ಬುಧವಾರ, ಮೇ 12, 2021
17 °C

ಹೊಸ ವಿವಾದದಲ್ಲಿ ಮಮತಾ ಬ್ಯಾನರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತಾ (ಪಿಟಿಐ): ರಾಜ್ಯ ಶಿಕ್ಷಣ ಸಮಿತಿಯ ಶಿಫಾರಸಿನಂತೆ ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಪಠ್ಯಕ್ರಮದಿಂದ ರಷ್ಯ ಕ್ರಾಂತಿ, ಮಾರ್ಕ್ಸ್ ಮತ್ತು ಇತರ ಕಮ್ಯೂನಿಸ್ಟ್ ನಾಯಕರ ಚರಿತ್ರೆಯನ್ನು ಕೈಬಿಡಲು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಿರ್ಧರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.34 ವರ್ಷಗಳ ಕಮ್ಯುನಿಸ್ಟ್ ಆಡಳಿತ ಅಂತ್ಯಗೊಂಡ ಕೆಲವೇ ತಿಂಗಳುಗಳಲ್ಲಿ ಮಮತಾ ಸರ್ಕಾರವು ಪಠ್ಯಪುಸ್ತಕದಿಂದಲೂ ಕಮ್ಯುನಿಸ್ಟ್ ಇತಿಹಾಸವನ್ನು ತೆಗೆದು ಹಾಕಲು ಮುಂದಾಗಿದ್ದಾರೆ. ಇದರಿಂದ ಎಡ ಪಕ್ಷಗಳ ಧುರೀಣರು ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.ಇತಿಹಾಸ ಪುಸ್ತಕದಲ್ಲಿದ್ದ ಅಸಮತೋಲನ ಹೋಗಲಾಡಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಯನ್ನು ಸಮರ್ಥಿಸಿಕೊಂಡಿದೆ.ಪಠ್ಯಕ್ರಮ ಬದಲಿಸಲಾಗಿದೆಯೇ ಹೊರತು ಇತಿಹಾಸವನ್ನು ತಿರುಚಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರೈನ್ ತಿಳಿಸಿದ್ದಾರೆ. ಚರಿತ್ರೆಯು ಬೊಲ್‌ಶೆವಿಕಾದಿಂದ ಆರಂಭವಾಗಿ ಬಸು ಅಥವಾ ಭಟ್ಟಾಚಾರ್ಯರಲ್ಲಿ ಕೊನಗೊಳ್ಳುವುದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ. ಪಶ್ಚಿಮ ಬಂಗಾಳದ ಶಾಲಾ ಪಠ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಆದ್ಯತೆ ನೀಡಲಾಗಿತ್ತು.ಆದ್ದರಿಂದ ಸಮತೋಲನ ಕಾಪಾಡಲು ಕೆಲವು ಬದಲಾವಣೆಗೆ ಶಿಫಾರಸು ಮಾಡಲಾಗಿದೆ ಎಂದು ಶಿಕ್ಷಣ ಸಮಿತಿ ಮುಖ್ಯಸ್ಥ ಅವಿಕ್ ಮುಜುಮ್‌ದಾರ್ ತಿಳಿಸಿದ್ದಾರೆ.

ಸೋಮನಾಥ ಚಟರ್ಜಿ ಟೀಕೆ

ಪ್ರೌಢಶಾಲಾ ಚರಿತ್ರೆಯ ಪಠ್ಯಕ್ರಮದಿಂದ ರಷ್ಯದ ಕ್ರಾಂತಿ, ಮಾರ್ಕ್ಸ್ ಮತ್ತು ಎಂಗೆಲ್ಸ್ ಅವರನ್ನು ಕೈಬಿಟ್ಟಿರುವ ಮಮತಾ ಕ್ರಮವನ್ನು ಲೋಕಸಭೆಯ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ಟೀಕಿಸಿದ್ದಾರೆ.ಮಮತಾ ಅವರಿಗೆ ಈ ಬಗ್ಗೆ ಯಾರು ಸಲಹೆ ನೀಡಿದ್ದಾರೋ ಗೊತ್ತಿಲ್ಲ. ಪಠ್ಯ ಕ್ರಮದಲ್ಲಿ ರಷ್ಯ ಕ್ರಾಂತಿ ಮತ್ತು ಮಾರ್ಕ್ಸ್ ಬಗ್ಗೆ ಇದ್ದಾಕ್ಷಣ ವಿದ್ಯಾರ್ಥಿಗಳು ಕಮ್ಯುನಿಸ್ಟ್ ಆಗುತ್ತಾರೆ ಎಂಬ ಭಾವನೆ ತಪ್ಪು ಎಂದಿದ್ದಾರೆ.ಪಠ್ಯಕ್ರಮದಿಂದ ಐತಿಹಾಸಿಕ ಘಟನೆಗಳನ್ನು ಮತ್ತು ಪ್ರಮುಖ ವ್ಯಕ್ತಿಗಳ ಚರಿತ್ರೆಯನ್ನು ಕೈಬಿಡುವುದು ನಿಜಕ್ಕೂ ವಿವಾದಾತ್ಮಕ ನಿರ್ಧಾರ ಎಂದಿರುವ ಅವರು, ಇದೊಂದು ಅನಗತ್ಯ ಕ್ರಮ ಎಂದಿದ್ದಾರೆ.ಖಂಡನೆ: ಪಠ್ಯ ಕ್ರಮದಿಂದ ರಷ್ಯ ಕ್ರಾಂತಿ ಮತ್ತು ಮಾರ್ಕ್ಸ್‌ನನ್ನು ತೆಗೆದುಹಾಕಿದ ಕ್ರಮವನ್ನು ಎಡಪಕ್ಷಗಳು ಖಂಡಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.