ಭಾನುವಾರ, ಜನವರಿ 19, 2020
27 °C

ಹೊಸ ಭರವಸೆ

ಪ್ರೊ. ಕೆ.ಎಸ್. ಭಗವಾನ್,ಮೈಸೂರು Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ನೆಲೆಗೊಳ್ಳುತ್ತಿದೆ. ಹಿಂದಿನ ಹೋಮ ಹವನ ನಿಂತಿದೆ ಎನ್ನಬಹುದು. ಆದರೂ ಕೆಲವರು ಸಚಿವರು ತಮ್ಮ ತಮ್ಮ ಕಚೇರಿಯಲ್ಲಿ ಪೂಜೆ ಮಾಡಿದ್ದಾರೆ/ಮಾಡಿಸಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಿ ಅವರು ಸುಖವಾಗಿ ಬದುಕುವಂತೆ ಮಾಡುವುದೇ ನಿಜವಾದ ಪೂಜೆ ಎಂದು ತಿಳಿಯುವ ಅಗತ್ಯ ಇದೆ.ಆರಾಧನೆ, ಯಜ್ಞ, ಇತ್ಯಾದಿಯೆಲ್ಲ ವಂಚನೆ ಎಂದು ಜನರು ಅರಿಯಬೇಕು.ಸಚಿವ ಆಂಜನೇಯ ಅವರು ರಾಹುಕಾಲ ಗುಳಿಕಕಾಲ ನೋಡದೆ, ಊದುಬತ್ತಿ ಉರಿಸದೆ, ಗಂಟೆ ಬಾರಿಸದೆ ವಿಶ್ವಗುರು ಬಸವಣ್ಣ ಮತ್ತು ವಿಶ್ವಬಂಧು ಮರುಳಸಿದ್ಧರ ಚಿತ್ರಪಟಗಳಿಗೆ ಹಾರ ಹಾಕುವುದರ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)