ಚಿಕ್ಕಮಗಳೂರು: `ಬಸವಣ್ಣನವರ ಬಗ್ಗೆ ಜನರಲ್ಲಿ ಗೌರವ ಇದೆ. ಆದರೆ ಶ್ರದ್ಧೆ ಮರೆಯಾಗುತ್ತಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್ ವಿಷಾದಿಸಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಬಸವಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಶಾಂತಿ ಸಂದೇಶ ನೀಡಿದ ವ್ಯಕ್ತಿಗಳನ್ನು ಮನಸಿನಲ್ಲಿ ಹಿಡಿದಿಟ್ಟುಕೊಳ್ಳುತ್ತಿದ್ದೇವೆ. ಆದರೆ, ಅವರ ಸಂದೇಶಗಳನ್ನು ಮರೆತು ಬಿಡುತ್ತಿದ್ದೇವೆ. ದೇಶದ ಕೆಲವು ಭಾಗಗಳಲ್ಲಿ ಜಾತಿ ವ್ಯವಸ್ಥೆ ಹೆಪ್ಪುಗಟ್ಟುತ್ತಿದೆ. ಸಭೆ, ಸಮಾರಂಭಗಳಲ್ಲಿ ಜಾತಿ ನಿರ್ಮೂಲನೆ ಬಗ್ಗೆ ಮಾತುಗಳು ಕೇಳಿಬರುತ್ತಿದೆಯಾದರೂ ಆಚರಣೆಯಲ್ಲಿ ಅದನ್ನು ಪಾಲಿಸಲು ಆಗುತ್ತಿಲ್ಲ. ಬಸವಣ್ಣ ಬೋಧಿಸಿದ ಸಪ್ತ ಸೂತ್ರಗಳಿಗೆ ವಿರುದ್ಧವಾಗಿ ಜನರು ನಡೆದುಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಬಸವಣ್ಣನವರು ಧಮನಿತರ ದನಿಯಾಗಿದ್ದರು. ಸಮಬಾಳು, ಸಹಬಾಳ್ವೆಯ ಪ್ರತೀಕವಾಗಿದ್ದರು. ವರ್ಗ ಮತ್ತು ಜಾತಿ ರಹಿತ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ, ಇಂದು ಸಮಾಜ ಸುಧಾರಕರ ವಿಚಾರಧಾರೆ ಕೈಬಿಟ್ಟು ಮೂರ್ತಿಪೂಜೆಯತ್ತ ಜನರು ಮುಂದಾಗುತ್ತಿದ್ದಾರೆ. ಇದು ಮೊದಲು ತಪ್ಪಬೇಕು ಎಂದು ತಿಳಿಸಿದರು.

ಜಾತೀಯತೆ ಕುರಿತು ವಾಸ್ತವ ನೆಲೆಗಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬಸವಣ್ಣನವರ ನಿಜ ತತ್ವಗಳು ಆಚರಣೆಗೆ ಬಂದಾಗ ಮಾತ್ರ ವಿಶ್ವಭ್ರಾತೃತ್ವ ಕಾಣಲು ಸಾಧ್ಯ ಎಂದರು.

ಮೂಗ್ತಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಗಫಾರ್ಬೇಗ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಹದಗೆಟ್ಟಾಗ ಅದನ್ನು ಸರಿಪಡಿಸಲು ಬಸವಣ್ಣನವರ ಆಗಮನ ಆಯಿತು. ದಲಿತರ, ಸ್ತ್ರೀ ಶೋಷಣೆಯ ವಿಮೋಚಕರಾಗಿದ್ದರು. ಸಮಾಜ ಸುಧಾರಣೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು ಎಂದರು.

ಜಡ್ಡುಗಟ್ಟಿದ ಸಮಾಜ ಸುಧಾರಣೆಗೆ ವಚನಗಳ ಮೂಲಕ ಹೊಸ ವ್ಯಾಖ್ಯಾನ ನೀಡಿದರು. ಅಧಿಕಾರದ ಹಮ್ಮು, ಬಿಮ್ಮು ಇಲ್ಲದೆ ಅಂತರಜಾತಿ ವಿವಾಹ ಮಾಡಿಸಿದರು. ಅವರ ವಚನಗಳು ಸಾರ್ವತ್ರಿಕ, ಸಾರ್ವಕಾಲಿಕ ಎಂದು ಹೇಳಿದರು.

ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ನಗರಸಭೆ ಅಧ್ಯಕ್ಷ ಪ್ರೇಂಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ರಾಜಪ್ಪ, ತಾಪಂ ಅಧ್ಯಕ್ಷ ಮಂಜುನಾಥ, ವೀರಶೈವ ಸಮಾಜದ ಅಧ್ಯಕ್ಷೆ ಗೌರಮ್ಮಬಸವೇಗೌಡ, ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ಜಿಪಂ ಸಿಇಒ ರಾಧಾಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಮರಡಪ್ಪ, ನಿರಂಜನ, ನಗರಸಭೆ ಸದಸ್ಯರಾದ ದಿನೇಶ್, ಮಧುಕುಮಾರ್, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಎಲ್.ವಿ.ಬಸವರಾಜು ಇದ್ದರು.

ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪುಷ್ಪ ಅಲಂಕೃತ ತೆರೆದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಟ್ಟೆರಾಯ, ಕೀಲು ಕುದುರೆ, ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆಯುವಂತಿದ್ದವು.

ಕಾರ್ಯಕ್ರಮ ಅಚ್ಟುಕಟ್ಟಾಗಿ ನಡೆದರೂ ಕಣ್ತುಂಬಿಕೊಳ್ಳಲು ನಿರೀಕ್ಷಿತ ಸಂಖ್ಯೆಯ ಪ್ರೇಕ್ಷಕರು ಇಲ್ಲದೆ, ಬಿಕೋ ಎನ್ನುತ್ತಿತ್ತು. ಜಿಲ್ಲಾಡಳಿತದ ನೇತೃತ್ವದಲ್ಲೇ ಕಾರ್ಯಕ್ರಮ ನಡೆದರೂ ಸಾರ್ವಜನಿಕರ ಮತ್ತು ಸರ್ಕಾರಿ ನೌಕರರ ಭಾಗವಹಿಸುವಿಕೆ ಕಾಣಲಿಲ್ಲ.ಶಾಸಕ ಸಿ.ಟಿ.ರವಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ಇನ್ನಿತರರು ಮೆರಣಿಗೆ ಮುಂಚೂಣಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.