ಹೆಣ್ಣಿಗೆ ಸಮಾನ ಗೌರವ ಸಿಗಲಿ
`ವಿಧವೆಯರಿಗೆ ನೀಡಿದ ಗೌರವ~ ಹಾಗೂ `ಸಾಹಿತ್ಯ ಸಮ್ಮೇಳನದಲ್ಲೇಕೆ ಮೌಢ್ಯ~? (ವಾವಾ ಸೆ. 29) ಬರಹಗಳು ಬಹಳ ಅರ್ಥ ಪೂರ್ಣವಾಗಿವೆ.
ಹಿಂದಿನಿಂದಲೂ ಹೆಣ್ಣಿಗೆ ಯಾವುದೇ ಶುಭಕಾರ್ಯದಲ್ಲಿ ಅಗ್ರಸ್ಥಾನ. ಹೆಣ್ಣೆ ಸಮಾಜದ, ಸಂಸಾರದ ಕಣ್ಣು ಎಂದೆಲ್ಲಾ ಹೇಳುತ್ತಾರೆ.
ಮನೆಯಲ್ಲಿ ಹೆಣ್ಣು ಶಿಶು ಜನಿಸಿದಾಕ್ಷಣ `ಲಕ್ಷ್ಮಿ~ ಜನಿಸಿದ್ದಾಳೆ ಎಂದು ಹೇಳುತ್ತಾರೆ. ಕುಂಕುಮ, ಬಳೆ, ಹೂವು ಅವಳ ಜನ್ಮಸಿದ್ಧಹಕ್ಕು. ಪತಿಯ ಮರಣಾನಂತರ ವಿಧವೆ ಪಟ್ಟ ನೀಡಿ, ಇವೆಲ್ಲವನ್ನೂ ತೆಗೆಸಿ, ಶುಭ ಕಾರ್ಯದಿ ಭಾಗವಹಿಸಲು ನಿಷೇಧಿಸಿ ಮನನೋಯಿ ಸುವುದನ್ನು ನೆನೆದರೆ ಕಣ್ಣಾಲಿಗಳು ಒದ್ದೆಯಾ ಗುತ್ತವೆ. ಇನ್ನಾದರೂ ಗಂಡು ಹೆಣ್ಣಿನ ನಡುವೆ ತಾರತಮ್ಯವೆಸಗದೆ ಎಚ್ಚೆತ್ತುಕೊಂಡು ಸಮನಾದ ಸ್ಥಾನಮಾನ ಗೌರವ ನೀಡಲಿ ಎಂದಾಶಿಸುವೆ.
-
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.