ಹೈದರಾಬಾದ್ (ಐಎಎನ್ಎಸ್): ವಿಮಾನದಲ್ಲೇ ತೀವ್ರ ಹೃದಯಾಘಾತಕ್ಕೀಡಾದ ಪ್ರಯಾಣಿಕರೊಬ್ಬರು ನಂತರ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ಶನಿವಾರ ನಡೆದಿದೆ.

ಜೆಟ್ ಏರ್ವೇಸ್ ವಿಮಾನದಲ್ಲಿ ನವದಹೆಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಉತ್ತಮ್ ಸಿಂಗ್ ಹೃದಯಾಘಾತದಿಂದ ಸಾವಿಗೀಡಾದವರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಉತ್ತಮ್ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡಿತು.

ತಕ್ಷಣವೇ ಈ ವಿಷಯವನ್ನು ಪೈಲಟ್ಗೆ ತಿಳಿಸಲಾಯಿತು. ಏರ್ಟ್ರಾಫಿಕ್ ಕಂಟ್ರೋಲರ್ ಜತೆ ಮಾತನಾಡಿದ ಪೈಲಟ್ ತುರ್ತಾಗಿ ವಿಮಾನವನ್ನು ಮಾರ್ಗಮಧ್ಯದಲ್ಲೇ ಹೈದಾರಾಬಾದ್ನ ರಾಜೀವ್ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಸಿದರು.

ತಕ್ಷಣವೇ ಹೈದಾರಾಬಾದ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ನೀಡುತ್ತಿರುವ ಸಮಯದಲ್ಲೇ ಸಿಂಗ್ ಸಾವನ್ನಪ್ಪಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.