ಸೋಮವಾರ, ಮಾರ್ಚ್ 8, 2021
29 °C
ಕುತ್ಪಾಡಿ ಸುಭೋಧ-–2014 ಕಾರ್ಯಾಗಾರಕ್ಕೆ ಚಾಲನೆ

‘ಅಧ್ಯಯನ ಮಾಡದೆ ಚಿಕಿತ್ಸೆ ಸಲ್ಲ-ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಧ್ಯಯನ ಮಾಡದೆ ಚಿಕಿತ್ಸೆ ಸಲ್ಲ-ದು’

ಶಿರ್ವ: ವಿದೇಶದಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಶರೀರ ಶಾಸ್ತ್ರವನ್ನು ಕಲಿಸುವ ವಿಭಾಗಗಳು ಅತಿ ವಿರಳ. ವೈದ್ಯ ವಿದ್ಯಾರ್ಥಿಗಳು ತಮ್ಮಷ್ಟಕ್ಕೆ ಅಭ್ಯಸಿಸಿ ಚಿಕಿತ್ಸೆಯಲ್ಲಿ ತೊಡಗಿಕೊಳ್ಳಲು ಅವಕಾಶವಿದೆ ಆದರೆ ಶರೀರ ಶಾಸ್ತ್ರದ ಅಧ್ಯಯನ ಮಾಡದೆ ನೇರವಾಗಿ ಚಿಕಿತ್ಸೆ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸೊಸೈಟಿ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಹೇಳಿದರು.ಧರ್ಮಸ್ಥಳ ರತ್ನಮ್ಮ ಹೆಗ್ಗಡೆ ಅವರ ಸ್ಮರಣಾರ್ಥವಾಗಿ ಕುತ್ಪಾಡಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶರೀರ ರಚನಾ ವಿಭಾಗದ ವತಿಯಿಂದ ಭಾವಪ್ರಕಾಶ ಸಭಾಂಗಣದಲ್ಲಿ ನಡೆದ ಸುಭೋಧ–-2014 ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಆಧುನಿಕ ವಿಜ್ಞಾನದ ನಡುವೆಯೂ ವಿದೇಶದಲ್ಲಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗೆ ವಿಶೇಷ ಪ್ರಾಧಾನ್ಯತೆಯಿದೆ. ಆಹಾರ ಸೇವನೆಯಿಂದ  ಹೆಚ್ಚು ಸುಖ ದೊರೆತು, ಸಂಭಾವ್ಯ ರೋಗಗಳು ಕಡಿಮೆಯಾಗಬಲ್ಲದು ಎಂದರು.ಪುಣೆ ಖಾಜಿ ಮೆಡಿಕಲ್ ಕ್ಲಾಸಸ್ ನಿರ್ದೇಶಕ ಡಾ.ಎಸ್.ಎನ್. ಖಾಜಿ ಕಾರ್ಯಾಗಾರದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಪರಿಸರದಲ್ಲಿ ಸುಲಭವಾಗಿ ಸಿಗುವ ಜೇಡಿಮಣ್ಣು, ಪ್ಲಾಸ್ಟಿಕ್, ಬಟ್ಟೆ ಹಾಗೂ ಇನ್ನಿತರ ವಸ್ತುಗಳಿಂದ ಶರೀರ ಅಂಗಾಂಗಗಳ ಆಕೃತಿಯನ್ನು ತಯಾರು ಮಾಡಿ ಅವುಗಳ ಮುಖಾಂತರ ವಿದ್ಯಾರ್ಥಿಗಳಿಗೆ ಶರೀರ ರಚನಾ ಶಾಸ್ತ್ರವನ್ನು ಅಧ್ಯಯನ ಮಾಡುವ ಬಗ್ಗೆ ಸರಳ ಭಾಷೆಯಲ್ಲಿ ಮನವರಿಕೆ ಮಾಡಿಕೊಟ್ಟರು.ಮೆದುಳು ಮತ್ತಿತರರ ಸೂಕ್ಷ್ಮ ಅಂಗಗಳ ಬಗ್ಗೆ ಅನಿಮೇಶನ್ ಚಿತ್ರದ ಮೂಲಕ ವಿವರಿಸಿದರು. ಕಾರ್ಯಾಗಾರದಲ್ಲಿ ತಯಾರಿಸಲಾದ ಎಲ್ಲ ವಿಧದ ಅಂಗಾಂಗಗಳ ಆಕೃತಿಗಳನ್ನು ಪ್ರದರ್ಶಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಕೆ.ಆರ್. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.ಶರೀರರಚನಾ ಶಾಸ್ತ್ರ ವಿಭಾಗ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರೊ. ವಿ.ಕೆ. ಶ್ರೀಧರ ಹೊಳ್ಳ ಉಪಸ್ಥಿತರಿದ್ದರು. ಶರೀರ ರಚನಾ ಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ.ಯು ಗೋವಿಂದ ರಾಜು ಸ್ವಾಗತಿಸಿದರು. ಶರೀರ ರಚನಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಎನ್. ವಂದಿಸಿದರು. ಡಾ.ಶೋಭಾ ಭಟ್ ನಿರೂಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.