ಗುರುವಾರ , ಜನವರಿ 23, 2020
19 °C
ನಗರಸಭೆ; ಪರಿಶಿಷ್ಟರ 22.75 ಅನುದಾನ ದುರ್ಬಳಕೆ ಪ್ರಕರಣ

ಹಿಂದಿನ ಆಯುಕ್ತ, ಎಂಜಿನಿಯರ್ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರಸಭೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ 22.75 ಅನುದಾನ ದುರ್ಬಳಕೆಗೆ ಸಂಬಂಧಿಸಿ ದಂತೆ ನಗರಸಭೆ ಹಿಂದಿನ ಆಯುಕ್ತ ಎಂ ತಿಪ್ಪೇಶ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ  ಹಾಗೂ ಇತರರ ವಿರುದ್ಧ ರಾಯಚೂರು ನಗರಸಭೆ ಆಯುಕ್ತ ಬಸಪ್ಪ ಅವರು ಸದರ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಂಗಳವಾರ ರಾತ್ರಿ ನಗರಸಭೆ ಆಯುಕ್ತ ಬಸಪ್ಪ ಅವರು 22.75 ಅನುದಾನ ದುರ್ಬ ಳಕೆಗೆ ಸಂಬಂಧ ಐಪಿಸಿ 409, 420, ಮತ್ತು 34.ಐ.ಪಿ.ಸಿಯಡಿ  ಪ್ರಕರಣ ದಾಖಲಿಸಿದ್ದಾರೆ.2008ರಿಂದ 2011ರ ಅವಧಿಯಲ್ಲಿ 22.75 ಅನುದಾನ ಬಳಕೆಯಲ್ಲಿ ಹಿಂದಿನ ಪೌರಾಯುಕ್ತ ತಿಪ್ಪೇಶ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ ಹಾಗೂ ಇತರರು ಸೇರಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ. ಸದರ ಬಜಾರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಜಿಲ್ಲಾಧಿಕಾರಿ ಆದೇಶದನ್ವಯ ಪ್ರಕರಣ ದಾಖಲು: ರಾಯಚೂರು ನಗರಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲರಿಸಿದ 22.75 ಅನುದಾನದ ಬಳಕೆಯಲ್ಲಿ ದುರುಪಯೋಗ ವಾದ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಅವರು ನವೆಂಬರ್ 21ರಂದೇ ನಗರಸಭೆ ಆಯುಕ್ತ ಬಸಪ್ಪ ಅವರಿಗೆ ಪತ್ರ ಬರೆದಿದ್ದರು.22.75 ಅನುದಾನ ದುರ್ಬಳಕೆ ಬಗ್ಗೆ ತನಿಖೆ ನಡೆಸಿದ ನಾಗರೀಕ ಹಕ್ಕು ಜಾರಿ ನಿರ್ದೇಶ ನಾಲಯದ ಆಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಜನವರಿ 2013ರಲ್ಲಿ ಬರೆದ ಪತ್ರ ಮತ್ತು ವರದಿ ಹಾಗೂ ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಗಳು ಅಕ್ಟೋಬರ್ –2013ರಲ್ಲಿ ಬರೆದ ಪತ್ರ ಉಲ್ಲೇಖಿಸಿ ಜಿಲ್ಲಾಧಿಕಾರಿ ನಾಗರಾಜು ಅವರು ನಗರಸಭೆ ಆಯುಕ್ತರಿಗೆ ಸೂಚಿಸಿದ್ದರು.ಆದರೆ, ಈವರೆಗೂ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಇತರ ಜನಪರ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿದ್ದವು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ನಗರಾ ಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ ಪತ್ರ ಬರೆದರೂ ಪ್ರಕರಣ ದಾಖಲಿಸದೇ ಕಾಲಹರಣ ಖಂಡಿಸಿ ದ್ದವು. ಅಲ್ಲದೇ ಡಿಸೆಂಬರ್ 18ಕ್ಕೆ ನಗರಸಭೆಗೆ ಮುತ್ತಿಗೆ ಹಾಕುವ ನಿರ್ಧಾರ ಮಾಡಿದ್ದವು.ಆದರೆ, ಮುತ್ತಿಗೆ ಹಾಕುವ ಮುನ್ನಾ ದಿನ ಅಂದರೆ ಮಂಗಳವಾರ ನಗರಸಭೆ ಆಯುಕ್ತ ಬಸಪ್ಪ ಅವರು ಜಿಲ್ಲಾಧಿಕಾರಿ ಆದೇಶ ಅನ್ವಯ ಸದರ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಜನಪರ ಸಂಘಟನೆ  ಮುತ್ತಿಗೆ ವಾಪಸ್: ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಸೆಂಬರ್ 18ರಂದು ನಗರಸಭೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕೆಲಸ ಜನಪರ ಸಂಘಟನೆ ಮುತ್ತಿಗೆ ಕೈ ಬಿಟ್ಟವು. ಸಂಘಟನೆಗಳ ಒಗ್ಗಟ್ಟಿನ ನ್ಯಾಯಯುತ, ಜನಪರ ಹೋರಾಟಕ್ಕೆ ಪ್ರಥಮ ಹಂತದ ಜಯ ದೊರಕಿದೆ ಎಂದು ಈ ಬಗ್ಗೆ ಹೋರಾಟ ನಡೆಸಿದ ಸಂಘಟನೆ ಮುಖಂಡರಾದ  ಅಂಬಣ್ಣ ಅರೋಲಿ, ಜೆ.ಬಿ ರಾಜು, ಅಮರೇಶ, ಅಶೋಕ ಜೈನ್, ರವೀಂದ್ರ ಜಾಲ್ದಾರ್ ಹೇಳಿದ್ದಾರೆ.ಇದೊಂದು ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ನಗರಕ್ಕೆ ನೀರು ಪೂರೈಕೆಗೆ ಸಮರ್ಪಕ ವಿದ್ಯುತ್ ಕಲ್ಪಿಸಲು ಎಕ್ಸಪ್ರೆಸ್ ವಿದ್ಯುತ್ ಮಾರ್ಗ ಅಳವಡಿಕೆಯಲ್ಲಿ 53 ಲಕ್ಷ ಅವ್ಯವಹಾರ ಪ್ರಕರಣ, ಒಳಚರಂಡಿ ಕಾಮಗಾರಿ, ನವೋದಯ ಶಿಕ್ಷಣ ಸಂಸ್ಥೆಗೆ ತೆರಿಗೆ ವಿನಾಯಿತಿ, ಖಾಸಗಿ ಅಪಾರ್ಟ್‌ಮೆಂಟ್ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಿದ್ದರೂ ಕ್ರಮ ಜರುಗಿಸದೇ ಉಪೇಕ್ಷೆ ಮಾಡಿರುವುದು, ಬೇನಾಮಿ ಮಿಸ್ಬಾ ಎಜೆನ್ಸಿಯ ಮೂಲಕ 15 ಲಕ್ಷ ಮೊತ್ತದಕಳಪೆ ಕಂಪ್ಯೂಟರ್ ಸಸರಬರಾಜು ಮಾಡಿದ ಅರುಣಕುಮಾ ಎಂಬುವವರ ಮೇಲೆ ದೂರು ದಾಖಲಿಸಬೇಕು ಎಂಬುದು ಸೇರಿದಂತೆ ಹಲವು ಪ್ರಕರಣಗಳಿವೆ. ಇವೆಲ್ಲದರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂಬುದು ತಮ್ಮ ಒತ್ತಾಯವಾಗಿದೆ ಎಂದು ಹೇಳಿದರು.ನಗರಸಭೆ ಆಯುಕ್ತರ ಹೇಳಿಕೆ:  22.75 ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ದೂರು ದಾಖಲಿಸಲಾಗಿದೆ ಎಂದು ನಗರಸಭೆ ಆಯುಕ್ತ ಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.ಏನಿದು 22.75 ಅನುದಾನ  ದುರ್ಬಳಕೆ ಅರೋಪ: 2008–2011ಅವಧಿಯಲ್ಲಿ ಪಕ್ಕಾ ಮನೆ ಕ್ರಿಯಾ ಯೋಜನೆಯಲ್ಲಿ 130 ಲಕ್ಷ ಅನುದಾನ ದುರಪಯೋಗ, ಶೈಕ್ಷಣಿಕ ಪ್ರವಾಸಕ್ಕಾಗಿ ಸರ್ಕಾರಿ ಶಾಲೆ ಮುಖ್ಯಾಧ್ಯಾಪ ಕರು ಸಲ್ಲಿಸಿದ ಹಣ ಮಂಜೂರಾತಿಗೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆಗೆ ಹಣ ಪಾವತಿಸುವ ಬದಲು ನೇರವಾಗಿ ಶಾಲೆ ಮುಖ್ಯಾಧ್ಯಾಪಕರಿಗೆ ಹಣ ಪಾವತಿಸಿ ನಿಯಮ ಉಲ್ಲಂಘಿಸಿ 4 ಲಕ್ಷ ಅನುದಾನ ದುರ್ಬಳಕೆ, 2008–09 ಕೆ.ಎ.ಎಸ್ ಪರೀಕ್ಷೆ ತರಬೇತಿಗಾಗಿ ಮತ್ತು 2009–10ರಲ್ಲಿ ಐ.ಎ.ಎಸ್ ಪರೀಕ್ಷೆ ಅರ್ಹ ಅಭ್ಯರ್ಥಿಗಳಿಗೆ ಕೋಚಿಂಗ್‌ ಕಲ್ಪಿಸುವಾಗ ಅರ್ಹ ಫಲಾನುಭವಿಗಳು ತರಬೇತಿ ಪೂರ್ಣ ಪಡೆದಿದ್ದಾರೆಯೇ, ಎಷ್ಟು ಜನ ತರಬೇತಿ ಪಡೆದಿದ್ದಾರೆಯೇ ಎಂಬುದನ್ನು ತಿಳಿಯದೇ ತರಬೇತಿ ಕೇಂದ್ರಕ್ಕೆ 10 ಲಕ್ಷ ಪಾವತಿ ಮಾಡಿ ಅನುದಾನ ದುರ್ಬಳಕೆ ಆರೋಪ ಮಾಡಲಾ ಗಿದ್ದು, ಈ ಮೂರು ಪ್ರಕರಣ ಒಟ್ಟು ಅನುದಾನ ದುರ್ಬಳಕೆ 144 ಲಕ್ಷ  ಆಗಿದೆ ಎಂಬುದನ್ನು  ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಆಡಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದು, ಈ ವರದಿ ಉಲ್ಲೇಖಿಸಿ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಅವರು ಸಂಬಂಧಪಟ್ಟ ವರ ವಿರುದ್ಧ ಪ್ರಕರಣ ದಾಖಲಿಸಲು ನಗರಸಭೆ ಆಯುಕ್ತರಿಗೆ ಸೂಚಿಸಿದ್ದರು.

ಪ್ರತಿಕ್ರಿಯಿಸಿ (+)