ಹೂಡಿಕೆಗೆ ಉತ್ತೇಜನ ಅರ್ಥನೀತಿ ಬದಲಾವಣೆ ?

ಬುಧವಾರ, ಜೂಲೈ 24, 2019
27 °C

ಹೂಡಿಕೆಗೆ ಉತ್ತೇಜನ ಅರ್ಥನೀತಿ ಬದಲಾವಣೆ ?

Published:
Updated:

ಸಿಂಗಪುರ (ಪಿಟಿಐ): ವಿದೇಶಿ ಹೂಡಿಕೆ ಆಕರ್ಷಿಸಲು ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕ ನೀತಿಯಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆರ್ಥಿಕ ಅಭಿವೃದ್ಧಿ ಸಾಧಿಸಲು ಭಾರತಕ್ಕೆ ವಿದೇಶಿ ಹೂಡಿಕೆಯ ಅಗತ್ಯವಿದೆ. ಹಾಗಾಗಿ ಸಿಂಗ್ ಅವರು ಅರ್ಥ ನೀತಿಯಲ್ಲಿ ಬದಲಾವಣೆ ತರುವ ಸಾಧ್ಯತೆಯಿದೆ ಎಂದು ಎಡಿಬಿ ಪ್ರಾದೇಶಿಕ ಆರ್ಥಿಕ ವಿಭಾಗದ ಮುಖ್ಯಸ್ಥ ಇವಾನ್ ಜೆ ಅಜೀಜ್ ಹೇಳಿದ್ದಾರೆ.ಏಷ್ಯಾ ಆರ್ಥಿಕತೆ ಕುರಿತ ವರದಿಯನ್ನು ಇಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಜಿಡಿಪಿ (ನಿವ್ವಳ ಆಂತರಿಕ ಉತ್ಪನ್ನ) 2012ನೇ ಆರ್ಥಿಕ ವರ್ಷದಲ್ಲಿ ಶೇ 6.5ರಷ್ಟಾಗುವ ಸಾಧ್ಯತೆಯಿದೆ. 2013ರಲ್ಲಿ 7.3ರಷ್ಟಾಗುವ ಸಾಧ್ಯತೆಯಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry