ಶನಿವಾರ, ಏಪ್ರಿಲ್ 17, 2021
23 °C

ಹೂಗಾರ ಸಮಾಜಕ್ಕೆ 2ಎ ಪ್ರಮಾಣಪತ್ರ - ಮುಖ್ಯಮಂತ್ರಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂಗಾರ ಸಮಾಜಕ್ಕೆ 2ಎ ಪ್ರಮಾಣಪತ್ರ - ಮುಖ್ಯಮಂತ್ರಿ ಭರವಸೆ

ಹುಬ್ಬಳ್ಳಿ: `ಹೂಗಾರ ಸಮಾಜದವರಿಗೆ `2ಎ~ ಪ್ರಮಾಣಪತ್ರ ನೀಡಲು ಇರುವ ಕಾನೂನು ತೊಡಕುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ಇಲ್ಲಿ ಭರವಸೆ ನೀಡಿದರು.ಇಲ್ಲಿನ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ಹೂಗಾರ ಸಮಾಜದ ರಾಜ್ಯ ಮಟ್ಟದ ಪ್ರಥಮ ಸಮಾವೇಶ ಉದ್ಘಾಟಿಸಿದ ಅವರು, ಈ ಸಮುದಾಯದವರಿಗೆ  ಬಡ್ಡಿ ರಹಿತ ಸಾಲ ನೀಡಿಕೆ ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.`ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಅವರು ತಮ್ಮ ಕಾಲಿನ ಮೇಲೆ ನಿಂತುಕೊಳ್ಳಲು ಸಾಧ್ಯ. ಕೇವಲ ಸರ್ಕಾರದಿಂದ ಜನರ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಸಾಲ ಮಾಡಿಯಾದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದರು.ಲಿಂಗಾಯತ ಸಮುದಾಯದ ಅವಿಭಾಜ್ಯ ಅಂಗವಾಗಿರುವ ಹೂಗಾರ ಸಮಾಜಕ್ಕೆ ಈವರೆಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಸಂಘಟಿತರಾಗದಿದ್ದರೆ ನಿಮ್ಮ ಕೂಗು ಯಾವ ಸರ್ಕಾರಕ್ಕೂ ಕೇಳುವುದಿಲ್ಲ. ಮೊದಲು ಸಂಘಟಿತರಾಗಿ ಎಂದು ಕಿವಿಮಾತು ಹೇಳಿದರು.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹಾಗೂ ಜ್ಞಾನೇಶ್ವರ ವಿಷ್ಣು ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಶರಣ ಮಾದಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.