ಬುಧವಾರ, ಜೂನ್ 23, 2021
24 °C

ಹೊಳೆನರಸೀಪುರ, ಅರಕಲಗೂಡು ಪಟ್ಟಣದಲ್ಲಿ ಜಾತ್ರೆಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ:ಇಲ್ಲಿನ ಲಕ್ಷ್ಮಿನರ ಸಿಂಹಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಇಲ್ಲಿ ವಿಜೃಂಭಣೆಯಿಂದ ನಡೆಯಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರದ್ಧೆಯಿಂದ ರಥ ಎಳೆದು ಸಂಭ್ರಮಿಸಿದರು. ದಾಖಲೆ ಗಳಂತೆ ಕಳೆದ 600 ವರ್ಷಗಳಿಂದ ಈ ರಥೋತ್ಸವ ನಡೆಯುತ್ತಿದೆ. ಶಿಥಿಲವಾಗಿದ್ದ ರಥದ ಕಾರಣ ಈಚೆಗೆ ಉತ್ಸವ ನಿಲ್ಲಿಸಲಾಗಿತ್ತು.

 

2009ರಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರ ಸಹಕಾರದಿಂದ ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ತಮಿಳುನಾಡಿನ ಶಿಲ್ಪಿಗಳು ತೇಗ, ಬೀಟೆ ಹೊನ್ನೆ, ಗೊಬ್ಬಳಿ, ಸಾಗವಾನಿ ಮರ ಬಳಸಿ ನಿರ್ಮಿಸಿದ ರಥದಲ್ಲಿ ಕಳೆದ ಮೂರು ವರ್ಷಗಳಿಂದ ರಥೋತ್ಸವ ನಡೆಸಲಾಗುತ್ತಿದೆ.ಗುರುವಾರ ಬೆಳಿಗ್ಗೆ 8.45ಕ್ಕೆ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ರಥದ ಮೇಲಿನ ದೊಡ್ಡ ದೊಡ್ಡ ನಗಾರಿಗಳು 10ಗಂಟೆ ವೇಳೆಗೆ ಶಬ್ದ ಮಾಡುತ್ತಿದ್ದಂತೆ ಜನರು ಜಯಘೋಷ ಹಾಕುತ್ತಾ ತೇರು ಎಳೆಯಲು ಪ್ರಾರಂಭಿಸಿದರು.

 

ರಥೋತ್ಸವ ಕೋಟೆ ಮುಖ್ಯ ರಸ್ತೆ, ರಾಘವೇಂದ್ರ ಮಠದ ರಸ್ತೆ, ಶಂಕರ ಮಠದ ರಸ್ತೆ, ದೇವಾಲಯ ರಸ್ತೆಯಲ್ಲಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ಜನರು ದಾರಿಯುದ್ದಕ್ಕೂ ಹಣ್ಣು, ಜವನ ಎಸೆದು ಸಂಭ್ರಮಿಸಿದರು. ರಥ ಸಾಗುವ ಮಾರ್ಗದ ಮನೆಗಳಲ್ಲಿ ಪಾನಕ, ಶರಬತ್ತು ವಿತರಿಸಲಾಯಿತು.ಉತ್ಸವ ಮೂರ್ತಿ ಆಭರಣ ತೊಡಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 4ರಿಂದ ಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಜನರು ದೇವಾಲಯ ಮುಂಭಾಗ ದಿಂದ ಮೈಸೂರು ರಸ್ತೆ ವರೆಗೆ ದರ್ಶನಕ್ಕೆ ಸಾಲಾಗಿ ನಿಂತಿದ್ದರು. ಯುವಕರು ರಥೋತ್ಸವ ಸಮಯದಲ್ಲಿ ಬಣ್ಣ ಬಳಿದು ಹೋಳಿ ಆಚರಿಸಿದರು.ಶಾಸಕ ರೇವಣ್ಣ, ಚನ್ನಮ್ಮ ದೇವೇ ಗೌಡ, ಭವಾನಿ ರೇವಣ್ಣ, ಶಾಸಕರ ಪುತ್ರರಾದ ಸೂರಜ್, ಪ್ರಜ್ವಲ್, ಪುರಸಭಾಧ್ಯಕ್ಷೆ ವಿನೋದಾ, ತಾ.ಪಂ. ಅಧ್ಯಕ್ಷ ಎನ್.ಆರ್.ಅನಂತ್‌ಕುಮಾರ್, ತಹಶೀಲ್ದಾರ್ ವಿ. ಮಂಜುನಾಥ್, ಮುಖ್ಯಾಧಿಕಾರಿ ಶಾಂತಶೆಟ್ಟಿ, ಯುವ ಮುಖಂಡ ಟಿ. ಶಿವಕುಮಾರ್ ಇತರರು ಭಾಗವಹಿಸಿದ್ದರು.ಡಿಎಸ್‌ಪಿ ಕೆ. ಪರಶುರಾಮ್, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲ್ ನಾಯಕ್, ಸಬ್ ಇನ್ಸ್‌ಪೆಕ್ಟರ್ ವಿವೇಕಾನಂದ ಹಾಗೂ ಚಿಕ್ಕಣ್ಣ ರಥೋತ್ಸವದ ಭದ್ರತೆಯ ಉಸ್ತುವಾರಿ ವಹಿಸಿದ್ದರು.ಅರಕಲಗೂಡು ವರದಿ: ಪಟ್ಟಣದ ಇತಿಹಾಸ ಪ್ರಸಿದ್ಧ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಗುರುವಾರ ವೈಭವದಿಂದ ನೆರವೇರಿತು.ರಥೋತ್ಸವ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ ಮುಂತಾದ ಧಾರ್ಮಿಕ ಕಾರ್ಯ ನಡೆದವು. ಪಟ್ಟಣದ ಜನತೆ ದೇವಾಲ ಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಗಳಿಗೆ ಸಂಪ್ರದಾಯ ದಂತೆ ಕೃಷ್ಣ ಗಂಧೋತ್ಸವ ನಡೆಸಲಾ ಯಿತು.

 

ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೊಂಗಲ್ ನಿವೇದನೆ ಮಂಗಳಾರತಿ ನಡೆಸಲಾಯಿತು.ತಹಶೀಲ್ದಾರ್ ವೀಣಾ ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಜಯ ಘೋಷಗಳೊಂದಿಗೆ ರಥ ಎಳೆದರಲ್ಲದೆ, ತೇರಿನ ಮೇಲೆ ಬಾಳೆಹಣ್ಣು, ದವನ ಎಸೆದು ಸಂಭ್ರಮಿಸಿದರು. ಚಂಡೆ, ಮಂಗಳವಾದ್ಯ ರಥೋತ್ಸವಕ್ಕೆ ಮೆರುಗು ನೀಡಿದವು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಗೋಪಾಲ್, ಸದಸ್ಯರಾದ ಎನ್. ರವಿಕುಮಾರ್ ಎ.ಪಿ. ರಮೇಶ್, ಮುಖ್ಯಾಧಿಕಾರಿ ವಾಸುದೇವ್, ಮುಜರಾಯಿ ಇಲಾಖೆ ಅಧಿಕಾರಿಗಳು ಬ್ರಾಹ್ಮಣ ಸಭಾ ಅಧ್ಯಕ್ಷ ಎ.ಎಸ್. ರಾಮಸ್ವಾಮಿ ಕಾರ್ಯದರ್ಶಿ ಎ.ಎನ್. ಗಣೇಶ್ ಮೂರ್ತಿ, ಕಿರುತೆರೆ ಕಲಾವಿದ ಮಣಿಕಂಠ ಸೂರ್ಯ ಮತ್ತಿತರರು ಇದ್ದರು.ಮಧ್ಯಾಹ್ನ ವಸಂತೋತ್ಸವ, ಅನ್ನದಾಸೋಹ, ರಾತ್ರಿ ಶಾಂತೋತ್ಸವ ನಡೆದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.