ಮಾಸ್ಕೊ, (ಪಿಟಿಐ): ರಷ್ಯಾದ ಪ್ರಯಾಣಿಕರ ವಿಮಾನವೊಂದು ನಿಲ್ದಾಣಕ್ಕೆ ಸಮೀಪದ ಹೆದ್ದಾರಿಗೆ ಅಪ್ಪಳಿಸಿ ಸ್ಫೋಟಿಸಿದ ಪರಿಣಾಮ 44 ಜನ ಮೃತರಾಗಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಮೃತರಲ್ಲಿ 8 ವಿದೇಶಿಗರು ಹಾಗೂ ದೇಶದ ಮೂವರು ಅತ್ಯುನ್ನತ ಪರಮಾಣು ವಿಜ್ಞಾನಿಗಳ ತಂಡ ಸಹ ಸೇರಿದೆ. ವಿಮಾನದಲ್ಲಿ 9 ಸಿಬ್ಬಂದಿ ಸೇರಿದಂತೆ 52 ಮಂದಿ ಪ್ರಯಾಣಿಸುತ್ತಿದ್ದರು.

ರಷ್- ಏರ್ ಏರ್ಲೈನ್ಸ್ಗೆ ಸೇರಿದ ವಿಮಾನ ಮಾಸ್ಕೊದಿಂದ ದೇಶದ ಉತ್ತರ ಭಾಗದ ಕರೆಲಿಯನ್ ಪ್ರಾಂತ್ಯದಲ್ಲಿನ ರಾಜಧಾನಿ ಪೆಟ್ರೊಜವೋಡ್ಸ್ಕ್ಗೆ ಹೊರಟಿತ್ತು. ಆದರೆ ಇಳಿಯುವ ಸಂದರ್ಭದಲ್ಲಿ ಪೆಟ್ರೊಜವೋಡ್ಸ್ಕ್ ನಿಲ್ದಾಣದಲ್ಲಿ ದಟ್ಟ ಮಂಜು, ಪ್ರತಿಕೂಲ ಹವಾಮಾನ ಹಾಗೂ ಕತ್ತಲು ಇತ್ತು. ಇದರಿಂದ ಪೈಲಟ್, ಸಮೀಪದ ಹೆದ್ದಾರಿಯನ್ನೇ ರನ್ವೇ ಎಂದು ತಪ್ಪಾಗಿ ಭಾವಿಸಿ ಅಲ್ಲಿ ವಿಮಾನವನ್ನು ಇಳಿಸಲು ಯತ್ನಿಸಿದ್ದು ಈ ದುರ್ಘಟನೆಗೆ ಕಾರಣ ಆಗಿರಬಹುದು ಎಂದು ಶಂಕಿಸಲಾಗಿದೆ.

ಸರ್ಕಾರದ ಪರಮಾಣು ನಿಗಮದ ವಿನ್ಯಾಸ ಘಟಕದ ಪ್ರಧಾನ ನಿರ್ದೇಶಕ ಸೆರ್ಗಿ ರಿಜೋವ್, ಉಪ ನಿರ್ದೇಶಕ ಗೆನ್ನಡಿ ಬಾನ್ಯುಕ್ ಹಾಗೂ ಮುಖ್ಯ ವಿನ್ಯಾಸಗಾರ ನಿಕೊಲಾಯ್ ಟ್ರುನೋವ್ ಸತ್ತವರಲ್ಲಿ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.