ಭಾನುವಾರ, ಮೇ 9, 2021
25 °C

ಹೆಣ್ಣು ಮಕ್ಕಳ ರಕ್ಷಣೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಮೂರು ವರ್ಷದ ಹೆಣ್ಣು ಮಗುವೊಂದರ ಮೇಲೆ ಬೆಂಗಳೂರಿನಲ್ಲಿ ತಂದೆಯೇ ತೀವ್ರತರ ಹಲ್ಲೆ ನಡೆಸಿದ ಪ್ರಕರಣದ ಕುರಿತು ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗ (ಎನ್‌ಸಿಪಿಸಿಆರ್)ವು ಈ ಸಂಬಂಧ  ಸರ್ಕಾರ ದೇಶದಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.



`ಘಟನೆ ನಮಗಂತೂ ಆಘಾತ ತಂದಿದ್ದು ಈ ಬಗ್ಗೆ ಅಗತ್ಯ ತನಿಖೆ ಕೈಗೊಳ್ಳಲಾಗುವುದು. ತೀವ್ರ ಗಾಯಗಳಿಂದಾಗಿ ಬಾಲೆ ಆಫ್ರೀನ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ~ ಎಂದು ಆಯೋಗದ ಅಧ್ಯಕ್ಷೆ ಶಾಂತಾ ಸಿನ್ಹಾ ತಿಳಿಸಿದ್ದಾರೆ. `ಗಂಡು ಸಂತಾನ ಇಲ್ಲದ ಕಾರಣ ಆಕ್ರೋಶಗೊಂಡ ನನ್ನ ಪತಿಯು ಮಗುವನ್ನು ಕೊಲ್ಲಲು ಯತ್ನಿಸಿದ~ ಎಂದು ಆಫ್ರೀನ್ ತಾಯಿ ರೇಶ್ಮಾ ಹೇಳಿಕೆ ನೀಡಿದ್ದಾಳೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.