ಮಂಗಳವಾರ, ಮಾರ್ಚ್ 9, 2021
23 °C

‘ಅಪಘಾತ ವಿಮೆ ಜಿಲ್ಲೆಗೆ ವಿಸ್ತರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಪಘಾತ ವಿಮೆ ಜಿಲ್ಲೆಗೆ ವಿಸ್ತರಣೆ’

ಅಂಕಲಗಿ (ತಾ.ಗೋಕಾಕ): ‘ಗೋಕಾಕ ತಾಲ್ಲೂಕಿಗೆ ಸೀಮಿತವಾಗಿರುವ ಉಚಿತ ಅಪಘಾತ ವಿಮೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ವಿಸ್ತರಿಸಲಾಗು-­ವುದು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ಇಲ್ಲಿನ ಅಡವಿ ಮಹಾಸ್ವಾಮಿ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಲಯ, ಕೆಜೆಎಸ್ ಸಂಸ್ಥೆಯ  ನೂತನ ಉಪನ್ಯಾಸ ಕೊಠಡಿ, ಅಟಲ್ ಬಿಹಾರಿ ವಾಜಪೇಯಿ ಜನಸ್ನೇಹಿ ಕೇಂದ್ರ ಹಾಗೂ ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಿ ಅವರು ಅವರು ಮಾತನಾಡಿದರು.‘ದಿ. ಭೀಮವ್ವಾ ಜಾರಕಿಹೊಳಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಪಘಾತಕ್ಕೊಳಗಾದ ತಾಲ್ಲೂಕಿನ ಜನತೆಗೆ ಈಗಾಗಲೇ 18 ಲಕ್ಷಕ್ಕೂ ಹೆಚ್ಚು ವಿಮೆ ಹಣ ನೀಡಲಾಗಿದೆ. ಈ ಯೋಜನೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸುವ ಚಿಂತನೆ ಇದೆ’ ಎಂದರು.

‘ಕಾಂಗ್ರೆಸ್‌ 5 ದಶಕಗಳ ಕಾಲ ದೇಶದ ಜನತೆಗೆ ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿದ ಪಕ್ಷ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲೇ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಮೂಲಕ ಅಧಿಕಾರಕ್ಕೆ ತರಬೇಕು’ ಎಂದು ಕೋರಿದರು.ಕೆಜೆಎಸ್ ಸಂಘದ ನಿರ್ದೇಶಕ ಬಸಪ್ಪ ಉರಬಿನಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ದಿ. ಭೀಮವ್ವಾ ಜಾರಕಿಹೊಳಿ ಚಾರಿಟೇಬಲ್ ಟ್ರಸ್ಟ್‌ನ ವಿಮೆ ಗುರುತಿನ ಚೀಟಿಗಳನ್ನು ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್‌ಗಳನ್ನು ವಿತರಿಸಲಾಯಿತು.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಜೆ.ಪಿ. ದೇವರಾಜ, ಶಿವಾನಂದ ಡೋಣಿ, ಭೀಮಗೌಡ ಪೋಲಿಸಗೌಡರ, ರಾಜು ತಳವಾರ, ಎ.ಎನ್. ಕರಲಿಂಗಣ್ಣವರ, ಎಂ.ಬಿ. ನಿರ್ವಾಣಿ, ಎಂ.ಆರ್. ದೇಸಾಯಿ, ಬಸವರಾಜ ಪಟ್ಟಣಶೆಟ್ಟಿ, ಎಲ್.ಕೆ. ಪೂಜೇರಿ, ಕಸ್ತೂರಿ ಕೋಣಿ, ಶೋಭಾ ಪಾಟೀಲ, ಸುಕುಮಾರ ತಳವಾರ, ರಾಣವ್ವ ಹರಿಜನ ಎಲ್.ಧನ್ಯಕುಮಾರ, ಡಾ. ಸಿದ್ದು ಹುಲ್ಲೋಳಿ ಉಪಸ್ಥಿತರಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಜೋಡಗೇರಿ ಸ್ವಾಗತಿಸಿದರು. ವೈ.ಎಂ. ಗುಜನಟ್ಟಿ ವಂದಿಸಿದರು. ಬಿ.ಬಿ. ನಿರ್ವಾಣಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.