ಹೋಳಿಹಬ್ಬದ ನಂತರ ಕೆಲ ದಿನಗಳವರೆಗೆ ದಾಂಡೇಲಿಯಲ್ಲಿ ಗೌಳಿವಾಡಗಳ ಯುವಕರು ವಿಶಿಷ್ಟ ವೇಷ ಧರಿಸಿ ಕೈಯಲ್ಲಿ ನವಿಲುಗರಿಗಳನ್ನು ಹಿಡಿದು ವಾದ್ಯಗಳೊಂದಿಗೆ ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯ ಕುಣಿತವನ್ನು ಪ್ರದರ್ಶಿಸುತ್ತಾ ನಾಗರಿಕರ ಗಮನಸೆಳೆಯುತ್ತಾರೆ.

ದಾಂಡೇಲಿ ಹೊರವಲಯದ ಕೆಲವು ಅರಣ್ಯ ಪ್ರದೇಶಗಳಲ್ಲಿ ಇರುವ ಗೌಳಿಗಳ ದಡ್ಡಿಗಳಲ್ಲಿ ತಮ್ಮ ಸಾಕುಪ್ರಾಣಿಗಳೊಂದಿಗೆ ಬದುಕುವ ಈ ಗೌಳಿಗರ ಮುಖ್ಯ ಉದ್ಯೋಗ ಹಾಲು ಮಾರುವುದು. ಪ್ರತಿವರ್ಷ ಹೋಳಿಹಬ್ಬದ ನಂತರ ನಗರದ ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ವಸತಿ ಬಡಾವಣೆಗಳಲ್ಲಿ ಅಂಗಡಿ ಹಾಗೂ ಮನೆಗಳಿಗೆ ತೆರಳಿ ವಾದ್ಯವೃಂದದೊಂದಿಗೆ ತಮ್ಮದೇ ಆದ ಗತ್ತಿನಲ್ಲಿ ಕುಣಿದು ಖುಷಿಗಾಗಿ ಕೊಟ್ಟಷ್ಟು ಹಣ ಪಡೆಯುವುದು ಸರ್ವೇ ಸಾಮಾನ್ಯವಾಗಿದೆ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಈ ಜನಾಂಗ ಹಳಿಯಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತದೆ.

ತಲೆತಲಾಂತರದಿಂದಲೂ ಇವರ ಸಾಮಾಜಿಕ ಸ್ಥಿತಿ ಬಡತನ, ಅನಕ್ಷರತೆ ಹಾಗೂ ನಿರುದ್ಯೋಗಗಳಿಂದ ಶೋಚನೀಯ ಸ್ಥಿತಿಯಲ್ಲಿಯೇ ಉಳಿದಿದೆ. ಇವರ ಮಕ್ಕಳು ಸುಲಭವಾಗಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೇನೋ ನಿಜ. ಆದರೆ ಶಿಕ್ಷಣವನ್ನು ಮುಂದುವರಿಸಿ ಉನ್ನತ ವ್ಯಾಸಾಂಗದತ್ತ ಸಾಗುವವರ ಸಂಖ್ಯೆ ತೀರಾ ವಿರಳ. ಈ ಭಾಗದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ಗೌಳಿಗರ ಬದುಕಿಗೆ ಹೊಸ ಕಾಯಕಲ್ಪವನ್ನು ನೀಡಬಲ್ಲ ಕ್ರೀಯಾತ್ಮಕ ಯೋಜನೆಯನ್ನು ಸರ್ಕಾರ ರೂಪಿಸಿಕೊಟ್ಟರೆ ಇತರ ಜನಾಂಗಗಳಂತೆ ಇವರ ಕುಟುಂಬಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಉತ್ತಮ ಸಾಮಾಜಿಕ ನೆಲೆಗಟ್ಟನ್ನು ಕಂಡುಕೊಳ್ಳಲು ಸಾಧ್ಯವಾದೀತು. ಕೆಲ ವರ್ಷಗಳಿಂದ ಈ ಜನಾಂಗದ ಮುಖಂಡರು ಸರ್ಕಾರದ ಮಟ್ಟದಲ್ಲಿ ತಮ್ಮ ದಯನೀಯ ಬದುಕಿನ ಸ್ಥಿತಿಗತಿಗಳ ಕುರಿತು ಅನೇಕ ಬಾರಿ ಮನವಿಯನ್ನು ಸಲ್ಲಿಸಿದ್ದುಂಟು. ಆದರೆ ಇದುವರೆಗೂ ಇವರ ಅಭಿಲಾಷೆಗಳು ಈಡೇರಿಲ್ಲ. ಇಂದಿಗೂ ಈ ಜನಾಂಗ ಒಂದು ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.