ಮಂಗಳವಾರ, ಜುಲೈ 14, 2020
24 °C

ಹೆಬ್ಬೆರಳು ನೋವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ಬೆರಳು ನೋವು

ಮೊಬೈಲ್‌ನಲ್ಲಿ ಎಸ್‌ಎಂಎಸ್‌ಗಳನ್ನು ಟೈಪ್ ಮಾಡಿ, ಮಾಡಿ ಹೆಬ್ಬೆರಳು ನೋಯಿತ್ತಿದೆಯೇ. ಹಾಗಾದರೆ ನಿಮಗೆ ‘ಬ್ಲ್ಯಾಕ್‌ಬೆರಿ ಥಂಬ್’ ಎನ್ನುವ ಕಾಯಿಲೆ ಬಂದಿದೆ ಎಂದರ್ಥ.  ‘ರಿಮ್’ ಕಂಪೆನಿಯ ಮೊಬೈಲ್‌ನಲ್ಲಿ ಟೆಕ್ಸ್ಟ್ ಮತ್ತು ಇ-ಮೇಲ್ ಸಂದೇಶಗಳನ್ನು ಟೈಪ್ ಮಾಡಿ, ಹೆಬ್ಬರಳು ನೋವಿನಿಂದ ಬಳಲುತ್ತಿದ್ದರೆ ಆ ಕಾಯಿಲೆಯನ್ನು ವೈದ್ಯರು ಈಗ ‘ಬ್ಲ್ಯಾಕ್‌ಬೆರಿ ಥಂಬ್’ ಎಂದು ಗುರುತಿಸುತ್ತಿದ್ದಾರೆ.ನೂರಾರು ಗ್ರಾಹಕರು ‘ಬ್ಲಾಕ್ ಬೆರಿ ಥಂಬ್’ನಿಂದ ತೊಂದರೆಗೆ ಒಳಗಾಗಿದ್ದು, ಅನೇಕರು ಪರಿಹಾರ ಕೋರಿ ಕೋರ್ಟಿನ ಮೊರೆ ಹೋಗಿದ್ದಾರಂತೆ. ಇದು ಸಾಮಾನ್ಯ ವಿಷಯದಂತೆ ಕಂಡರೂ, ಕಂಪೆನಿಯಿಂದ ಪರಿಹಾರ ಕೋರಬಹುದು ಎನ್ನುತ್ತಾರೆ ಕಾನೂನು ತಜ್ಞರು.ಕೆಲವರು ಇಂತಹ ಅಪಾಯಗಳನ್ನು ಜಾಣತನದಿಂದ ಎದುರಿಸುತ್ತಾರೆ. ಇನ್ನು ಕೆಲವರು ಗಂಟೆಗಟ್ಟಲೆ ಸಂದೇಶ ಕಳುಹಿಸುವುದರಲ್ಲೇ ಮುಳುಗಿರುವುದರಿಂದ ಹೆಬ್ಬರಳು ನೋವು ಬರುತ್ತದೆ ಎಂದು ‘ದಿ ಟೆಲಿಗ್ರಾಫ್’ಪತ್ರಿಕೆ ವರದಿ ಮಾಡಿದೆ. ಬ್ಲ್ಯಾಕ್ ಬೆರಿ ಉದ್ದಿಮೆದಾರರು ಹೆಚ್ಚಾಗಿ ಬಳಸುವ ಫೋನ್ ಆಗಿರುವುದರಿಂದ ಹೆಚ್ಚಿನ ಗ್ರಾಹಕರು  ಈ ಉಪಕರಣದಲ್ಲೇ ವ್ಯವಹಾರ ಸಂವಹನ ನಡೆಸಲು ಇಷ್ಟಪಡುತ್ತಾರೆ. ಪುಟ್ಟ ಕಿಲಿಮಣೆ ಮೇಲೆ ಟೈಪ್ ಮಾಡಬೇಕಾಗಿರುವುದರಿಂದ ಹೆಬ್ಬೆರಳಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದು ಸಹಜವಾಗಿಯೇ ನೋವು ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎಂದಿದೆ ಈ ವರದಿ.‘ಕಿವರ್ಟಿ’ ಕೀಲಿಮಣೆ ಇರುವ ಮೊಬೈಲ್‌ಗಳಲ್ಲಿ ಈ ಸಾಧ್ಯತೆ ಹೆಚ್ಚು. ಮೊಬೈಲ್‌ಗಳನ್ನು ಕೈಯಲ್ಲಿ ಹಿಡಿದು, ನಡೆಯುತ್ತಾ ಸಂದೇಶ ಟೈಪ್ ಮಾಡುವುದು ಹೆಚ್ಚು ಅಪಾಯಕಾರಿ. ಇದು  ಹೆಬ್ಬೆರಳಿನ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ಬ್ಲ್ಯಾಕ್ ಬೆರಿ ಥಂಬ್ ಇತ್ತೀಚೆಗೆ ಕಾರ್ಪೊರೇಟ್ ಕಚೇರಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಆರೋಗ್ಯ ಸಮಸ್ಯೆ ಎಂದೂ ವೈದ್ಯರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.