ಶುಕ್ರವಾರ, ಜೂಲೈ 10, 2020
22 °C

ಹಿನ್ನೀರ ಹೊಲಗಳಲ್ಲಿ ಬೆಳೆಯುವ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿನ್ನೀರ ಹೊಲಗಳಲ್ಲಿ ಬೆಳೆಯುವ ಸಾಹಸ

ನಾರಾಯಣಪುರ ಜಲಾಶಯ ನೂರಾರು ಹಳ್ಳಿಗಳ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ನುಂಗಿ ಹಾಕಿದ್ದು ಈಗ ಇತಿಹಾಸ. ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾದಂತೆಲ್ಲ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಧನ್ನೂರ, ಅಡಿಹಾಳ, ಎಮ್ಮೆಟ್ಟಿ, ಹುಲ್ಲಳ್ಳಿ, ಕೂಡಲಸಂಗಮದ ನೂರಾರು ರೈತರು ಜಲಾಶಯದ ಹಿನ್ನೀರಿನ ತೇವಾಂಶ ಬಳಸಿಕೊಂಡು ಅಲ್ಪಾವಧಿ ಬೆಳೆಗಳನ್ನು ಬೆಳೆಯುತ್ತಾರೆ.ಫೆಬ್ರುವರಿ ತಿಂಗಳಿನಿಂದ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತ ಹೋದಂತೆ ಹಿನ್ನೀರು ಪ್ರದೇಶ ತೆರವಾಗುತ್ತ ಹೋಗುತ್ತದೆ. ಈ ತೆರವಾದ ಭೂಮಿಯಲ್ಲಿ  ರೈತರು ಸೌತೆ, ಮೆಕ್ಕೆ ಜೋಳ, ಕರಬೂಜ, ಹೀರೆ, ಬೆಂಡೆ, ಚವಳಿ, ಪಾಲಕ, ಪುಂಡಿ ಬೀಜ ಬಿತ್ತನೆಗೆ ಸಜ್ಜಾಗುತ್ತಾರೆ. ವರ್ಷವಿಡೀ ನೀರುಂಡ ಹಸಿ ಮಣ್ಣಲ್ಲಿ ಬಿತ್ತನೆ ಮಾಡುತ್ತಾರೆ.

ನೀರು ಸರಿದಂತೆ ಹಂತ ಹಂತವಾಗಿ ಬಿತ್ತನೆ ಮಾಡುತ್ತ ಹೋಗುತ್ತಾರೆ. ಏಪ್ರಿಲ್ -ಮೇ ತಿಂಗಳಲ್ಲಿ ಸುಡುವ ಬಿಸಿಲಿದ್ದರೂ ಹಿನ್ನೀರು ದಂಡೆಯ ನೂರಾರು ಎಕರೆ ಭೂಮಿ ಹಸಿರು ಹೊದ್ದು ಕಂಗೊಳಿಸುತ್ತದೆ. ಎರಡೂವರೆ ತಿಂಗಳು ಈ ಅಲ್ಪಾವಧಿ ಬೆಳೆ ಬೆಳೆಯಲು ರೈತರು ಶ್ರಮವಹಿಸಿ ದುಡಿಯುತ್ತಾರೆ.

 

ಸೌತೆ ಮತ್ತಿತರ ತರಕಾರಿಗಳನ್ನು ವಿಂಗಡಿಸಿ ಹುನಗುಂದ, ಇಲಕಲ್ಲ, ಗುಡೂರ, ಕುಷ್ಟಗಿ, ಲಿಂಗಸುಗೂರ, ಸಿಂಧನೂರ, ಮುದ್ದೇಬಿಹಾಳ, ತಾಳಿಕೋಟಿ ಮುಂತಾದ ಊರುಗಳಿಗೆ ಒಯ್ದು ಮಾರಾಟ ಮಾಡುತ್ತಾರೆ. ಕಡಿಮೆ ಅವಧಿಯಲ್ಲಿ ಕಡಿಮೆ ಬಂಡವಾಳ ಹಾಕಿ ಹಗಲು-ರಾತ್ರಿ ದುಡಿದು ಹತ್ತಿಪ್ಪತ್ತು ಗುಂಟೆಯಲ್ಲಿ ಸಾವಿರಾರು ರೂ. ನಿವ್ವಳ ಆದಾಯ ಪಡೆಯುತ್ತಾರೆ.ರೈತರ ಜಾಣ್ಮೆ ಹಾಗೂ ಶ್ರಮದ ದುಡಿಮೆ ಅನೇಕ ಜಲಾಶಯಗಳ ಹಿನ್ನೀರು ಪ್ರದೇಶಗಳ ರೈತರಿಗೆ ಮಾದರಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.