರರ ಪಟ್ಟಿ ತಯಾರಿಸಿ ಅದೇ ಪಟ್ಟಿಯನ್ನು ಆಯ್ಕೆಗೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ನ ರಾಜ್ಯ ಅಧ್ಯಕ್ಷ ಕೆ.ರಾಧಾಕೃಷ್ಣ ಮಾತನಾಡಿ, ‘ಜಾಗತೀಕರಣ ನೀತಿಯು ಜಾರಿಗೆ ಬಂದ ಮೇಲೆ ಹೊರಗುತ್ತಿಗೆಯಂಥ ಕಾರ್ಮಿಕ ವಿರೋಧಿ ನೀತಿಗಳು ಜಾರಿಗೆ ಬಂದಿವೆ. ರೈಲ್ವೆ ಇಲಾಖೆ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಹಲವಾರು ಕಾಯಂ ಸ್ವರೂಪದ ನೇಮಕಾತಿ ಮಾಡಕೊಳ್ಳಬೇಕಾದ ಇಲಾಖೆಗಳಲ್ಲೂ ಹೊರಗುತ್ತಿಗೆ ಪದ್ಧತಿ ಕಾಲಿಟ್ಟಿದೆ. ಇದರಿಂದ ಕಾರ್ಮಿಕರ ಬದುಕು ಚಿಂತಾಜನಕವಾಗಿದೆ’ ಎಂದು ಟೀಕಿಸಿದರು.ಸಂಘಟನೆಯ ರಾಜ್ಯ ಮುಖಂಡರಾದ ರಾಮಣ್ಣ, ಟಿವಿಎಸ್ ರಾಜು, ಮಲ್ಲಿಕಾರ್ಜುನ, ಮಲ್ಲಪ್ಪ ಕಂದಕೂರ ಇತರರು ಭಾಗವಹಿಸಿದ್ದರು.

ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ ಬರುವ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಪಡೆಯಲು ಬಯಸುವ ಅಂಧ ಹಾಗೂ ಆರ್ಥಿಕ ವಾಗಿ ಹಿಂದುಳಿದಿರುವ ಅಂಗವಿಕಲ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಐದರಿಂದ ಹತ್ತು ವರ್ಷದೊಳಗಿನ ಮಕ್ಕಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ-97411 22706 ಸಂಪರ್ಕಿಸಬಹುದು.

‘ಅಡುಗೆ ಮಾಡಿ ಮಣ್ಣಿಗೆ ಹೋಗು ಅಂತಾರ’!
‘ನಮ್ಮ ಮನಿ ಒಳಗ ಯಾರಾದ್ರೂ ಸತ್ತರೂ ನಮಕ ರಜಾ ಕೊಡಂಗಿಲ್ಲ. ಹಾಸ್ಟೆಲ್ನ್ಯಾಗ ಅಡುಗೆ ಮಾಡಿ ಆಮೇಲೆ ಮಣ್ಣ ಕೊಡಾಕ ಹೋಗೂ ಅಂತಾರ...’
-ಹೊರಗುತ್ತಿಗೆ ಏಜೆನ್ಸಿಯೊಂದರ ಮೂಲಕ ಅಡುಗೆ ಸಹಾಯಕಿಯಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ್ನ ಬಿಸಿಎಂ ಹಾಸ್ಟೆಲ್ನಲ್ಲಿ ಕೆಲಸ ಮಾಡುತ್ತಿರುವ ಈರಮ್ಮ ತಮ್ಮ ಪರಿಸ್ಥಿತಿಯನ್ನು ‘ಪ್ರಜಾವಾಣಿ’ಗೆ ಬಿಚ್ಚಿಟ್ಟದ್ದು ಹೀಗೆ!

ದಿನಕ್ಕೆ 13 ಗಂಟೆ ಕೆಲಸ ಮಾಡುತ್ತಿರುವ ಈರಮ್ಮ ಅವರಿಗೆ ಸಿಗುತ್ತಿರುವ ಮಾಸಿಕ ಸಂಬಳ ಕೇವಲ ರೂ 2,500. ಆದರೆ ವಾಸ್ತವವಾಗಿ ಅವರಿಗೆ ಸಂದಾಯವಾಗಬೇಕಿದ್ದುದು ರೂ 4,700. ಕೆಲಸ ಸ್ವರೂಪ ಏಕರೂಪದ್ದಾದರೂ ವೇತನ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಹಾಸ್ಟೆಲ್ಗಳಿಗೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆದಾರನಿಗೆ ಕೊಂಚ ಕಾಳಜಿಯಿದ್ದರೆ ವೇತನ ಪ್ರಮಾಣ ಸ್ವಲ್ಪ ಜಾಸ್ತಿಯಾಗುತ್ತದೆ.

ಕಳೆದ 10 ವರ್ಷಗಳಿಂದ ವಿಜಾಪುರದ ಹಾಸ್ಟೆಲೊಂದರಲ್ಲಿ ಕೆಲಸ ಮಾಡುತ್ತಿರುವ ಶೋಭಾ ಹಲಗಲಿ ಅವರಿಗೆ ಇಎಸ್ಐ ಎಂದರೆ ಏನೆಂದು ಗೊತ್ತಿಲ್ಲ. ‘ಇಲಾಖೆಯಲ್ಲಿ ಹಣ ಇಲ್ಲ ಎಂದು ಹೇಳಿ ನಾಲ್ಕಾರು ತಿಂಗಳಿಗೊಮ್ಮೆ ವೇತನ ನೀಡುತ್ತಾರೆ’ ಎಂಬುದನ್ನೂ ಅವರು ಆಕ್ರೋಶದಿಂದ ಹಂಚಿಕೊಂಡರು.ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಲಕ್ಷ್ಮಿಬಾಯಿ, ತಮಗೆ ಕಳೆದ ಒಂಬತ್ತು ತಿಂಗಳಿಂದ ವೇತನವೇ ಬಂದಿಲ್ಲ ಎಂಬುದನ್ನು ಬಹಿರಂಗಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.