ಶನಿವಾರ, ಮೇ 8, 2021
18 °C

ಹೆಸರು ಬೆಳೆಗೆ ಕಂಬಳಿ ಹುಳು ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಅನೇಕ ಗ್ರಾಮಗಳ ಹೆಸರು ಬೆಳೆ ಕೆಂಪು ತಲೆ ಕಂಬಳಿ ಹುಳುಗಳ ಹಾವಳಿಯಿಂದ ಹಾನಿಯಾಗಿದ್ದು, ರೈತರನ್ನು  ಇದು ಆಂತಕಕ್ಕೀಡುಮಾಡಿದೆ.ಈ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹಂಸವೇಣಿ ರೈತರಿಗೆ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಬೆಳೆ ರಕ್ಷಣೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ.ಹೆಸರು ಬೆಳೆಯು 10-25 ದಿನಗಳ ಬೆಳವಣಿಗೆಯ ಹಂತದಲ್ಲಿದೆ. ಈ ಬೆಳೆ ರಕ್ಷಿಸಲು ಕಂಬಳಿ ಹುಳುವಿನ ಮೊಟ್ಟೆಗಳ ನಾಶ, ಕಂದಕಗಳ ನಿರ್ಮಾಣ, ಬದುಗಳ ಸ್ವಚ್ಛತೆ ಕಾಪಾಡುವುದು, ಕ್ರಿಮಿ ನಾಶಕ ಬಳಕೆ, ದೂಳು ರೂಪದ ಕೀಟನಾಶಕಗಳ ನಾಶ, ವಿಷ ಪಾಷಾಣದ ಬಳಕೆಯ ಮುಂಜಾಗೃತಾ ಕ್ರಮಗಳನ್ನು ರೈತರು ಅನುಸರಿಸುವಂತೆ ಅವರು ಸಲಹೆ ನೀಡಿದ್ದಾರೆ.2 ವರ್ಷಗಳಿಂದ ಸಕಾಲಕ್ಕೆ ಮಳೆಯಾಗದ ಕಾರಣ ರೈತರು  ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಮುಂಗಾರು ಮಳೆಗೆ ಹೆಸರು ಬೆಳೆದು ಬ್ಯಾಂಕ್ ಸಾಲ ತೀರಿಸುವ ಆಸೆಯೊಂದಿಗೆ ರೈತರು ಬಿತ್ತನೆ ಕಾರ್ಯ ಮಾಡಿದ್ದರು.  ಕಂಬಳಿ ಹುಳುಗಳ ಕಾಟದಿಂದ ರೈತರು ಆತಂಕದಲ್ಲಿದ್ದಾರೆ.ತಾಲ್ಲೂಕಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆಯಾಗಬೇಕಿದ್ದ ಹೆಸರು ಬೆಳೆ, ಈ ಬಾರಿ ತಡವಾಗಿ ಆರಂಭವಾದ ಮುಂಗಾರಿನಿಂದಾಗಿ ಕೇವಲ 3.75 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ. ಹಾಗೆಯೇ ಎಳ್ಳು ಬೆಳೆಯ ಬಿತ್ತನೆಯ ಕ್ಷೇತ್ರ ಕಳೆದ ಬಾರಿಗಿಂತ ಸಾಕಷ್ಟು ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹಂಸವೇಣಿ ತಿಳಿಸಿದ್ದಾರೆ.ಬೆಳೆ ರಕ್ಷಣೆಯ ಶಾಶ್ವತ ಪರಿಹಾರ ಕ್ರಮಕ್ಕೆ ಇಲಾಖೆಯು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.