ಬುಧವಾರ, ಜನವರಿ 22, 2020
28 °C

‘ಅಧಿಕ ಮಾಸಾಶನವೇ ಅಸಮಾಧಾನದ ಮೂಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಧಿಕ ಮಾಸಾಶನವೇ  ಅಸಮಾಧಾನದ ಮೂಲ’

ಬೀದರ್‌: ‘ಅಂಗವಿಕಲತೆಯ ಪ್ರಮಾಣ ಆಧರಿಸಿ ಮಾಸಾಶನದ ಮೊತ್ತ ನಿಗದಿಯಾಗುತ್ತದೆ. ಎಲ್ಲರೂ ಹೆಚ್ಚಿನ ಮಾಸಾಶನವನ್ನೇ ಬಯಸುತ್ತಾರೆ. ಸಾಮಾನ್ಯವಾಗಿ ಅಸಮಾಧಾನದ ಮಾತು ಕೇಳಿ ಬರಲು ಇದೇ ಕಾರಣ’.ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳಿಗೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಬನ್ಸಿ ಪವಾರ್‌ ಅವರ ಪ್ರತಿಕ್ರಿಯೆ ಇದು. ನಿಯಮದ ಪ್ರಕಾರ ಶೇ 40ರಷ್ಟು ಅಂಗ ವೈಕಲ್ಯತೆ ಇದ್ದಲ್ಲಿ ಮಾಸಿಕ ರೂ. 500, ಶೇ 75ಕ್ಕೂ ಹೆಚ್ಚು ಅಂಗವೈಕಲ್ಯತೆ ಇದ್ದರೆ  ಮಾಸಿಕ ರೂ. 1,200 ಮಾಸಾಶನ ಇರುತ್ತದೆ. ಆದರೆ ಎಲ್ಲರೂ ಹೆಚ್ಚಿನ ಮೊತ್ತವನ್ನೇ ಬಯಸುತ್ತಾರೆ. ಅದಕ್ಕಾಗಿ ಪ್ರಮಾಣಪತ್ರ ಬೇಕು ಎನ್ನುತ್ತಾರೆ.ಆಧಾರ್‌ ಯೋಜನೆಯಡಿ ಜಿಲ್ಲೆಗೆ ವಾರ್ಷಿಕ ಎಂಟು ಮಂದಿಗೆ ನೆರವು ನೀಡುವ ಅವಕಾಶ ಮಂಜೂರಾಗುತ್ತದೆ. ಇದರ ಪ್ರಕಾರ, ₨ 20 ಸಾವಿರ ಸಾಲ, ₨ 15 ಸಾವಿರ ನೆರವು ಸಿಗಲಿದೆ. ₨ 20 ಸಾವಿರ ಸಾಲವನ್ನು ಮರು ಪಾವತಿಸಬೇಕು. ಈ ಯೋಜನೆ 1995ರಲ್ಲಿ ಆರಂಭಿಸಲಾಗಿದ್ದು, ಇದುವರೆಗೂ ಸಾಲದ ಮೊತ್ತ ಒಂದು ಪೈಸೆಯೂ ವಾಪಸು ಬಂದಿಲ್ಲ. ಇದು ಜಿಲ್ಲೆಯಲ್ಲಿನ ವಾಸ್ತವ ಸ್ಥಿತಿ.  ಒಬ್ಬ ಫಲಾನುಭವಿ ಸ್ವಾವಲಂಬಿಯಾಗಿ ನೆಲೆಯೂರಿದ ನಂತರ ಪಡೆದ ಸಾಲ ಮರುಪಾವತಿಸಿದರೆ, ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ನೆರವು ತಲುಪುತ್ತದೆ. ಆದರೂ, ಆದಷ್ಟು ಹೆಚ್ಚು ಜನರಿಗೆ ಸೌಲಭ್ಯ ತಲುಪಿಸಲು ಯತ್ನಿಸಲಾಗುತ್ತಿದೆ ಎನ್ನುತ್ತಾರೆ ಅವರು.ಇಲಾಖೆ  ದಾಖಲೆಗಳ ಪ್ರಕಾರ, ಜಿಲ್ಲೆಯಲ್ಲಿರುವ ಅಂಗವಿಕಲರ ಸಂಖ್ಯೆ 35,312. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಖಚಿತ ಮಾಹಿತಿ ಲಭ್ಯವಿಲ್ಲ.2012–13ನೇ ಸಾಲಿನಲ್ಲಿ 3,475 ಅಂಗವಿಕಲರಿಗೆ ರಿಯಾಯಿತಿ ದರದ ಬಸ್‌ ಪಾಸ್, ಗ್ರಾಮೀಣ ಪುನರ್ವಸತಿ ಯೋಜನೆಯಡಿ 175 ಜನರಿಗೆ ಗೌರವಧನವಾಗಿ ₨ 5.23 ಲಕ್ಷ ನೆರವು, ಸ್ವಸಹಾಯಸಂಘ ಯೋಜನೆಯಡಿ  4 ತಾಲ್ಲೂಕಿನಲ್ಲಿ ತಲಾ ₨ 1 ಲಕ್ಷ ನೆರವು, ಸಾಧನ ಸಲಕರಣೆ ಯೋಜನೆಯಡಿ ಶ್ರವಣ ಸಾಧನಗಳ ವಿತರಣೆ ಆಗಿದೆ.‘ಸ­ಹಾ­ಯ­ವಾಣಿ ಬೇ­ಕು’

ಜಿಲ್ಲೆಯ­ಲ್ಲಿ ಅಂಗ­ವಿಕಲರಿಗಾಗಿ ಸಹಾಯ­ವಾಣಿ ಆರಂಭಿಸಬೇಕು. ಆದರೆ ಜಿಲ್ಲಾಡಳಿತದಿಂದ ಇದಕ್ಕೆ ಸರಿ­ಯಾದ ಸ್ಪಂದನೆ ಸಿಗುತ್ತಿಲ್ಲ. ಬರು­ವ  ಸಚಿವರು, ಅಧಿಕಾರಿ­ಗಳಿ­ಗೆಲ್ಲಾ ಮನವಿ ಸಲ್ಲಿಸುತ್ತಿ­ದ್ದೇನೆ. ಆದರೂ ಪ್ರಯೋಜನ ಆಗಿಲ್ಲ.ಸಹಾಯ­ವಾಣಿ ಆದರೆ ಅರ್ಹರು ಕಷ್ಟದಲ್ಲಿದ್ದಾಗ ನೆರವು ಪಡೆಯಲು ಸಹಾಯಕ’.

–ಸಂತೋಷ ಎಂ ಭಾಲ್ಕೆ, ಜಿಲ್ಲಾ ಅಂಗವಿಕಲರ ರಕ್ಷಣಾ ಸಮಿತಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)