ಹುಂಡೈ: ಇಆನ್ ಕಾರು ಮಾರುಕಟ್ಟೆಗೆ

7

ಹುಂಡೈ: ಇಆನ್ ಕಾರು ಮಾರುಕಟ್ಟೆಗೆ

Published:
Updated:

ನವದೆಹಲಿ (ಪಿಟಿಐ): ದೇಶಿ ಮಾರುಕಟ್ಟೆಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿರುವ  ಪುಟ್ಟ  ಕಾರು `ಇಆನ್~ ಅನ್ನು  ಹುಂಡೈ ಮೋಟಾರ್ ಕಂಪನಿ ಗುರುವಾರ ಇಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಕಾರಿನ ವಿನ್ಯಾಸ ರೂಪಿಸಲಾಗಿದೆ ಎಂದು ಹುಂಡೈ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಚ್. ಡಬ್ಲ್ಯು ಪರ್ಕ್ ಹೇಳಿದ್ದಾರೆ.ಮಾರುತಿ ಸುಜುಕಿಯ ಆಲ್ಟೊಗೆ ಇದು ಸ್ಪರ್ಧೆ ಒಡ್ಡಲಿದೆ ಎಂದೂ ಹೇಳಲಾಗಿದೆ.  `ಇಆನ್~ ದೆಹಲಿ ಎಕ್ಸ್‌ಷೋ ರೂಂ ಬೆಲೆ  ರೂ. 2.69 ಲಕ್ಷದಿಂದ ರೂ.3.71 ಲಕ್ಷದವರೆಗೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry