ಶನಿವಾರ, ಜೂಲೈ 4, 2020
28 °C

ಹೊಸ ನಿವೃತ್ತಿ ವೇತನ ಯೋಜನೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ನಿವೃತ್ತಿ ವೇತನ ಯೋಜನೆ ಬೇಡ

 ಗುಲ್ಬರ್ಗ: ಷೇರು ಮಾರುಕಟ್ಟೆಯಾಧಾರಿತ ನಿವೃತ್ತಿ ವೇತನ ಯೋಜನೆ ವಿರೋಧಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಗುಲ್ಬರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತೆಯರು, ಪಿಂಚಣಿ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.

 

ಹಲವು ಬಗೆಯ ಹೋರಾಟದ ಫಲವಾಗಿ ರಾಜ್ಯ ಸರ್ಕಾರ 2010ರ ಬಜೆಟ್‌ನಲ್ಲಿ ನಿವೃತ್ತಿ ವೇತನ ಕೊಡುವುದಾಗಿ ಪ್ರಕಟಿಸಿತು. ಆದರೆ ಆ ನಿವೃತ್ತಿ ವೇತನ ಎಲ್‌ಐಸಿ ಆಧಾರಿತ ಯೋಜನೆಯಾಗಬೇಕು ಎಂದು ಒತ್ತಾಯಿಸಿ ನವೆಂಬರ್ 15ರಿಂದ 19ರವರೆಗೆ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಹೋರಾಟ ನಡೆಸಿದರು. ಇದಕ್ಕೆ ಸರ್ಕಾರ ಸ್ಪಂದಿಸಿದಂತೆ ಮಾಡಿತಾದರೂ, ಈಗ ಹೊಸ ನಿವೃತ್ತಿ ಯೋಜನೆ ಜಾರಿ ಮಾಡಲು ಮಂದಾಗಿದೆ ಎಂದು ಅವರು ಆರೋಪಿಸಿದರು.ನಿವೃತ್ತಿ ಬಯಸುವವರು ನಿವೃತ್ತಿಯಾಗುವವರೆಗೂ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದ್ದು, ನಿವೃತ್ತಿಯಾಗುವ ತಿಂಗಳು ಅಥವಾ ವಾರದಲ್ಲಿ ಷೇರು ಮಾರುಕಟ್ಟೆ ಕುಸಿದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಎಲ್‌ಐಸಿ ವಂತಿಗೆ ಆಧಾರಿತ ಯೋಜನೆ ಜಾರಿ ಮಾಡಿದರೆ ಪ್ರಯೋಜನವಾಗಲಿದೆ ಎಂದು ಅಧ್ಯಕ್ಷೆ ಶಾಂತ ಎನ್. ಘಂಟಿ ಹೇಳಿದರು.

 

“ಸಾರ್ವಜನಿಕ ಉದ್ದಿಮೆಯಾದ ಎಲ್‌ಐಸಿಗೆ ಕೇಂದ್ರ ಸರ್ಕಾರದ ಗ್ಯಾರಂಟಿ ಇದೆ. ದೇಶದಲ್ಲಿ ಭ್ರಷ್ಟಾಚಾರ ಇರದ ಏಕೈಕ ಸಂಸ್ಥೆಯೆಂದರೆ ಎಲ್‌ಐಸಿ ಮಾತ್ರ. ಹೀಗಾಗಿ ಎಲ್‌ಐಸಿ ವಂತಿಗೆ ಆಧಾರಿತ ಯೋಜನೆ ಜಾರಿ ಮಾಡಬೇಕು” ಎಂದು ಅವರು ಒತ್ತಾಯಿಸಿದರು.ಖಜಾಂಚಿ ಪ್ರಭಾವತಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ ಸೇರಿದಂತೆ ಇತರ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.