ಹುಬ್ಬಳ್ಳಿ: ಯುವ ಉದ್ಯಮಿಗೆ ಕೇಂದ್ರದ ಕೇಂದ್ರದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಇಲಾಖೆ (ಎಂಎಸ್ಎಂಇ) ನೀಡುವ ಪ್ರಶಸ್ತಿ ಹುಬ್ಬಳ್ಳಿಯ ಗೊಂಬಿ ಸಾಫ್ಟ್ವೇರ್ ಪ್ರೈವೆಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹರ್ಷ ಮಹಾಬಲ ಅವರಿಗೆ ಲಭಿಸಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಎಂಎಸ್ಎಂಇ ಸಚಿವ ವೀರಭದ್ರ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ಇಲಾಖೆಯ ಕಾರ್ಯದರ್ಶಿ ಉದಯ ಕುಮಾರ ವರ್ಮ ಹಾಗೂ ನಾರು ಮಂಡಳಿ ಅಧ್ಯಕ್ಷ ಬಿ.ಎಸ್. ವಿಜಯರಾಘವನ್ ಉಪಸ್ಥಿತರಿದ್ದರು.

ಹರ್ಷ ಅವರನ್ನು ವಿಶೇಷ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದ್ದು ಸಣ್ಣ ವಯಸ್ಸಿನಲ್ಲಿ ಈ ಹಿರಿಮೆಗೆ ಪಾತ್ರರಾಗುತ್ತಿರುವ ಅಪರೂಪದ ಉದ್ಯಮಿಯಾಗಿದ್ದಾರೆ ಅವರು.

ಶೈಕ್ಷಣಿಕ ಪ್ರಯೋಗಗಳ ಹಿನ್ನೆಲೆಯೊಂದಿಗೆ ಆರಂಭವಾದ ಗೊಂಬಿ ಸಾಫ್ಟ್ವೇರ್, ವಿವಿಧ ಸಂಸ್ಥೆಗಳ ನೆರವಿನಿಂದ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ವಿವಿಧ ವಿಶ್ವವಿದ್ಯಾಲಯಗಳು ಈ ಸಂಸ್ಥೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆ, ಐಟಿ ಪಾರ್ಕ್ನಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಶಾಖೆಯನ್ನು ಹೊಂದಿದೆ. ಸಿಂಗಪುರದಲ್ಲಿ ಸದ್ಯದಲ್ಲೇ ಹೊಸ ಶಾಖೆ ತೆರೆಯಲಾಗುವುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಕೆ.ಕೆ. ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.