ಬುಧವಾರ, ಜೂನ್ 16, 2021
23 °C
ನಿಮಗಿದು ತಿಳಿದಿರಲಿ

ಹಿಂದೂ ವಿವಾಹ

ಡಾ. ಪ್ರಭಾ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಭಾರತ ಹಲವು ಧರ್ಮಗಳ ತವರು. ಹಾಗೆಯೇ, ವಿವಾಹಕ್ಕೆ ಸಂಬಂಧಿಸಿದಂತೆ ಪ್ರತಿ ಧರ್ಮಕ್ಕೂ ಪ್ರತ್ಯೇಕ ಕಾನೂನುಗಳಿವೆ. ಆಯಾ ಧರ್ಮದವರಿಗೆ ಅದೇ ಧರ್ಮದ ಕಾನೂನು ಅನ್ವಯಿಸುತ್ತದೆ. ಹಿಂದೂಗಳಿಗೆ ಹಿಂದೂ ವಿವಾಹ ಅಧಿನಿಯಮ, ಮುಸಲ್ಮಾನರಿಗೆ ಮುಸ್ಲಿಂ ವಿವಾಹ ಕಾನೂನು, ಕ್ರಿಶ್ಚಿಯನ್ನರಿಗೆ ಕ್ರಿಶ್ಚಿಯನ್ ವಿವಾಹ ಕಾನೂನು, ಪಾರ್ಸಿಗಳಿಗೆ ಪಾರ್ಸಿ ವಿವಾಹ ಕಾನೂನು, ಹೀಗೆ.ಹಿಂದೂಗಳಿಗೆ ವಿವಾಹ ಒಂದು ಸಂಸ್ಕಾರ. ಹಿಂದೂ ವಿವಾಹ ಕಾನೂನು ಬೌಧ್ಧರು, ಜೈನರು, ವೀರಶೈವರು ಅಥವಾ ಲಿಂಗಾಯತರು, ಬ್ರಹ್ಮ ಸಮಾಜ ಮತ್ತು ಆರ್ಯ ಸಮಾಜದ ಅನುಯಾಯಿಗಳು ಎಲ್ಲರಿಗೂ ಅನ್ವಯಿಸುತ್ತದೆ. ಈ ಕಾನೂನಿನ ಅಡಿಯಲ್ಲಿ ಒಂದು ವಿವಾಹ ಕಾನೂನುಬದ್ಧ ಎನಿಸಿಕೊಳ್ಳಬೇಕಾದರೆ ಈ ಷರತ್ತುಗಳ ಪಾಲನೆಯಾಗಿರಬೇಕು: -*ಪುರುಷ ೨೧ ವರ್ಷ, ಮಹಿಳೆ ೧೮ ವರ್ಷ ವಯಸ್ಸನ್ನು ಪೂರೈಸಿರಬೇಕು,

*ವಿವಾಹ ಸಮಯದಲ್ಲಿ , ವಿವಾಹವಾಗುವ ವ್ಯಕ್ತಿಗೆ ಜೀವಂತ ಪತಿ ಅಥವಾ ಪತ್ನಿ ಇರಬಾರದು,*ವಿವಾಹಕ್ಕೆ ಕಾನೂನು ಸಮ್ಮತವಾದ ಮತ್ತು ಮುಕ್ತವಾದ ಒಪ್ಪಿಗೆ ಕೊಡಲು ಅಗತ್ಯವಾದ ಮಾನಸಿಕ ಆರೋಗ್ಯವನ್ನು ಹೊಂದಿರಬೇಕು,

*ವಧೂವರರು ನಿಷೇಧಿತ ಸಂಬಂಧಿಗಳಾಗಿರಬಾರದು, ಆದರೆ ಅಂಥ ವಿವಾಹಕ್ಕೆ ಅವರ ಸಂಪ್ರದಾಯದಲ್ಲಿ ಅನುಮತಿ ಇದ್ದಲ್ಲಿ ಅದು ಕಾನೂನಿಗೆ ವಿರುದ್ಧ ಎನಿಸಿಕೊಳ್ಳುವುದಿಲ್ಲ.*ವಿವಾಹವನ್ನು ಅವರಲ್ಲಿ ಆಚರಣೆಯಲ್ಲಿರುವ ಸಂಪ್ರದಾಯಕ್ಕೆ ಅನುಸಾರವಾಗಿ ನೆರವೇರಿಸಬೇಕು.

*ವಧೂ-ವರರು ಬೇರೆ ಬೇರೆ ಜಾತಿಗೆ ಸೇರಿದ್ದು ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ ಹಿಂದೂ ವಿವಾಹ ಅಧಿನಿಯಮವೇ ಅವರಿಗೆ ಅನ್ವಯ ವಾಗುತ್ತದೆ.*ಸಪ್ತಪದಿ ಹಿಂದೂ ಧಾರ್ಮಿಕ ವಿವಾಹ ಸಂಪ್ರದಾಯದ ಒಂದು ಕಡ್ಡಾಯ ಆಚರಣೆ. ಏಳನೆ ಹೆಜ್ಜೆ ಇಟ್ಟಾಗ ವಿವಾಹ ವಿಧಿ ಪೂರ್ಣಗೊಳ್ಳುತ್ತದೆ.ಆದರೆ ಈ ಪರಿಕಲ್ಪನೆಯೂ ಈಗ ಬದಲಾಗುತ್ತಿದೆ. ಈ ಆಚರಣೆಗಳಲ್ಲಿ ಎಲ್ಲವನ್ನೂ ಪಾಲಿಸದಿದ್ದರೂ ಅವರಿಬ್ಬರು ಪತಿ ಪತ್ನಿಯರು ಎಂಬುದನ್ನು ನ್ಯಾಯಾಲಯ ಅನೇಕ ಸಂದರ್ಭಗಳಲ್ಲಿ ಅಲ್ಲಗಳೆಯುವುದಿಲ್ಲ.

(ಮುಂದಿನ ವಾರ: ವಿವಾಹ ವಿವಾದ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.