ಬುಧವಾರ, ಜೂನ್ 23, 2021
28 °C

ಹೀರೊಯಿನ್ ಚಿತ್ರಕ್ಕೆ ಶಿಲ್ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀರೊಯಿನ್ ಚಿತ್ರಕ್ಕೆ ಶಿಲ್ಪಿ

ಮಧುರ್ ಭಂಡಾರ್ಕರ್ ಚಿತ್ರ ಅಂದ್ರೆ ಸಾಕು, ಪಾತ್ರಗಳ ಆಯ್ಕೆಯ ಹಂತದಿಂದಲೇ ಸುದ್ದಿಯಲ್ಲಿರುತ್ತದೆ. ಕಳೆದ ವರ್ಷದಿಂದಲೂ ಸುದ್ದಿ ಮಾಡುತ್ತಿರುವ ಚಿತ್ರ ಮಧುರ್ ಅವರ `ಹೀರೊಯಿನ್~.ಮೊದಲು ಐಶ್ವರ್ಯ ರೈ ನಟಿಸಲಿದ್ದಾಳೆ ಎಂಬ ಸುದ್ದಿ ಹರಡಿತ್ತು. ಚಿತ್ರರಂಗದಲ್ಲಿ `ಹೀರೊಯಿನ್~ ತಲ್ಲಣ ತೊಳಲಾಟಗಳ ಚಿತ್ರ ಇದು ಎಂದೇ ಹೇಳಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಐಶ್ವರ್ಯ ರೈ ಗರ್ಭಿಣಿ ಎಂದು ತಿಳಿಸಿ, ಮಧುರ್ ಚಿತ್ರವನ್ನು ನಿರಾಕರಿಸಿದ್ದರು. ಹೆರಿಗೆಯವರೆಗೂ ಕಾಯುವುದಾಗಿ ಮಧುರ್ ಹೇಳಿದ್ದರು.ಹೆರಿಗೆಯ ನಂತರ ಐಶ್ವರ್ಯ ಇನ್ನೊಂದು ಚಿತ್ರಕ್ಕೆ ಸಿದ್ಧಳಾಗುವ ಮುಂಚೆಯೇ `ಹಿರೋಯಿನ್~ ಚಿತ್ರಕ್ಕೆ ಪಾತ್ರಗಳ ಆಯ್ಕೆಯಲ್ಲಿ ಮಧುರ್ ತೊಡಗಿದ್ದರು. ಇದು ಬಾಲಿವುಡ್‌ನಲ್ಲಿ ಹಲವರು ಹುಬ್ಬೇರಿಸುವಂತೆ ಮಾಡಿತ್ತು. ಮೊನಿಷಾ ಕೊಯಿರಾಲಾ ನಟಿಸಲಿದ್ದಾಳೆ ಎಂಬ ಸುದ್ದಿಯೂ ಗಾಳಿಯಂತೆ ಬೀಸಿತು. ತಣ್ಣಗಾಯಿತು.ತಾಜಾ ಸುದ್ದಿ ಎಂದರೆ ಹೀರೊಯಿನ್ ಚಿತ್ರದ ಒಂದೆರಡು ದೃಶ್ಯಗಳಲ್ಲಿ ಈಗಾಗಲೇ ಕರೀನಾ ನಟಿಸಿದ್ದಾಳೆ. ಮುಖ್ಯಪಾತ್ರವನ್ನು ಕರೀನಾ ನಿರ್ವಹಿಸುತ್ತಿದ್ದು ಇನ್ನೊಂದು ಪಾತ್ರಕ್ಕೆ ಶಿಲ್ಪಿ ಶರ್ಮಾ ಆಯ್ಕೆಯಾಗಿದ್ದಾಳೆ.ಜೋ ಬೊಲೆ ಸೋ ನಿಹಾಲ್‌ನಲ್ಲಿ ಪಂಜಾಬಿ ಹುಡುಗಿಯಾಗಿ ಗಮನ ಸೆಳೆದಿದ್ದ ರೂಪದರ್ಶಿ ಶಿಲ್ಪಿ ಶರ್ಮಾ `ಸ್ಟೈಲ್~ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.`ಮಧುರ್ ಭಂಡಾರ್ಕರ್ ನಮ್ಮ ಕುಟುಂಬಕ್ಕೆ ಅತಿ ಆತ್ಮೀಯರಾದವರು. ತಮ್ಮ ಹೀರೊಯಿನ್ ಚಿತ್ರಕ್ಕೆ ಗ್ಲಾಮರಸ್ ಯುವತಿಯ ತಲಾಶ್‌ನಲ್ಲಿದ್ದರು. ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂದು ಅವರಿಗೆ ಅನ್ನಿಸಿದೆಯಂತೆ~ ಎಂದೂ ಶಿಲ್ಪಿ ಹೇಳಿಕೊಂಡಿದ್ದಾರೆ.`ಮಧುರ್ ಭಂಡಾರ್ಕರ್ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಕತೆಯ ಬಗ್ಗೆ ಏನೂ ಹೇಳಲಾರೆ~ ಎಂದೂ ನುಣುಚಿಕೊಂಡಿರುವ ಶಿಲ್ಪಿ ತಮ್ಮದು ಮುಖ್ಯ ಪಾತ್ರ ಎಂದು ಹೇಳುವುದನ್ನು ಮಾತ್ರ ಮರೆತಿಲ್ಲ.`ಸದ್ಯ ಪಾತ್ರದ ಅಗತ್ಯಕ್ಕೆ ತಕ್ಕಂತೆ ಇನ್ನಷ್ಟು ಸಪೂರ ಮತ್ತು ಫಿಟ್ ಆಗಲು ಮಧುರ್ ಸಾಹೇಬರು ನಿರ್ದೇಶಿಸಿದ್ದಾರೆ. ಟ್ರೇನರ್ ಜೊತೆಗೂಡಿ, ಆ ಕಾರ್ಯದಲ್ಲಿ ನಿರತಳಾಗಿದ್ದೇನೆ. ಒಂದಷ್ಟು ತೂಕ ಇಳಿಸಬೇಕಿದೆ.

 

ಈ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕಿದೆ. ಹಾಗಾಗಿ ತೂಕ ಇಳಿಸಲು ಕಸರತ್ತು ಸಹ ಮಾಡುತ್ತಿದ್ದೇನೆ ಎಂದೂ ಶಿಲ್ಪಿ ಹೇಳಿದ್ದಾರೆ. ಚಿತ್ರದಲ್ಲಿ ಶಹನಾ ಗೋಸ್ವಾಮಿ ಸಹ ನಟಿಸುತ್ತಿದ್ದಾರೆ. ಅಲ್ಲಿಗೆ ಅಂತೂ `ಹೀರೊಯಿನ್~ ಚಿತ್ರದ ಭೂಮಿಕೆಗೆ ತಲಾಶು ಕೊನೆಗೊಂಡಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.