ದಾವಣಗೆರೆ: ‘ಜಾತಿ ಮಠಗಳಿಂದ ಸಮಾಜ ಕಲಷಿತಗೊಂಡ ನಿದರ್ಶನಗಳಿದ್ದರೆ ತೋರಿಸಿ. ರಂಭಾಪುರಿ ಪೀಠ ಜಾತ್ಯತೀತವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟವು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರಿಗೆ ಸವಾಲು ಹಾಕಿದೆ.

‘ಜಾತಿ ಮಠಗಳಿಂದ ಸಮಾಜ ಕಲುಷಿತ’ ಎಂಬುದಾಗಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಭದ್ರಾವತಿಯಲ್ಲಿ ನೀಡಿದ ಹೇಳಿಕೆಯನ್ನು ಮಠಾಧೀಶರ ಒಕ್ಕೂಟ ಖಂಡಿಸಿದೆ. ‘ಈ ಹೇಳಿಕೆಯನ್ನು ಹಿಂಪಡೆಯದೇ ಇದ್ದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದೆ.

‘ಶ್ರೇಣಿಕೃತ ವ್ಯವಸ್ಥೆಯಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯವನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಜಾತಿ ಮಠ–ಪೀಠಗಳು ಸ್ಥಾಪನೆಯಾಗಿವೆ. ಧಾರ್ಮಿಕ ಅಸ್ಮಿತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಭಕ್ತರೇ ಸೇರಿಕೊಂಡು ಮಠಗಳನ್ನು ಕಟ್ಟಿದ್ದಾರೆ. ಮಠ–ಪೀಠಗಳು ಜಾತಿ ಹೆಸರಿನಲ್ಲಿದ್ದರೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿವೆಯೇ ಹೊರತು ಸಮಾಜ ಕಲುಷಿತಗೊಳಿಸುತ್ತಿಲ್ಲ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಂಚಪೀಠಗಳು ಶೋಷಿತ ಸಮುದಾಯದ ಜನರನ್ನು ಸಮೀಪಕ್ಕೆ ಕರೆದು ಶಿಕ್ಷಣ ಮತ್ತು ಸಂಸ್ಕಾರ ನೀಡಿದ್ದರೆ ಜಾತಿ ಮಠ ಕಟ್ಟಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿರಲಿಲ್ಲ. ಈ ಮಠಗಳ ಪೀಠಾಧಿಪತಿಗಳು ಶೋಷಿತ ಸಮುದಾಯದ ಸ್ವಾಮೀಜಿಗಳ ಜೊತೆಗೂ ಕುಳಿತುಕೊಳ್ಳುವುದಿಲ್ಲ. ಜಾತಿಯ ಅಜ್ಞಾನವನ್ನು ಹೋಗಲಾಡಿಸಿ ಜ್ಯೋತಿಯಾಗಿ ಬೆಳಗಿಸುವ ಪ್ರಯತ್ನವನ್ನು ಜಾತಿ ಮಠ–ಪೀಠಗಳು ಮಾಡುತ್ತಿವೆ. ಇದನ್ನು ರಂಭಾಪುರಿ ಶ್ರೀ ಅರ್ಥ ಮಾಡಿಕೊಳ್ಳಬೇಕು’ ಎಂದು ಭಗೀರಥ ಗುರುಪೀಠದ ಪುರಷೋತ್ತಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಧೇಯ ಹೊಂದಿರುವ ಪಂಚಪೀಠಗಳು ಎಲ್ಲ ಜನವರ್ಗಗಳನ್ನು ಗೌರವಿಸುವ ಕೆಲಸ ಮಾಡಬೇಕಿತ್ತು. ಆದರೆ, ರಂಭಾಪುರಿ ಶ್ರೀ ಮಾನವ ಧರ್ಮಕ್ಕೆ ತದ್ವಿರುದ್ಧ ಹೇಳಿಕೆ ನೀಡಿ ನೋವುಂಟು ಮಾಡಿದ್ದಾರೆ’ ಎಂದರು.

‘ರಂಭಾಪುರಿ ಶ್ರೀ ಹೇಳಿಕೆ ಜಾತಿ ವ್ಯವಸ್ಥೆಯನ್ನು ಪೋಷಣೆ ಮಾಡುವ ಪ್ರಯತ್ನಕ್ಕೆ ಪೂರಕವಾಗಿದೆ. ಅವರು ಕೂಡಲೇ ಹೇಳಿಕೆ ಹಿಂಪಡೆಯಬೇಕು. ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮಾತು ಮುಂದುವರಿಸಿದರೆ ಎಲ್ಲ ಮಠಾಧೀಶರು ಜೊತೆಗೂಡಿ ದಾವಣಗೆರೆಯಲ್ಲಿ ಪ್ರಬಲ ಪ್ರತಿರೋಧ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಯಾದವ ಗುರುಪೀಠದ ಶ್ರೀಕೃಷ್ಣ ಯಾದವ ಸ್ವಾಮೀಜಿ, ನಾರಾಯಣಗುರು ಮಹಾಸಂಸ್ಥಾನದ ಆರ್ಯ ರೇಣುಕಾನಂದ ಸ್ವಾಮೀಜಿ, ಹೆಳವ ಗುರುಪೀಠದ ಬಸವ ಬೃಂಗೇಶ್ವರ ಸ್ವಾಮೀಜಿ, ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಅನ್ನಧಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಮೇದಾರ ಗುರುಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಹಾಜರಿದ್ದರು.

‘₹ 100 ಕೋಟಿ ಅನುದಾನ ಮರಳಿಸುತ್ತೀರಾ?’

‘ಬೇಡ ಜಂಗಮದ ಹೆಸರಿನಲ್ಲಿ ಸರ್ಕಾರದ ₹100 ಕೋಟಿಗೂ ಅಧಿಕ ಅನುದಾನ ಬಳಕೆಯಾಗಿದೆ. ಪಂಚಪೀಠಗಳ ಶಾಖಾ ಮಠಗಳೇ ಈ ಅನುದಾನ ಪಡೆದಿವೆ. ಇವು ನಿಜಕ್ಕೂ ಪರಿಶಿಷ್ಟ ಜಾತಿಗೆ ಸೇರಿದ ಮಠಗಳೇ ಎಂಬುದನ್ನು ಸಾಭೀತುಪಡಿಸಿ. ಇಲ್ಲವಾದರೆ, ಸರ್ಕಾರದ ಅನುದಾನ ಪಡೆದಿರುವ ಕುರಿತು ಶ್ವೇತಪತ್ರ ಹೊರಡಿಸಿ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸವಾಲು ಹಾಕಿದರು.

‘ಮೀಸಲಾತಿಯ ವಿಚಾರದಲ್ಲಿ 2003ರಲ್ಲಿ ಕೇಂದ್ರ ಸರ್ಕಾರದ ಬಳಿ ಪಂಚಪೀಠಗಳು ಇಟ್ಟ ಬೇಡಿಕೆ ಗುಟ್ಟಾಗಿ ಉಳಿದಿಲ್ಲ. ನಿಮ್ಮ ಜಾತಿ ಹೊರತುಪಡಿಸಿ ಉಳಿದ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

ರಂಭಾಪುರಿ ಪೀಠವೂ ಒಂದು ಜಾತಿ ಮಠ. ವೀರಸೋಮೇಶ್ವರ ಸ್ವಾಮೀಜಿ ಆ ಜಾತಿ ಮಠದ ಗುರು. ಅವರು ಮತ್ತೊಂದು ಜಾತಿ ಮಠವನ್ನು ಅವಹೇಳನ ಮಾಡಿರುವುದು ಖಂಡನೀಯ.
- ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ

ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿರುವ ಮಠ–ಪೀಠಗಳು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಇಂತಹ ಗುರುಪೀಠಗಳ ಬಗ್ಗೆ ರಂಭಾಪುರಿ ಶ್ರೀ ನೀಡಿದ ಹೇಳಿಕೆ ಘಾಸಿಗೊಳಿಸಿದೆ.
- ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.