ಶುಕ್ರವಾರ, ಮೇ 20, 2022
23 °C

ಹೃನ್ಮನ ಸೆಳೆದ ಸಾಂಸ್ಕೃತಿಕ ಸೌರಭ

ಪ್ರಜಾವಾಣಿ ವಾರ್ತೆ/ ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬಿಡುವಿರದ ಇಂದಿನ ದಿನಮಾನದಲ್ಲಿಯೂ ಸಂಗೀತ, ನೃತ್ಯದಂತಹ ಕಲೆಗಳು ಜನರನ್ನು ಆಕರ್ಷಿಸುತ್ತವೆ. ಅಂತಹ ಕಲೆಗಳನ್ನು ಆಸ್ವಾದಿಸಲು ಜನರೂ ಬಯಸುತ್ತಾರೆ. ಏಕತಾನತೆಯಿಂದ ಹೊರಬರಲು, ನಿತ್ಯದ ಜಂಜಡಗಳನ್ನು ಮರೆತು ಮೈ-ಮನಕ್ಕೆ ಚೇತನ ನೀಡಲು ಇವು ಸಹಕಾರಿ. ಏಕತಾನತೆಯನ್ನು ದೂರ ಮಾಡಿ, ಎಲ್ಲರೂ ಸಂಗೀತ-ನೃತ್ಯ ಆಸ್ವಾದಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಜನತೆಗೆ ಅವಕಾಶ ಒದಗಿಸಿ ಕೊಟ್ಟಿತ್ತು.ಕಿನ್ನಾಳ ಮೂಲದ ಶಾರದಾ ಸಂಗೀತ, ಕಲಾ ಶಿಕ್ಷಣ ಸಂಸ್ಥೆ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸಹಯೋಗದಲ್ಲಿ ಈಚೆಗೆ ಶ್ರೀಮಠದ ಆವರಣದಲ್ಲಿ ನಡೆದ `ಸಾಂಸ್ಕೃತಿಕ ಸೌರಭ~ ಎಂಬ ಕಾರ್ಯಕ್ರಮ ಕಲಾ ಪ್ರೇಮಿಗಳಿಗೆ ರಸದೌತಣ ನೀಡಿದ್ದಂತೂ ನಿಜ.ಮೊದಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಂತರ ಬೆಂಗಳೂರು ಮೂಲದ ನಾಟ್ಯೇಶ್ವರ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ರೂಪಕ.ಈ ಶಾಲೆಯ ಮುಖ್ಯಸ್ಥ ಸತೀಶ ಬಾಬು ಹಾಗೂ ಶಿಷ್ಯೆಯರು ಪ್ರದರ್ಶಿಸಿದ  ಶಿವ-ಪಾರ್ವತಿ ನೃತ್ಯ ಹಾಗೂ ಗೊಂಬೆಯ ವೈಭವ ಎಂಬ ನೃತ್ಯ ರೂಪಕ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಪ್ರಕಾರದ ಬೊಂಬೆಗಳನ್ನು ಪಾತ್ರಧಾರಿಗಳನ್ನಾಗಿ ಮಾಡಿ ಅವುಗಳಿಂದ ನೃತ್ಯ ಮಾಡಿಸುವುದು, ನಟಿಸುವಂತೆ ಮಾಡಿ ರಂಜಿಸುವುದು ಸಾಮಾನ್ಯ. ಆದರೆ, ನಾಟ್ಯೇಶ್ವರ ನೃತ್ಯ ಶಾಲೆಯ ಕಲಾವಿದರು ಈ ನೃತ್ಯರೂಪಕದಲ್ಲಿ ಬೊಂಬೆಗಳೇ ಆಗಿದ್ದರು!ನೃತ್ಯರೂಪಕ ನೋಡಿದ ಯಾರೂ ಪಾತ್ರಧಾರಿಗಳು ನಿಜವಾದ ಬೊಂಬೆಗಳೇ ಅಚ್ಚರಿಪಡುವಷ್ಟು ಅಚ್ಚುಕಟ್ಟು ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.ಕೊಯಿಮತ್ತೂರಿನ ರಮೇಶ ಕುಲಕರ್ಣಿ ಅವರು ಗಾಯನ ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶ. ರಾಗ ಪೂರಿಯ ಕಲ್ಯಾಣ ತಿನ್‌ತಾಲ್ ಹಾಗೂ ತರಾನ, ದಾಸರ ಪದಗಳನ್ನು ಪ್ರಸ್ತುತ ಪಡಿಸಿ ಮುದ ನೀಡಿದರು.ವೀರೇಶ ಹಿಟ್ನಾಳ ಅವರಿಂದ ಹಾರ್ಮೋನಿಯಂ ಸಾಥ್, ಶರಣಕುಮಾರ ಗುತ್ತರಗಿ, ಶ್ರೀನಿವಾಸ ಜೋಷಿ, ಶಿವಲಿಂಗಪ್ಪ ಕಿನ್ನಾಳ, ಬಸವರಾಜ ಇಟಗಿ ತಬಲಾ ಸಾಥ್ ನೀಡಿ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು.ಸಂಗೀತ ಕಾರ್ಯಕ್ರಮದಲ್ಲಿ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಕಲಾವಿದ ಲಚ್ಚಣ್ಣ ಕಿನ್ನಾಳ, ಗಂಗಾಧರ.ಜಿ.ಅರಳಿಕಟ್ಟಿ, ವಾದಿರಾಜ ಪಾಟೀಲ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.