ಬೆಳಗಾವಿ: ‘ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರು ದೇಶದ ಮಹಾನ್ ಚೇತನಗಳಲ್ಲಿ ಒಬ್ಬ ರಾಗಿದ್ದಾರೆ. ಅವರ ಜೀವನಶೈಲಿ ಇಡೀ ಮಾನವಕುಲಕ್ಕೆ ಆದರ್ಶಪ್ರಾಯ ವಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಶಾಂತಿನಾಥ ದಿಬ್ಬದ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 57ನೇ ಮಹಾಪರಿ ನಿರ್ವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಕಾಂತ ಶಿವಕೇರಿ ಮಾತನಾಡಿ, ‘ಪ್ರತಿಯೊಬ್ಬರು ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತೆಯಿಂದ ಬಾಳ ಬೇಕು. ಸ್ವಾವಲಂಬನೆ ಹಾಗೂ ಸ್ವಾಭಿ ಮಾನದ ಬದುಕನ್ನು ನಡೆಸಬೇಕು. ಆಗ ದೇಶ ಅಭಿವೃದ್ಧಿ ಪಥದತ್ತ ಮುನ್ನುಗ್ಗಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.

ವಿಶ್ವವಿದ್ಯಾಲಯದ ಎಸ್.ಸಿ./ ಎಸ್.ಟಿ. ಘಟಕದ ವಿಶೇಷಾಧಿಕಾರಿ ಡಾ. ಮಹಾಂತೇಶ ಚಲವಾದಿ, ‘ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಮಾಜದಲ್ಲಿ ಬದಲಾವಣೆ ತರಲು ಅವಿರತವಾಗಿ ಶ್ರಮಿಸಿದ್ದಾರೆ. ಏಕತೆಗಾಗಿ, ಅನನ್ಯತೆಗಾಗಿ ವಿಶಿಷ್ಟ ಕೊಡುಗೆ ನೀಡಿದ್ದಾರೆ’ ಎಂದರು.

ಕುಲಪತಿಗಳ ವಿಶೇಷಾಧಿಕಾರಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಪ್ರೊ. ಸಿದ್ದು ಅಲಗೂರ, ಎಸ್.ಸಿ./ಎಸ್.ಟಿ. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಡಿ.ಎನ್. ಪಾಟೀಲ ಉಪಸ್ಥಿತರಿದ್ದರು. ಸಂಜೀವ ಹಾದಿಮನಿ ವಂದಿಸಿದರು. ಸುರೇಶ ಹಾದಿಮನಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.