ಹಿಮಾಲಯದಲ್ಲಿನ ಪ್ರತಿಯೊಂದು ಹಿಮಪರ್ವತವೂ ಒಂದಲ್ಲಾ ಒಂದು ನದಿ, ಸರೋವರದ ತಟದಲ್ಲಿರುವುದು ವಿಶೇಷ. ಆದರೆ ಕೇದಾರ ಸರೋವರದ ದಂಡೆಯ ಮೇಲಿರುವ ‘ತಲೈ ಸಾಗರ’ ಎನ್ನುವ ಹಿಮಪರ್ವತ ಭಿನ್ನವಾದುದು. ಈ ಹಿಮಪರ್ವತದ ಒಡಲಿನಲ್ಲಿ ಬ್ರುಗುಪಂಥ ಪರ್ವತ, ಮಂದಾ ಪರ್ವತ, ಜೋಗಿನ್ ಪರ್ವತ ಹಾಗೂ ಕೇದಾರ ತಾಲ್ ಎನ್ನುವ ಪ್ರಮುಖ ಹಿಮಪರ್ವತಗಳು ಸೇರಿದಂತೆ ಹತ್ತಾರು ಸಣ್ಣಪುಟ್ಟ ಹಿಮಪರ್ವತಗಳಿವೆ. ಸಾವಿರಾರು ಅಡಿಗಳಷ್ಟು ಎತ್ತರಕ್ಕೆ ಚಾಚಿಕೊಂಡಿರುವ ಇಲ್ಲಿನ ಎಲ್ಲ ಪರ್ವತಗಳು ಆಕಾಶದೊಂದಿಗೆ ಬೆರೆತು ಹೋಗಿರುವಂತೆ ಬೆರಗುಹುಟ್ಟಿಸುತ್ತವೆ.

ತಲೈ ಸಾಗರ ಪರ್ವತ ಪರಿಸರದಲ್ಲಿ ನಳನಳಿಸುವ ಹೂಗಳನ್ನು ಹೊತ್ತುನಿಂತ ಹಸಿರು, ಚಿಲಿಪಿಲಿ ಹಕ್ಕಿಗಳು, ಹರಿಯುವ ನೀರಿನ ಲಾಸ್ಯವನ್ನು ಕಾಣಬಹುದು. ಅಂದಹಾಗೆ, ಈ ಭೂಪ್ರದೇಶ ಸಾಮಾನ್ಯ ಪ್ರದೇಶವಲ್ಲ. ದುರ್ಗಮವಾದ ಪರ್ವತ ಶ್ರೇಣಿಗಳ ಪೈಕಿ ಒಂದಾಗಿರುವ ತಲೈ ಸಾಗರ ಪರ್ವತ ಬಲು ಅಪರೂಪದ ಹಿಮಪರ್ವತ. ಈ ಪರ್ವತದ ಬುಡದಲ್ಲಿರುವ ಕೇದಾರ ಸರೋವರದ ಬಳಿ ನಿಂತುಕೊಂಡು ಸುತ್ತಮುತ್ತ ಕಣ್ಣಾಡಿಸಿದರೆ, ನಮಗೆ ಭೂಮಿಯ ಮೇಲೆ ಇದ್ದ ಅನುಭವ ಆಗುವುದಿಲ್ಲ. ಯಾವುದೋ ಅನ್ಯಗ್ರಹಮಂಡಲದಲ್ಲಿ ಇದ್ದಂತೆ ಭಾಸವಾಗುತ್ತದೆ. ಅಷ್ಟೊಂದು ವಿಶಿಷ್ಟವಾದ ಪರಿಸರ, ವಿನ್ಯಾಸ ಇಲ್ಲಿಯದು.

ಸಮುದ್ರ ಮಟ್ಟದಿಂದ 6,904 ಮೀಟರ್ (22,651 ಅಡಿ) ಎತ್ತರದಲ್ಲಿರುವ ಇದು, ಉತ್ತರ ಖಂಡದ ಘಡವಾಲ್ ಪ್ರಾಂತ್ಯದಲ್ಲಿರುವ ಪ್ರಮುಖವಾದ ಪರ್ವತ ಕೂಡ ಆಗಿದೆ. ಇದರ ಬುಡದಲ್ಲಿರುವ ಕೇದಾರ ಸರೋವರದ ಅಂಚಿಗೆ ಹೋಗಿ ನಿಲ್ಲುವುದು ಸಾಹಸಿ ಚಾರಣಿಗರಿಗೆ ದೊಡ್ಡ ಸವಾಲು. ಕಡಿದಾದ ಹಾಗೂ ಸಮತಟ್ಟಿರದ ಕಠಿಣವಾದ ಮಾರ್ಗದಲ್ಲಿ ಸಾಗಬೇಕು. ಅದು ಜೀವದೊಂದಿಗೆ ನಡೆಸುವ ಜೂಜು.

ತಲೈ ಸಾಗರ ಪರ್ವತವನ್ನು ಮೊದಲ ಬಾರಿಗೆ ಸಂರ್ಪೂಣವಾಗಿ ಏರಿದ ಹಿರಿಮೆ ಅಮೆರಿಕಾದ ಚಾರಣಿಗರಿಗೆ ಸಲ್ಲುತ್ತದೆ. 1970ರಿಂದ ಸತತವಾಗಿ ಈ ಪರ್ವತವನ್ನು ಏರಲು ಪ್ರಯತ್ನ ನಡೆಸಿದ ಅಮೆರಿಕಾದ ಚಾರಣಿಗರು 1979ರಲ್ಲಿ ಮೊದಲ ಬಾರಿಗೆ ಏರಿದರು.

ತದನಂತರ ಕೊರಿಯಾ ದೇಶದ ಚಾರಿಣಿಗರು ಕೂಡ ತಲೈ ಸಾಗರ ಪರ್ವತವನ್ನು ಏರಿದರು. ಭಾರತೀಯರು ಈ ಪರ್ವತವನ್ನು ಏರಿದ್ದು 2008ರಲ್ಲಿ. ಕೆಲವು ಸಾಹಸಿಗರು ಈ ಪರ್ವತವನ್ನು ಏರಿ ಕೆಳಗೆ ಇಳಿಯುವಂತಹ ಕೊನೆ ಗಳಿಗೆಯಲ್ಲಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ.

ಈ ಪರ್ವತ ಚಾರಣಕ್ಕೆ ಹೋಗಬೇಕೆಂದರೆ ಮೊದಲಿಗೆ ದೆಹಲಿಗೆ ಹೋಗಬೇಕು. ಅಲ್ಲಿಂದ ಹರಿದ್ವಾರಕ್ಕೆ, ನಂತರ ಉತ್ತರ ಕಾಶಿಗೆ ತೆರಳಬೇಕು. ನಂತರ ಗಂಗೊತ್ರಿ ಮಾರ್ಗವಾಗಿ ಬೋಜ್ಕಾರಕ್ ಎಂಬಲ್ಲಿಗೆ ಹೋಗಬೇಕು. ಈ ಬೋಜ್ಕಾರಕ್ ಪ್ರದೇಶವು ಹಸಿರುಮಯವಾಗಿದ್ದು, ಇಲ್ಲಿ ತಾಳೆ ಮರಗಳು ಹೆಚ್ಚಾಗಿವೆ. ಬೋಜ್ಕಾರಕ್ ಪ್ರದೇಶದಿಂದ ಚಾರಣವನ್ನು ಕೈಗೊಂಡು ಕೇದಾರ ಕಾರಕ್ ಎಂಬಲ್ಲಿಗೆ ಹೋಗಬೇಕು. ಅಲ್ಲಿಂದ ಸ್ವಲ್ಪ ದೂರ ಕ್ರಮಿಸಿದರೆ ಕೇದಾರ ಸರೋವರ ತಲುಪಬಹುದು. ಆಗಲೇ ತಲೈ ಸಾಗರ ಪರ್ವತ ಕಾಣಿಸುತ್ತದೆ.

ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ಎತ್ತರದಲ್ಲಿ (700 ಅಡಿಗಳಷ್ಟು ಚಿಕ್ಕದು) ಚಿಕ್ಕದಾಗಿರುವ ಈ ತಲೈ ಸಾಗರ ಪರ್ವತವನ್ನು ಏರುವುದು ಸುಲಭವಂತೂ ಅಲ್ಲ. ವಿಶೇಷವೆಂದರೆ ಈ ಪರ್ವತ ಚೀನಾ ದೇಶಕ್ಕಾಗಲಿ, ಪಾಕಿಸ್ತಾನಕ್ಕಾಗಲಿ, ನೇಪಾಳ ದೇಶಕ್ಕಾಗಲಿ ಹೊಂದಿಕೊಂಡಿಲ್ಲ. ಸಾಹಸಿ ಚಾರಣಿಗರಿಗೆ ಸವಾಲಾಗಿರುವ ಈ ಪರ್ವತ ಸಂಪೂರ್ಣ ಭಾರತದ ಭೂಪ್ರದೇಶದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.