ಶನಿವಾರ, ಜೂನ್ 19, 2021
26 °C

ಹೆಚ್ಚಿನ ಅಧಿಕಾರ ಬೇಡ, ಕಾನೂನಿಗೆ ತಿದ್ದುಪಡಿ ಸಾಕು: ಮುಖ್ಯ ಚುನಾವಣಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ (ಪಿಟಿಐ):  ಚುನಾವಣಾ ನೀತಿ ಸಂಹಿತೆ ಬದಲಿಸುವ ಅಗತ್ಯವಿದೆ ಇತ್ತೀಚೆಗೆ ಕೆಲ ಸಚಿವರು ಹೇಳಿದ ವಿವಾಧಾತ್ನಕ ಹೇಳಿಕೆಗೆ ಪ್ರತ್ಯುತ್ತರವಾಗಿ ~ಚುನಾವಣಾ ಕಾನೂನಿಗೆ ಹೆಚ್ಚಿನ ಅಧಿಕಾರದ ಅಗತ್ಯವಿಲ್ಲ ಆದರೆ ಇರುವ ಕಾನೂನಿಗೆ ಇನ್ನಷ್ಟು ಬಲ ನೀಡುವ ಅಗತ್ಯವಿದೆ~ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು ~ಕಾನೂನು ಪ್ರಕಾರ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಬೇಕಾದ ಎಲ್ಲಾ ಸೌಲಭಗಳು ಆಯೋಗದ ಬಳಿ ಇವೆ. ಹೀಗಾಗಿ ಅದಕ್ಕೆ ಹೆಚ್ಚಿನ ಅಧಿಕಾರ ಅಗತ್ಯವಿಲ್ಲ. ಈಗಾಗಲೇ ಇರುವ ಕಾನೂನನ್ನು ಪರಿಪೂರ್ಣವಾಗಿ ಬಳಸಿ ಅದು ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ~ ಎಂದು ತಿಳಿಸಿದರು.

~ಸಧ್ಯ ಚುನಾವಣಾ ಕಾನೂನು ಉಲ್ಲಂಘಿಸಿದವರಿಗೆ ರೂ. 500 ದಂಡ ವಿಧಿಸಲಾಗುತ್ತಿದೆ. ಆದರೆ ದಂಡದ ಮೊತ್ತವನ್ನು ಸಧ್ಯದ ಪರಿಸ್ಥಿತಿಗೆ ತಕ್ಕಂತೆ ಮತ್ತಷ್ಟು ಹೆಚ್ಚಿಸಬೇಕಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.