ಭಾನುವಾರ, ಜೂನ್ 13, 2021
25 °C

‘ಇಂಗ್ಲಿಷ್‌ ಕಲಿಕೆ ಅನಿವಾರ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಕಲಿ­ಯುವುದು ಅವಶ್ಯಕ’ ಎಂದು ಇಂಗ್ಲಿಷ್ ಭಾಷೆಯ ಸಂವಹನ ತರಬೇತು­ದಾರ­ರಾದ ಪ್ರೊ. ಗೀತಾ ಶ್ರೀನಿವಾಸನ್ ತಿಳಿಸಿದರು.



ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್‌ ವಿಭಾಗದ ವತಿ­ಯಿಂದ ಹಮ್ಮಿಕೊಂಡಿದ್ದ ‘ಇಂಗ್ಲಿಷ್ ಡೆ, ಇಂಗ್ಲಿಷ್ ಎವರಿಡೆ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.



‘ಎಲ್ಲಾ ಕ್ಷೇತ್ರಗಳಲ್ಲಿಯೂ ಇಂಗ್ಲಿಷ್ ತನ್ನ ಪ್ರಭುತ್ವ ಹೊಂದಿದೆ. ಇಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ­ಯನ್ನು ಬಿಟ್ಟು ಇಂಗ್ಲಿಷ್ ಭಾಷೆ ಕಲಿಯ­ಬೇಕು. ಶಿಕ್ಷಕರು, ಉಪನ್ಯಾಸಕರು ವಿದ್ಯಾರ್ಥಿ­­­ಗಳಿಗೆ ನೆರವಾಗಬೇಕು’ ಎಂದು ತಿಳಿಸಿದರು.



ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.­ರಂಗಸ್ವಾಮಿ ಗೌಡ ಮಾತನಾಡಿ, ‘ವಿದ್ಯಾರ್ಥಿ­­ಗಳು ಇಂಗ್ಲಿಷ್‌ ಕಠಿಣ ಎಂಬ ಭ್ರಮೆಯನ್ನು ಮೊದಲು ಬಿಡಬೇಕು. ಇಲ್ಲಿ ತರಬೇತುದಾರರು ನೀಡುವ ಸಲಹೆ ಸೂಚನೆಗಳನ್ನು ಅನುಸರಿಸುವ ಮೂಲಕ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯಬಹುದು’ ಎಂದು ಹೇಳಿದರು.



ಇಂಗ್ಲಿಷ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಡಿ. ಆನಂದ್ ಮಾತ­ನಾಡಿ, ‘ಭಾಷಾ ಕೌಶಲಗಳಾದ ಆಲಿಸು­ವುದು, ಮಾತನಾಡುವುದು, ಓದು­ವುದು, ಬರೆಯುವುದು ಇವುಗಳ ಪರಿ­ಣಾಮ­­­­ಕಾರಿ ಅಭ್ಯಾಸದಿಂದ  ಇಂಗ್ಲಿಷ್ ಭಾಷೆಯ ಮೇಲೆ  ಹಿಡಿತ­ವನ್ನು ಸಾಧಿಸ­ಬಹುದು’ ಎಂದು ಹೇಳಿದರು.



ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಎಸ್. ಶೈಲಜಾ, ಸಹಾಯಕ ಪ್ರಾಧ್ಯಾಪಕಿ ಎಚ್.ಆರ್. ಅನುರಾಧಾ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.