`ಪಿಯುಸಿ~, `ಪ್ರೇಮಿಸಂ~ ಚಿತ್ರಗಳಲ್ಲಿ ಚಾಕೊಲೇಟ್ ಬಾಯ್ ತರಹ ಇದ್ದ ಚೇತನ್ ಚಂದ್ರ ಈಗ ಎಂಟು ಪ್ಯಾಕ್ ದೇಹ ರೂಪಿಸಿಕೊಂಡು ಹೊಸ ಪಾತ್ರದ ಬಣ್ಣಕ್ಕೆ ಮುಖವೊಡ್ಡಿದ್ದಾರೆ.

ಸೌಮ್ಯ ನಗುವಿನ ಹುಡುಗ ಚೇತನ್ ಚಂದ್ರ ರಫ್ ಅಂಡ್ ಟಫ್ ಆಗಲು ತೀರ್ಮಾನಿಸಿದಂತಿದೆ. ತಮ್ಮ ದೇಹವನ್ನು ಎಂಟು ಪ್ಯಾಕುಗಳಲ್ಲಿ ಹುರಿಗಟ್ಟಿಸಿರುವ ಅವರು; ಕಣ್ಣಲ್ಲೂ ದೇಹಕ್ಕೆ ತಕ್ಕ ಒರಟು ಭಾವ ಮೂಡಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ದೇಹದಾರ್ಢ್ಯ ಪ್ರದರ್ಶನ ಮಾಡುವ ನಾಯಕರನ್ನು ಇಷ್ಟಪಡುತ್ತಿದ್ದ ಚೇತನ್ಗೆ ಇದೀಗ ಅಂಥದ್ದೇ ಅವಕಾಶ ಸಿಕ್ಕಿದೆ.

ನಾಯಕನಾಗಬೇಕೆಂಬ ಕನಸು ಹೊತ್ತು `ಪಿಯುಸಿ~ ಚಿತ್ರಕ್ಕಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದವರು ಚೇತನ್ ಚಂದ್ರ. ನಂತರ `ಪ್ರೇಮಿಸಂ~, `ರಾಜಧಾನಿ~, `ಜರಾಸಂಧ~ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ಎಲ್ಲಾ ಚಿತ್ರಗಳಲ್ಲೂ ಅವರಿಗೆ ಸೌಮ್ಯ ಸ್ವಭಾವದ ಪಾತ್ರವೇ ಸಿಕ್ಕಿತ್ತು. ಆರು ತಿಂಗಳ ಹಿಂದೆ ನಿರ್ದೇಶಕ ಬಿ. ಕೆ. ಚಂದ್ರಹಾಸ್ ಅವರು ಚೇತನ್ ಚಂದ್ರ ಅವರನ್ನು `ಸಿಂಹರಾಶಿ~ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಿದರು. ಅಂದಿನಿಂದ ಆರಂಭವಾಯಿತು ಚೇತನ್ ಚಂದ್ರ ಅವರ ಎಂಟು ಪ್ಯಾಕುಗಳ ಕತೆ.

`ಸಿನಿಮಾದ ಹೆಸರಲ್ಲೇ ಫೋರ್ಸ್ ಇದೆ. ಅದರಿಂದ ಚಿತ್ರದಲ್ಲಿ ಎಂದಿನಂತೆ ಸೌಮ್ಯವಾಗಿ ಕಾಣಿಸಿಕೊಂಡರೆ ಯಾರಿಗೆ ಇಷ್ಟವಾಗುತ್ತದೆ ಹೇಳಿ? ಅದಕ್ಕೆ ಹೆಸರಿಗೆ ತಕ್ಕಂತೆ ದೇಹದಾರ್ಢ್ಯ ರೂಪಿಸಿಕೊಳ್ಳಲು ಸಿದ್ಧವಾದೆ.

ದುನಿಯಾ ವಿಜಯ್, ಪ್ರೇಮ್ ಮುಂತಾದವರಿಗೆ ತರಬೇತಿ ನೀಡಿದ ಪಾನಿಪುರಿ ಕಿಟ್ಟಿ ಅವರ ಬಳಿ ನಾನೂ ದೇಹ ತಿದ್ದಿಕೊಳ್ಳಲು ತೀರ್ಮಾನಿಸಿದೆ. ಪ್ರತಿದಿನ ಏಳು ಗಂಟೆ ವರ್ಕ್ಔಟ್ ಮಾಡ್ತಿದ್ದೆ. ಅವರು ಹೇಳಿದಷ್ಟೇ ಪ್ರಮಾಣದಲ್ಲಿ ಚಪಾತಿ, ತರಕಾರಿ, ಹಣ್ಣು, ಮೊಟ್ಟೆ, ಕೊಂಚ ಅನ್ನ ತಿನ್ನುತ್ತಿದ್ದೆ.

ಆರಂಭದ ಎರಡು ತಿಂಗಳು ವರ್ಕ್ಔಟ್ಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದೆ. ಉಳಿದ ನಾಲ್ಕು ತಿಂಗಳು ಎಡೆಬಿಡದೆ ವರ್ಕ್ಔಟ್ ಮಾಡಿ ಹೀಗಾಗಿದ್ದೇನೆ. ಈಗ ಆರು ಪ್ಯಾಕ್ ಮಾಡುವುದು ಮಾಮೂಲಾಗಿದೆ. ಅದಕ್ಕೇ ಎಂಟು ಪ್ಯಾಕ್ ಮಾಡಿಕೊಂಡಿರುವೆ~ ಎನ್ನುತ್ತಾರೆ ಚೇತನ್.

`ಜನ ಸಿನಿಮಾ ಇಷ್ಟಪಟ್ಟರೆ ನನ್ನ ಶ್ರಮ ಸಾರ್ಥಕ. ನನ್ನನ್ನು ಹೀಗೆಯೇ ನೋಡಲು ಅವರು ಇಷ್ಟಪಟ್ಟರೆ ಖಂಡಿತವಾಗಿಯೂ ಬಾಯಿಗೆ ಬೀಗ ಹಾಕಿಕೊಂಡು ನಿರಂತರವಾಗಿ ವರ್ಕ್ಔಟ್ ಮಾಡ್ತೀನಿ. ನನಗೆ ಹೊಟ್ಟೆ ಹಸಿವಿಗಿಂತ ಹೆಚ್ಚಾಗಿ ಯಶಸ್ಸಿನ ಹಸಿವಿದೆ~ ಎನ್ನುವ ಚೇತನ್ ಈಗ ತಿನ್ನುವ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು.

ಮೊನ್ನೆ ತಮ್ಮ ಬರ್ತ್ಡೇ ಪಾರ್ಟಿಯಲ್ಲಿ ಸಣ್ಣ ಕೇಕ್ಪೀಸನ್ನೂ ಬಾಯಿಗೆ ಇಡದ ಚೇತನ್ ಚಂದ್ರ ಅನ್ನದ ರುಚಿಯೇ ನೆನಪಿಲ್ಲದಷ್ಟು ಅದನ್ನು ಮರೆತಿದ್ದಾರಂತೆ. ಇಷ್ಟೆಲ್ಲಾ ಬಾಯಿಬಂದ್ ಮಾಡಿಕೊಂಡು ದೇಹವನ್ನು ಕಟ್ಟುಮಸ್ತು ಮಾಡಿಕೊಂಡಿರುವ ಅವರಿಗೆ ತಮ್ಮ ಹೊಸ ಗೆಟಪ್ನಿಂದ ಅದೃಷ್ಟ ಖುಲಾಯಿಸಬಹುದು ಎನಿಸಿದೆ.

ಎಂಟು ಪ್ಯಾಕುಗಳ ಭಾವಚಿತ್ರಗಳಲ್ಲಿ `7 ಆಮ್ ಅರಿವು~ ಚಿತ್ರದ ನಾಯಕ ಸೂರ್ಯ ಅವರಂತೆ ಕಾಣುತ್ತೀರಲ್ಲ? ಎಂದು ಕೆಣಕಿದರೆ, `ನಮ್ಮ ಚಿತ್ರದ ಕತೆಗೂ `7 ಆಮ್ ಅರಿವು~ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಫೋಟೋಶೂಟ್ ಮಾಡುವಾಗ ಆ ರೀತಿ ನಿಲ್ಲಲು ಹೇಳಿದರು ಅಷ್ಟೇ.

ಜೊತೆಗೆ ಚಿತ್ರದಲ್ಲಿ ನನ್ನದು ಅಘೋರಿಯ ಪಾತ್ರವೂ ಅಲ್ಲ. ಆದರೆ ಅಪರೂಪದ ಪಾತ್ರವೊಂದು ಸಿಕ್ಕಿದೆ ಎಂದು ಹೇಳಬಹುದು. ಅಂಥ ಸವಾಲಿನ ಪಾತ್ರಕ್ಕಾಗಿಯೇ ನಾನು ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ಕೇವಲ ಹೊಡೆದಾಟ ಬಡಿದಾಟ ಅಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಬೇಕಾದ ಎಲ್ಲಾ ಅಂಶಗಳೂ ಇವೆ~ ಎಂದು ಸ್ಪಷ್ಟನೆ ನೀಡುತ್ತಾರೆ.

`ಸಿಂಹರಾಶಿ~ ಚಿತ್ರವನ್ನು ಸಿದ್ದು ಪಾಟೀಲ ಎಂಬುವವರು ನಿರ್ಮಿಸುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆಯಂತೆ. ಇದೇ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.