ಶನಿವಾರ, ಮೇ 15, 2021
24 °C

ಹೊಳಲ್ಕೆರೆ: 22ರಿಂದ ಪಂಚಕಲ್ಯಾಣ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಪಟ್ಟಣದಲ್ಲಿ ಏ. 22ರಿಂದ 26ರ ವರೆಗೆ ಶಾಂತಿನಾಥ ಜಿನ ಮಂದಿರ ಪಂಚಕಲ್ಯಾಣ ಮಹೋತ್ಸವ, ನವಗ್ರಹ ತೀರ್ಥಂಕರರ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿವೆ.22ಕ್ಕೆ ಶಾಸಕ ಎಂ. ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಿಂಹನಗದ್ದೆ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ನೇತೃತ್ವ ವಹಿಸುವರು.ಪಂಚಕಲ್ಯಾಣ ಮಹೋತ್ಸವದ ಅಧ್ಯಕ್ಷ ಬಿ. ಪ್ರಸನ್ನಯ್ಯ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾಧ್ಯಕ್ಷ ಎಚ್.ಎಸ್. ನೇಮಿನಾಥಯ್ಯ, ಗೀತಾಕೃಷ್ಣಮೂರ್ತಿ, ಶಾಸಕ ಡಿ. ಸುಧಾಕರ್, ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್, ಲಿಂಗರಾಜು, ಮೋಕ್ಷಪತಿ, ಚನ್ನಕೇಶವ, ಜಂಬಿಗೆ ಜಯಣ್ಣ ಭಾಗವಹಿಸುವರು. ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಮತ್ತು ಬೆಂಗಳೂರಿನ ಡಾ.ಎಚ್.ಎಸ್. ಮದನಕೇಸರಿ `ಜೀವಾತ್ಮ ವಿಚಾರ~ ಕುರಿತು ಉಪನ್ಯಾಸ ನೀಡುವರು. ಬೆಂಗಳೂರಿನ ಗುಪ್ತಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಎಸ್.ಪಿ. ಪದ್ಮಿನಿ ನಾಗರಾಜ್ ಧರ್ಮ ಮತ್ತು ಮಹಿಳೆ ಕುರಿತು ಮಾತನಾಡುವರು.ಅಂದು ಸ್ವಸ್ತಿವಾಚನ, ಶುದ್ಧಹೋಮ, ಅಗ್ರೋದಕ ಮೆರವಣಿಗೆ, ಇಂದ್ರಪ್ರತಿಷ್ಠೆ, ತೋರಣ ಮಹೂರ್ತ, ವಿಮಾನ ಶುದ್ಧಿ, ನಾಂದಿ ಮಂಗಲ ವಿಧಾನ, ವಾಸ್ತುಪೂಜೆ, ನವಗ್ರಹ ಮಹಾಶಾಂತಿ, ವಾಸ್ತುಬಲಿ, ಯಜ್ಞಶಾಲಾ ಪ್ರವೇಶ ಮಂಟಪ ಪ್ರತಿಷ್ಠೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.23ಕ್ಕೆ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೇತೃತ್ವ ವಹಿಸುವ ಕಾರ್ಯಕ್ರಮದಲ್ಲಿ ಭಾರತೀ ಕಲ್ಲೇಶ್, ಕೆ.ಎಲ್. ಪದ್ಮಿನಿ, ಚಂದ್ರಕೀರ್ತಿ, ಕುಮುದಾ ನಾಗಭೂಷಣ್, ಮೃತ್ಯುಂಜಯ ಚರಂತಿಮಠ, ಶ್ರೀಧರ್, ಎಚ್.ಜಿ. ಆನಂದ್, ಸುವೀರ್‌ಕುಮಾರ್, ಕೋಮಲಾ ಬ್ರಹ್ಮದೇವಯ್ಯ ಭಾಗವಹಿಸುವರು.

ಅಂದು ಧ್ವಜಾರೋಹಣ ಭೇರಿತಾಡಣ, ಸೂತ್ರಬಂಧನ, ಶ್ರೀಪೀಠ ಯಂತ್ರಾರಾಧನೆ, ಜಲಯಾತ್ರಾ ಮಹೋತ್ಸವ, ಗರ್ಭಾವತರಣ ಕಲ್ಯಾಣ ಮಹೋತ್ಸವ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ.24ಕ್ಕೆ ಅರಹಂತಗಿರಿಯ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೇತೃತ್ವ ವಹಿಸುವ ಕಾರ್ಯಕ್ರಮದಲ್ಲಿ ನಂದಕುಮಾರ್ ಅಪ್ಪು ಮುಗ್ದಂ, ಮೂಡಬಿದ್ರಿ ಶಾಸಕ ಅಭಯಚಂದ್ರ ಜೈನ್, ಡಾ.ಏಜಾಸುದ್ದೀನ್, ಕೆ.ಸಿ. ರಮೇಶ್, ಬಿ.ಕೆ. ಸಲೀಂಪಾಷಾ ಇತರರು ಭಾಗವಹಿಸುವರು. ಅಂದು ಜನ್ಮ ಕಲ್ಯಾಣ, ಕಲಿಕುಂಡಲಿ ಯಂತ್ರಾರಾಧನೆ, ಪಾಂಡುಕ ಶಿಲೋಪರಿ, ಜನ್ಮಾಭಿಷೇಕ ನಾಮಕರಣೋತ್ಸವ, ಬಾಲಲೀಲಾ ಮಹೋತ್ಸವ  ನಡೆಯಲಿವೆ.25ಕ್ಕೆ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹಾಗೂ ಹುಂಚದ ಜೈನಮಠದ ದೇವೇಂದ್ರ ಕೀರ್ತಿ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಸರೋಜಾ, ಪದ್ಮಲತಾ, ದೇವೇಂದ್ರಕುಮಾರ್, ಜಿತೇಂದ್ರ ಕುಮಾರ್, ಆರ್. ನಾಗರಾಜ್, ಕುಮಾರ್ ಮತ್ತಿತರರು ಭಾಗವಹಿಸು ವರು. 26ಕ್ಕೆ ಸಂಪತ್ ಕುಮಾರ್‌ಜೈನ್, ಜ್ವಾಲಕುಮಾರ್ ಭಾಗವಹಿಸಲಿದ್ದು, ಸಂಜೆ 5ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ ಎಂದು ಕೋಶಾಧ್ಯಕ್ಷ ಎಚ್.ಪಿ. ಸುದರ್ಶನಕುಮಾರ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.