ಶನಿವಾರ, ಮೇ 15, 2021
25 °C

ಹಿರ್ಗಾನ ಗ್ರಾಮ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: ಪಂಚಾಯತ್‌ರಾಜ್ ಅಧಿನಿಯ ಮದಂತೆ ವರ್ಷಕ್ಕೆ 2 ಬಾರಿ ಕಡ್ಡಾಯ ವಾಗಿ ಗ್ರಾಮಸಭೆ ನಡೆಸಲೇಬೇಕು. ಕೇವಲ ಗ್ರಾಮಸಭೆ ನಡೆದರೆ ಸಾಲದು, ಬದಲಾಗಿ ಗ್ರಾಮಸಭೆಯ ಆರಂಭದ ವರದಿ ಮಂಡನೆಯಿಂದ ಅಧ್ಯಕ್ಷೀಯ ಭಾಷಣದವರೆಗೂ ಎಲ್ಲಾ ನಡಾವಳಿ ಗಳನ್ನು ಮಾರ್ಗದರ್ಶಕ ಅಧಿಕಾರಿ ಚಾಚೂ ತಪ್ಪದಂತೆ ನೋಡಿಕೊಳ್ಳಬೇಕು. ಆದರೆ ಕಾರ್ಕಳ ತಾಲ್ಲೂಕಿನ ಹಿರ್ಗಾನ ಗ್ರಾಮ ಪಂಚಾಯತಿ ಬುಧವಾರ ನಡೆಸಿದ ಪ್ರಥಮ ಗ್ರಾಮಸಭೆಯಲ್ಲಿ ವರದಿ ಮಂಡನೆ ಮಾಡದೇ ಪಿಡಿಓ ಹಾಗೂ ಅಧ್ಯಕ್ಷರು ಸಭೆಯ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.ಸಭೆಯ ಅಧ್ಯಕ್ಷತೆಯನ್ನು ಪಂಚಾ ಯತಿ ಅಧ್ಯಕ್ಷೆ ರೇವತಿ ಶೆಟ್ಟಿ ವಹಿಸಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಲ್ಲರನ್ನೂ ಸ್ವಾಗತಿಸಿದ ಬಳಿಕ ಕಾರ್ಯ ದರ್ಶಿ ಸುಮಾ ಪ್ರಸಕ್ತ ಸಾಲಿನಲ್ಲಿ ಅನುಮೋದನೆಯಾದ  ಕ್ರಿಯಾ ಯೋಜನೆಗಳ ಪಟ್ಟಿಯನ್ನು ಓದಿದರು.ನಂತರ ಗ್ರಾಮಸ್ಥರು ಉದ್ಯೋಗ ಖಾತರಿ, ಪಡಿತರ ಚೀಟಿ ಸಮಸ್ಯೆ, ರಸ್ತೆ ಮುಂತಾದ ಸಮಸ್ಯೆಗಳ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದರು. ಮಾರ್ಗದರ್ಶಕ ಅಧಿಕಾರಿ ಪದ್ಮನಾಭ ಭಟ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದು, ಅವರ ಪರವಾಗಿ ಅಸ್ಪಷ್ಟ ಇಲಾಖಾ ಮಾಹಿತಿ ನೀಡಿದರು.ಬಳಿಕ ತಾಲ್ಲೂಕು ಪಂಚಾಯಿತಿ ಸದಸ್ಯ ವಿಕ್ರಮ ಹೆಗ್ಡೆ,ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಅಧಿಕಾರಿ ಮಾತನಾಡಿರು.

ಪಂಚಾಯತ್‌ರಾಜ್ ನಿಯಮಾವ ಳಿಯಂತೆ ಗ್ರಾಮಸಭೆಯಲ್ಲಿ ಹಿಂದಿನ ಸಾಲಿನಲ್ಲಿ ಪೂರ್ಣಗೊಳಿಸಿದ ಕಾಮ ಗಾರಿಗಳ ಖರ್ಚು ವೆಚ್ಚ ಕುರಿತ ಸಮಗ್ರ ವರದಿಯನ್ನು ಮಂಡಿಸಿ ಬಳಿಕ ಆ ವರದಿಯ ಮೇಲಿನ ಚರ್ಚೆಯಾಗಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯತಿ ಅಧ್ಯಕ್ಷರು ವರದಿ ಮಂಡಿಸುವಂತೆ ಪಿಡಿಓ ಅವರಿಗೆ ಸೂಚಿಸುವ ಗೋಜಿಗೂ ಹೋಗದೇ ಸಭೆಯನ್ನು ಮುಂದುವರಿಸಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು.ವರದಿ ಮಂಡನೆ ಕಡ್ಡಾಯವಲ್ಲ: ವರದಿ ಮಂಡನೆಯಾಗದ ಕುರಿತು ಮಾಧ್ಯಮದವರು ಪಿಡಿಓ ಪ್ರವೀಣ್ ಅವರನ್ನು ಪ್ರಶ್ನಿಸಿದಾಗ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಕಾಮಗಾರಿಗಳು ನಡೆದಿಲ್ಲ. ಅಲ್ಲದೇ ಈ ಹಿಂದಿನ ವಿಶೇಷ ಗ್ರಾಮಸಭೆಯಲ್ಲಿ ವರದಿ ಮಂಡನೆಯಾಗಿದ್ದರಿಂದ ಈ ಗ್ರಾಮಸಭೆಯಲ್ಲಿ ವರದಿಯನ್ನು ಮಂಡಿಸಬೇಕಾಗಿಲ್ಲ ಎಂದು  ಹಾರಿಕೆಯ ಉತ್ತರ ನೀಡಿದರು. ಆದರೆ ಚುನಾವಣೆಗೆ ಮುಂಚಿನ ಏಪ್ರಿಲ್ 1, 2012ರಿಂದ 2013 ಮಾರ್ಚ್ 19ರವರೆಗಿನ ಕಾಮ ಗಾರಿಗಳ ವರದಿಯನ್ನು ಮಂಡಿಸಲು ಅವಕಾಶವಿದೆ.ಶಿಷ್ಟಾಚಾರ ಉಲ್ಲಂಘನೆಯಾದರೆ ಅಧ್ಯಕ್ಷ ಹಾಗೂ ಪಿಡಿಓಗಳೇ ಹೊಣೆ:

ವರ್ಷಕ್ಕೆ 2 ಬಾರಿ ಕಡ್ಡಾಯವಾಗಿ ಗ್ರಾಮಸಭೆ ನಡೆಯಲೇಬೇಕು. ಅಲ್ಲದೇ ಗ್ರಾಮ ಸಭೆಯಲ್ಲಿ ನಡೆಯಬೇಕಾಗಿರುವ ನಡಾವಳಿಗಳ ಬಗ್ಗೆ ಪಂಚಾಯತ್‌ರಾಜ್ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿ ಸಲಾಗಿದೆ. ಹಿರ್ಗಾನ ಗ್ರಾಮಸಭೆಯಲ್ಲಿ ವರದಿ ಮಂಡನೆ ಯಾಗದಿರುವುದು ಗ್ರಾಮಸಭೆ ಶಿಷ್ಟಾಚಾರ  ಉಲ್ಲಂಘಿಸ ಲಾಗಿದೆ.ಈ ಪ್ರಕರಣಕ್ಕೆ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಓಗಳೇ ನೇರ ಹೊಣೆ. ಪ್ರಕರಣದ ಕುರಿತು ತನಗೆ ಮಾಹಿತಿಯಿಲ್ಲ. ತಕ್ಷಣ  ಮಾಹಿತಿ ಪಡೆಯುವುದಾಗಿ ತಾಲ್ಲೂಕು ಪಂಚಾ ಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್ ತಿಳಿಸಿದ್ದಾರೆ. ಹಿರ್ಗಾನದಲ್ಲಿ ನಡೆದ ಗ್ರಾಮಸಭೆಗೆ ಇಲಾಖೆಯ ಅಧಿಕಾರಿಗಳೇ ಹೆಚ್ಚಿನವರ ಗೈರು ಹಾಜರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.