ಹೆಬ್ರಿ: ಹೆಬ್ರಿ ಪಟ್ಟಣ ಸಮೀಪದ ರಿಂಗ್ ರೋಡ್ನ ಅಡಿಯಲ್ಲಿ ಸುಣ್ಣಮಣ್ಣಿನಿಂದ ಮಾಡಿದ ಹಳೆಯದಾದ ಬೃಹತ್ ಮಡಿಕೆಯೊಂದು ಪತ್ತೆಯಾಗಿದ್ದು ಜನತೆಗೆ ಕುತೂಹಲ ಕೆರಳಿಸಿದೆ.
ಕೆಲವು ದಿನಗಳ ಹಿಂದೆಯೇ ರಸ್ತೆ ಕೆಲಸ ಮಾಡುವವರಿಗೆ ಇದರ ಕುರುಹು ದೊರೆತಿದ್ದರೂ ಹೆಚ್ಚು ಪ್ರಚಾರ ಪಡೆದಿರಲಿಲ್ಲ. ಗುರುವಾರ ಪೇಟೆಯಾದ್ಯಂತ ಪ್ರಚಾರಗೊಂಡು ಹೆಬ್ರಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತಿತರರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

ತುಂಬಾ ಹಳೆಯದಾದ ಸುಣ್ಣ ಮತ್ತು ಮಣ್ಣಿನಿಂದ ಮಾಡಿರುವ ದಪ್ಪದ ಮಡಿಕೆಯಾಗಿದ್ದು ರಸ್ತೆಯ ಅಡಿಯಲ್ಲಿ ಹೂತು ಇಡಲಾಗಿದೆ. ಇದರ ಒಳಗಿದ್ದ ವಸ್ತುವನ್ನು ಯಾರೋ ಹೊರತೆಗೆದಿದ್ದು ಆ ಗೆರೆಗಳು ಬಿದ್ದದ್ದು ತಿಳಿಯುತ್ತದೆ. ಯಾವ ಕಾರಣಕ್ಕೆ ಮಡಕೆಯನ್ನು ಇಲ್ಲಿಡಲಾಗಿದೆ ಎಂಬು ನಿಗೂಢವಾಗಿದೆ.

ಹೆಬ್ರಿ ಠಾಣಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಮತ್ತವರ ತಂಡ ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಮಾಡುವುದಾದರೆ ಪೊಲೀಸ್ ರಕ್ಷಣೆ ನೀಡುವುದಾಗಿ ತಿಳಿಸಿದ್ದಾರೆ.
ರಸ್ತೆ ಕೆಲಸ ಮಾಡಿದವರಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.