ಸೋಮವಾರ, ಮಾರ್ಚ್ 8, 2021
31 °C

‘ಇನ್ಫಿ’ ನಿರ್ಗಮಿತ ಶ್ರೀನಿವಾಸ್‌ ಬೇರೆ ಕಂಪೆನಿ ಸಿಇಒ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇನ್ಫಿ’ ನಿರ್ಗಮಿತ ಶ್ರೀನಿವಾಸ್‌ ಬೇರೆ ಕಂಪೆನಿ ಸಿಇಒ?

ನವದೆಹಲಿ (ಪಿಟಿಐ): ‘ಇನ್ಫೊಸಿಸ್‌’ ನಿಂದ ಬುಧವಾರವಷ್ಟೇ ನಿರ್ಗಮಿಸಿದ ಹಿರಿಯ ಅಧಿಕಾರಿ ಬಿ.ಜಿ.ಶ್ರೀನಿವಾಸ್‌ ಅವರು, ಮತ್ತೊಂದು ಮಾಹಿತಿ ತಂತ್ರ ಜ್ಞಾನ ಕಂಪೆನಿಗೆ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾ ಪಕ ನಿರ್ದೇಶಕರಾಗಿ (ಎಂಡಿ) ಸೇರುವ ಸಾಧ್ಯತೆ ಇದೆ.‘ಇನ್ಫೊಸಿಸ್‌’ನ ನಿರ್ದೇಶಕ ಮಂಡಳಿ ಸದಸ್ಯ ಹಾಗೂ ಅಧ್ಯಕ್ಷ ಹುದ್ದೆಗೆ ರಾಜೀ ನಾಮೆ ಸಲ್ಲಿಸಿರುವ ಶ್ರೀನಿವಾಸ್‌, ಬೇರೊಂದು ‘ಐಟಿ’ ಕಂಪೆನಿಗೆ ‘ಸಿಇಒ’ ಮತ್ತು ‘ಎಂಡಿ’ಯಾಗಿ ಸೇರಲಿದ್ದಾರೆ. ಸದ್ಯದಲ್ಲೇ ಈ ಕುರಿತ ಘೋಷಣೆ ಹೊರ ಬೀಳಲಿದೆ’ ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.ಸದ್ಯ ‘ಇನ್ಫೊಸಿಸ್‌’ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವ ಎಸ್‌.ಡಿ.ಶಿಬುಲಾಲ್‌ ಅವರ ಅಧಿಕಾರ ಅವಧಿ 2015ರ ಜನವರಿ 9ಕ್ಕೆ

ಕೊನೆ ಗೊಳ್ಳಲಿದೆ. ಈ ಹುದ್ದೆಗಾಗಿ ಕಂಪೆನಿ ಯೊಳಗೆ ನಡೆಯುತ್ತಿದ್ದ ಸ್ಪರ್ಧೆಯಲ್ಲಿ ಶ್ರೀನಿವಾಸ್‌ ಅವರ ಹೆಸರೂ ಪ್ರಮುಖ ವಾಗಿ ಕೇಳಿಬರುತ್ತಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀ ಧರರಾದ ಶ್ರೀನಿವಾಸ್‌ ಅವರು, 1999ರಲ್ಲಿ ‘ಇನ್ಫೊಸಿಸ್‌’ ಕಂಪೆನಿ ಸೇರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.