ಹೋಮಿ ಸೇತ್ನಾ: ಟಿಪ್ಪಣಿ

7

ಹೋಮಿ ಸೇತ್ನಾ: ಟಿಪ್ಪಣಿ

Published:
Updated:

ನುಸರ್‌ವಾನ್‌ಜೀ ಸೇತ್ನಾ (1924-2010) ಹೆಸರು ಭಾರತೀಯ ನ್ಯೂಕ್ಲಿಯಾರ್ ಅಧ್ಯಾಯದಲ್ಲಿ ಮರೆಯಲಾರದಂಥದ್ದು. ಅವರ ಬದುಕಿನ ಕುರಿತ ಸರಳ ಪ್ರಶ್ನೋತ್ತರಗಳು ಇಲ್ಲಿವೆ...ಹೋಮಿ ಸೇತ್ನಾ ಯಾರು?

ಅವರು ಪ್ರಖ್ಯಾತ ನ್ಯೂಕ್ಲಿಯಾರ್ ವಿಜ್ಞಾನಿ. ರಾಸಾಯನಿಕ ವಿಜ್ಞಾನಿಯಾಗಿದ್ದ ಅವರು 1966ರಿಂದ 1972ರವರೆಗೆ `ಬಾರ್ಕ್~ನಲ್ಲಿ ಕೆಲಸ ಮಾಡಿದರು. 1972ರಿಂದ 1983ರವೆರೆಗೆ ಅಣು ವಿದ್ಯುತ್ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.ಅವರ ಮರೆಯಲಾಗದ ಸಾಧನೆ ಏನು?

ಭಾರತದಲ್ಲಿ ಮೊದಲ ಬಾರಿಗೆ ನ್ಯೂಕ್ಲಿಯಾರ್ ಪರೀಕ್ಷೆ ನಡೆಸಿದ ತಂಡದಲ್ಲಿದ್ದ ಪ್ರಮುಖರು ಅವರು.ಮೊದಲಿಗೆ ನ್ಯೂಕ್ಲಿಯಾರ್ ಪರೀಕ್ಷೆ ನಡೆದದ್ದು ಎಂದು, ಎಲ್ಲಿ?

ರಾಜಸ್ತಾನದ ಪೋಖ್ರಾನ್‌ನಲ್ಲಿ ಮೇ 18, 1974ರಲ್ಲಿ ನ್ಯೂಕ್ಲಿಯಾರ್ ಪರೀಕ್ಷೆ ನಡೆಯಿತು. ಅದು ಯಶಸ್ವಿಯೂ ಆಗಿತ್ತು.ಮೊದಲ ಪರೀಕ್ಷಾ ಸ್ಫೋಟದ ನಂತರ ಅವರು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಯಾವ ಸಂದೇಶ ಕಳಿಸಿದ್ದರು?`ಬುದ್ಧ ನಗುತ್ತಿದ್ದಾನೆ~ ಎಂಬ ಸಂದೇಶ ಕಳಿಸಿದ್ದರು. ಅವರು ಪೋಖ್ರಾನ್-1 ಪರೀಕ್ಷೆಗೆ `ನಗುವ ಬುದ್ಧ~ (ಸ್ಮೈಲಿಂಗ್ ಬುದ್ಧ) ಎಂಬ ಕೋಡ್ ವರ್ಕ್ ನೀಡಿದ್ದರು.ಹೋಮಿ ಸೇತ್ನಾ ಇನ್ಯಾವುದಕ್ಕೆ ಹೆಸರುವಾಸಿ?

ಭಾರತದಲ್ಲಿ ವಿವಿಧೆಡೆ ಅಣು ಸಂಬಂಧಿ ಕೇಂದ್ರಗಳನ್ನು ಸ್ಥಾಪಿಸಿದವರಲ್ಲಿ ಅವರು ಮುಖ್ಯರು. 1954ರಲ್ಲಿ ಟ್ರಾಂಬೆಯಲ್ಲಿ ಇಂಧನ ಮರು ಸಂಸ್ಕರಣ ಘಟಕ ಸ್ಥಾಪಿಸಿದರು. ಭಾರತದಲ್ಲಿ ಮೊದಲ ಯುರೇನಿಯಂ ಮಿಲ್‌ಗಳನ್ನು ಪ್ರಾರಂಭಿಸಿದ್ದೂ ಅವರೇ. ಪುಣೆಯಲ್ಲಿನ ಮಹಾರಾಷ್ಟ್ರ ವಿಜ್ಞಾನಗಳ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry