ಗುರುವಾರ , ಮೇ 19, 2022
23 °C

ಹೈನುಗಾರಿಕೆ ಅಭಿವೃದ್ಧಿಪಡಿಸಿ: ಜಿಟಿಡಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು : ಗ್ರಾಮಾಂತರ ಪ್ರದೇಶದಲ್ಲಿ ಗುಡಿ ಕೈಗಾರಿಕೆಗೆ      ಪರ್ಯಾಯವಾಗಿ ಹೈನುಗಾರಿಕೆ ಅಭಿವೃದ್ಧಿ ಪಡಿಸಿಕೊಳ್ಳುವ ಮೂಲಕ ಪ್ರತಿಯೊಂದು ಕುಟುಂಬವು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸಲಹೆ ನೀಡಿದರು.ತಾಲೂಕಿನ ಹನಗೋಡು ಹೋಬಳಿ ಹರೀನಹಳ್ಳಿ ಗ್ರಾಮದಲ್ಲಿ 51ನೇ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆಯಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೈನುಗಾರಿಕೆಯನ್ನು ಅವಲಂಬಿಸಿದ ಪ್ರತಿಯೊಂದು ಕುಟುಂಬವು ಆರ್ಥಿಕವಾಗಿ ಪ್ರಗತಿ ಕಾಣುತ್ತಿದ್ದು, ಹೈನುಗಾರಿಕೆಯನ್ನು ಉದ್ಯಮವಾಗಿ ಪರಿಗಣಿಸಬೇಕು ಎಂದರು.ತಾಲೂಕಿನಲ್ಲಿ 118 ಹಾಲು ಉತ್ಪಾದಕ ಸಹಕಾರಿ ಸಂಘಗಳು ಇದ್ದು, 51ಮಹಿಳಾ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಹುಣಸೂರು ಮತ್ತು ಕೊಳ್ಳೇಗಾಲ ತಾಲ್ಲೂಕು ಗುಣಮಟ್ಟದ ಹಾಲು ಉತ್ಪಾದಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟಕ್ಕೆ ಹೆಸರು ತಂದಿದೆ ಎಂದರು.ರಾಜೀವ್ ಗಾಂಧಿ ವಸತಿ ಯೋಜನೆ :
ತಾಲೂಕಿನ ಹನಗೋಡು ಜಿ.ಪಂ. ಕ್ಷೇತ್ರಕ್ಕೆ ಸರ್ಕಾರದಿಂದ ವಸತಿ ಸಚಿವರ ವಿಶೇಷ ಕೋಟದಿಂದ ಮೊದಲ ಕಂತಿನಲ್ಲಿ 1256 ಮನೆ ತರಲಾಗಿದೆ. ವಸತಿ ಸಚಿವ ಸೋಮಣ್ಣ ಮಂಜೂ ರಾತಿ ನೀಡಿದ್ದು, ಗ್ರಾಮ ಸಭೆಯಲ್ಲಿ ತೀರ್ಮಾನಿಸಿದ ಫಲಾನುಭವಿಗಳ ಖಾತೆಗೆ ತಲಾ ರೂ.63 ಸಾವಿರ ಸಂದಾಯವಾಗಲಿದೆ ಎಂದರು. ಹನ ಗೋಡು ಹೋಬಳಿ ಯಲ್ಲಿ ಕರ್ಣಕುಪ್ಪೆ ಗ್ರಾ.ಪಂ. 352 ಮನೆ ಪಡೆದು ಅತ್ಯಂತ ಹೆಚ್ಚು ಮನೆ ಪಡೆದ ಪಂಚಾಯಿತಿ ಎಂದು ಖ್ಯಾತಿ ಪಡೆದಿದೆ. ಹನಗೋಡು ಜಿ.ಪಂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಿದ್ದಪಡಿಸಿದ ಫಲಾನುಭವಿಗಳ ಪಟ್ಟಿಯನ್ನು ಸರ್ವ ಪಕ್ಷದ ಸದಸ್ಯರೊಂದಿಗೆ ಗ್ರಾಮ ಸಭೆ ನಡೆಸಿ ವಿರೋಧ ಪಕ್ಷದವರ ಸಮ್ಮತಿ ಪಡೆದು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ  ಎಸ್.ಚಿಕ್ಕಮಾದು ಮತ್ತು ಶಾಸಕ ಎಚ್.ಪಿ.ಮಂಜುನಾಥ್ ಅವರ ಆರೋಪಕ್ಕೆ ಉತ್ತರಿಸಿದರು.ನೀರಾವರಿ: ತಾಲೂಕಿನ ಹನ ಗೋಡು ಲಕ್ಷ್ಮಣತೀರ್ಥ ನದಿ ಅಚ್ಚುಕಟ್ಟು ಪ್ರದೇಶವನ್ನು ಸಣ್ಣ ನೀರಾವರಿ ಇಲಾಖೆಗೆ ಸೇರ್ಪಡಿಸಿದ್ದು, ಸರ್ಕಾರದಿಂದ ಬರುವ ಹಣ ಸಾಲದೆ ಅಚ್ಚುಕಟ್ಟು ಪ್ರದೇಶ ಆಧುನಿಕರಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಚ್ಚುಕಟ್ಟು ಪ್ರದೇಶವನ್ನು ಕಾವೇರಿ ನೀರಾವರಿ ನಿಗಮಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದೇನೆ ಎಂದರು. ಮೈಮುಲ್ ಅಧ್ಯಕ್ಷ ಓಂ ಪ್ರಕಾಶ್ ಮಾತನಾಡಿ, ಕಳೆದ ಬೇಸಿಗೆಯಲ್ಲಿ 2.50ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 3.40 ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಿರುತ್ತೇವೆ ಎಂದರು.ವೇದಿಕೆಯಲ್ಲಿ ಹನಗೋಡು ಜಿ.ಪಂ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ, ಮೈಮುಲ್ ನಿರ್ದೇಶಕಿ ವಿಜಯಲಕ್ಷ್ಮಿ, ನಿರ್ದೇಶಕರಾದ ಕೆ.ಎಸ್.ಕುಮಾರ್, ಟಿ.ಎ.ರಾಜೇಗೌಡ, ಆರ್.ಪ್ರಭಾಕರ್, ಉದ್ಯಮಿ ಹರೀಶ್, ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಕನ್ಯ, ತಾ.ಪಂ. ಸದಸ್ಯ ಪಾಪು, ಗ್ರಾ.ಪಂ ಸದಸ್ಯ ಶ್ರೀಕಾಂತ್ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.