ಲೂಸಾನ್: ಜೂನಿಯರ್ ವಿಶ್ವ ಕಪ್ ಟೂರ್ನಿಯಿಂದ ಪಾಕಿಸ್ತಾನ ಹಿಂದೆ ಸರಿದಿರುವುದರಿಂದ ಆ ಸ್ಥಾನವನ್ನು ಒಮಾನ್ ತುಂಬಲಿದೆ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಬುಧವಾರ ಪ್ರಕಟಿಸಿದೆ. ಜೂನಿಯರ್ ವಿಶ್ವ ಕಪ್ ಟೂರ್ನಿ ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ಚೆನ್ನೈ ಮತ್ತು ಮದುರೈನಲ್ಲಿ ನಡೆಯಲಿದೆ.
.ಜೂನಿಯರ್ ಹಾಕಿ ವಿಶ್ವಕಪ್ಗೆ ಭಾರತ ಅತಿಥ್ಯ: ಟೂರ್ನಿಯಿಂದ ಹಿಂದೆ ಸರಿದ ಪಾಕ್.ಭಾರತದಲ್ಲಿ ಏಷ್ಯಾಕಪ್ ಹಾಕಿ: ಪಾಕಿಸ್ತಾನ ತಂಡ ಬಾರದಿದ್ದರೆ ಬಾಂಗ್ಲಾದೇಶಕ್ಕೆ ಅವಕಾಶ.
ಪಾಕಿಸ್ತಾನ ತಂಡವು ಹೋದ ವರ್ಷ ಏಷ್ಯಾ ಜೂನಿಯರ್ ಕಪ್ ಮೂಲಕ ಈ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿತ್ತು.

ಒಮಾನ್ ಪಾಕಿಸ್ತಾನ ನಂತರದ ಸ್ಥಾನ ಪಡೆದಿತ್ತು. ಹೀಗಾಗಿ ಆ ತಂಡಕ್ಕೆ ಆಹ್ವಾನಿಸಲಾಗಿದೆ.

ಮೊದಲ ಬಾರಿಗೆ ಪುರುಷರ ಮತ್ತು ಮಹಿಳೆಯರ ಟೂರ್ನಿ ಏಕಕಾಲದಲ್ಲಿ ನಡೆಯಲಿದೆ. ತಲಾ 24 ತಂಡಗಳು ಕಣಕ್ಕಿಳಿಯಲಿವೆ.

ಮೂಲ ಡ್ರಾ ಪ್ರಕಾರ ಪಾಕಿಸ್ತಾನ ತಂಡವು, ಭಾರತ, ಚಿಲಿ, ಸ್ವಿಜರ್ಲೆಂಡ್ ಜೊತೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಇದು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಿಂದ ಪಾಕ್ ಹಿಂದೆ ಸರಿಯುತ್ತಿರುವ ಎರಡನೇ ನಿದರ್ಶನವಾಗಿದೆ. ಆಗಸ್ಟ್ 29 ರಿಂದ ಸೆಪ್ಟೆಂಬರ್ 7ರವರೆಗೆ ಬಿಹಾರದ ರಾಜಗೀರ್ನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲೂ ಪಾಕಿಸ್ತಾನ ಆಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.