ಸೋಮವಾರ, ಮಾರ್ಚ್ 8, 2021
22 °C

‘ಕಾರ್ಮಿಕರು ಒಂದಾಗಿ; ಹಕ್ಕು ಚಲಾಯಿಸಲು ಮುಂದಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾರ್ಮಿಕರು ಒಂದಾಗಿ; ಹಕ್ಕು ಚಲಾಯಿಸಲು ಮುಂದಾಗಿ’

ವಿಜಾಪುರ: ‘ಕಾರ್ಮಿಕರಿಗೆ ಸರ್ಕಾರಗಳು ಸಕಲ ಸೌಲಭ್ಯ ನೀಡಬೇಕು. ಕಾರ್ಮಿಕರ ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು’. ನಗರದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ನಡೆದ ಕಾರ್ಮಿಕ ದಿನಾಚರಣೆ ಸಮಾರಂಭಗಳಲ್ಲಿ ಕೇಳಿಬಂದ ಮಾತಿದು. ವಿಜಾಪುರದಲ್ಲಿ ನಡೆದ ಕಾರ್ಮಿಕ ದಿನಾಚರಣೆಗಳ ವಿವರ.ಅನೌಪಚಾರಿಕ ಶಿಕ್ಷಣ ಸಂಸ್ಥೆ: ಅನೌಪಚಾರಿಕ ಶಿಕ್ಷಣ ಸಂಸ್ಥೆ, ಸ್ಲಂ ಅಭಿವೃದ್ಧಿ ಕೇಂದ್ರ, ವಿಜಾಪುರ ನಗರ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಯೂನಿಯನ್, ವಿಜಾಪುರ ಗೃಹ ಕಾರ್ಮಿಕರ ಯೂನಿಯನ್, ಮಹಾತ್ಮ ಗಾಂಧಿ ಅಟೋ ಚಾಲಕರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಂಯೋಜಕ ಶ್ರೀಧರ ಕೊಣ್ಣೂರ, ಡಿವೈಎಸ್ಪಿ ಎಸ್.ಎಂ.ಜಿರಗಾಳ, ಎಸ್‌.ಯು.ಸಿ.ಐ. ಸಂಚಾಲಕ ಭಗವಾನ್ ರೆಡ್ಡಿ, ಕಾರ್ಮಿಕ ಅಧಿಕಾರಿ ಎ.ಎಸ್. ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್‌ ಜೆರಾಲ್ಡ್ ಡಿಸೋಜಾ ಮಾತನಾಡಿದರು.ಸಿದ್ದು ಹೊನಕಟ್ಟಿ, ಫರ್ಜಾನಾ ಜಮಾದಾರ, ಮಲ್ಲಿಯಪ್ಪ ಹಲಗಲಿ ವೇದಿಕೆಯಲ್ಲಿದ್ದರು. ಅಕ್ರಂ ಮಾಶ್ಯಾಳಕರ, ಶಿವಪ್ಪ ಘಂಟಿ, ಕೃಷ್ಣಾ, ರಾಮಚಂದ್ರ, ಮೊಹಮ್ಮದ, ಲಾಲಸಾಬ, ಆನಂದ ಇತರರು ಪಾಲ್ಗೊಂಡಿದ್ದರು.  ಇದಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್‌ನ ಸಂತ ಅನ್ನಮ್ಮರ ದೇವಾಲಯದ ವರೆಗೆ ಜಾಥಾ ನಡೆಸಲಾಯಿತು.ಕಾರ್ಮಿಕರಿಗೆ ಸನ್ಮಾನ: ವಿಜಾಪುರದ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಕಾರ್ಮಿಕರಾದ ರಹೀಂಸಾಬ ಡಿ. ಇನಾಮದಾರ, ಸೈಪನ್‌ಸಾಬ ಗೌಂಡಿ, ಯಲ್ಲಪ್ಪ ಭೂತನಾಳ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ, ಕೇಂದ್ರದ ಯುಪಿಎ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಸಾಕಷ್ಟು ಯೋಜನೆ ಹಾಗೂ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ ಎಂದರು.ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಅಫ್ತಾಬ್ ಖಾದ್ರಿ, ವಸಂತ ಹೊನಮೊಡೆ, ಚಂದ್ರಕಾಂತ ಶೆಟ್ಟಿ, ಈರಪ್ಪ ಜಕ್ಕಣ್ಣವರ, ಮೋಹನ ಎಸ್. ಬಡಿಗೇರ, ಶರಣಪ್ಪ ಯಕ್ಕುಂಡಿ, ಮಹಾದೇವಿ ಗೋಕಾಕ, ಭೀಮವ್ವ ಬಿಸನಾಳ, ಮಂಜುಳಾ ಗಾಯಕವಾಡ, ಜಯಶ್ರೀ ಶಿವಣಗಿ, ಭಾರತಿ ನಾವಿ ಇತರರು ಉಪಸ್ಥಿತರಿದ್ದರು.ಸಿಐಟಿಯುಸಿ: ಸಿಐಟಿಯುಸಿ, ಎಐಸಿಟಿ, ಬ್ಯಾಂಕ್‌ ನೌಕರರ ಸಂಘ, ಲಾರಿ ಹಮಾಲರ ಸಂಘ ,ಗ್ರಾಮ ಪಂಚಾಯಿತಿ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಬಿಸಿಯೂಟ ಕಾರ್ಯಕರ್ತರ ಸಂಘ, ಔಷಧ ಪ್ರತಿನಿಧಿಗಳ ಸಂಘ, ಕಟ್ಟಡ ಕಾರ್ಮಿಕ ಸಂಘದಿಂದ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ರಘುನಾಥ ಬಾಣಿಕೋಲ, ಜಿ.ಜಿ.ಗಾಂಧಿ, ಜಿ.ಎಸ್. ಇಂಗಳಗಿ, ಲಕ್ಷ್ಮಣ ದೊಡಮನಿ, ಸಾಬು ಗುಗದಡ್ಡಿ, ಹೀರಾಬಾಯಿ ಇಜೇರಿ, ಶಕೀಲಾ ಜಮಾದಾರ, ಸಿ.ಎ. ಗಂಟೆಪ್ಪಗೋಳ ಇತರರು ಪಾಲ್ಗೊಂಡಿದ್ದರು.ಸೌಥ್ ಇಂಡಿಯಾ ಫೆಡರೇಶನ್: ಸೌಥ್‌ ಇಂಡಿಯಾ ಫೆಡರೇಶನ್‌ ಆಪ್ ಟ್ರೇಡ್ ಯೂನಿಯನ್, ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕ ಸಮಿತಿ ಮತ್ತು ಕಾರ್ಮಿಕ ಯೂನಿಯನ್ ಒಕ್ಕೂಟದಿಂದ ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.ಮಹಾದೇವಿ ಕದ್ನಳ್ಳಿ, ಜಹಾಂಗೀರ ಮಿರ್ಜಿ, ಯಲ್ಲವ್ವ ಇಳಕಲ್, ಮೆಹಬೂಬಿ ಇಂಡಿಕರ, ಬಾಬು ಮುರನಾಳ, ಜೈರಾಜಿ ಸಂಖ, ಚಂದು ಸಾಳುಂಕೆ, ಬಸೀರ್‌ ಮಕಾನದಾರ, ಕಲಾವತಿ ಬೈಚಬಾಳ, ಹನೀಫಾ ಮಕಾನದಾರ ಇತರರು ಪಾಲ್ಗೊಂಡಿದ್ದರು.ಎಸ್‌ಯುಸಿಐ (ಸಿ): ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಸಿ)ದಿಂದ ಕಾರ್ಮಿಕ ದಿನ ಆಚರಿಸಲಾಯಿತು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ್‌ ರೆಡ್ಡಿ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಿ ಎಸ್. ಲಗಶೆಟ್ಟಿ ಮಾತನಾಡಿದರು. ಆಲಮಟ್ಟಿ ಪುನರ್ವಸತಿ ದಿನಗೂಲಿ ನೌಕರರ ಸಂಘದ ಮಲ್ಲು ಬಿರಾದಾರ, ಅಶೋಕ ದೇಸಾಯಿ, ಮುತ್ತಪ್ಪ, ಬಾಸು ವಾಲಿಕಾರ, ಮುತ್ತು ಬಡಿಗೇರ, ಮಲ್ಲಿಕಾರ್ಜುನ ನರಸನಗೌಡರ, ಮೌಲಾಸಾಬ ನದಾಫ್‌, ಪ್ರಭುಸ್ವಾಮಿ ಹಿರೇಮಠ, ಮಲ್ಲಯ್ಯ ಚಿಕ್ಕಮಠ, ಹಣಮಂತ ಇತರರು ಭಾಗವಹಿಸಿದ್ದರು.‘ಸೇವಾ ಭದ್ರತೆ ಒದಗಿಸಿ’

ಸಿಂದಗಿ:
‘ಸರ್ಕಾರ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಮೂಲಕ ಸೇವಾ ಭದ್ರತೆ ನೀಡಬೇಕು’ ಎಂದು ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಹಕ್ಕೊತ್ತಾಯ ಮಾಡಿದರು.ಗುರುವಾರ ನಗರದ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.‘ನಗರದ ಪುರಸಭೆ ಹೊರಗುತ್ತಿಗೆ ಪೌರ ಕಾರ್ಮಿಕರು ಕನಿಷ್ಠ ವೇತನ ₨1500 ವೇತನ ಪಡೆದು ಕೆಲಸ ನಿರ್ವಹಿಸುತ್ತಿರುವುದು ಅತ್ಯಂತ ವಿಷಾದಕರ ಸಂಗತಿ. ಸರ್ಕಾರ ಘೋಷಣೆ ಮಾಡಿದ ಆರು ಸಾವಿರ ರೂಪಾಯಿ ವೇತನ ನೀಡಬೇಕಾದುದು ಅತ್ಯಗತ್ಯ. ಈ ಬಗ್ಗೆ ರಾಜ್ಯದ 3,500 ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಿ 6000 ವೇತನ ನೀಡಲು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಅದರ ಅನುಷ್ಠಾನವಾಗಬೇಕು ಎಂದರು.ಸಿಂದಗಿ ಪುರಸಭೆ ಪೌರ ಕಾರ್ಮಿಕರಿಗಾಗಿ ಜೀವ ಭದ್ರತೆಗಾಗಿ ಜೀವವಿಮೆ ಸೌಲಭ್ಯ ಅಳವಡಿಸಲಾಗಿದೆ. ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅಗತ್ಯ ಅಷ್ಟೇ ಅನಿವಾರ್ಯವೂ ಕೂಡ ಆಗಿದೆ ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ, ದಲಿತ ಮುಖಂಡ ಎಂ.ಎನ್.ಕಿರಣರಾಜ್ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರ ಹಿತರಕ್ಷಣೆ ಆಗುತ್ತಿಲ್ಲ ಎಂಬುದು ಅತ್ಯಂತ ದುರದೃಷ್ಟಕರ ವಿಷಯ ಎಂದು ವಿಷಾದಿಸಿದರು.ಕಾರ್ಮಿಕರು ಸಂಘಟಿತರಾಗಿ ಹೋರಾಟದ ಮೂಲಕ ಮಾತ್ರ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯಲು ಸಾಧ್ಯ. ಹೀಗಾಗಿ ಕಾರ್ಮಿಕರು ಕೀಳರಿಮೆ ತೊರೆದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪೌರ ಕಾರ್ಮಿಕರಾದ ಶಾಂತಾಬಾಯಿ ಸುಲ್ಪಿ, ಭೀಮವ್ವ ಕೂಚಬಾಳ, ಈರಪ್ಪ ಗುಡಿಮನಿ, ನೀಲವ್ವ ಬಂಡಿ ಇವರನ್ನು ಗೌರವಿಸಲಾಯಿತು.ಪುರಸಭೆ ಅಧ್ಯಕ್ಷೆ ಲಕ್ಷ್ಮಿಬಾಯಿ ಯರನಾಳ ಅಧ್ಯಕ್ಷತೆ ವಹಿಸಿದ್ದರು.  ಪುರಸಭೆ ಉಪಾಧ್ಯಕ್ಷೆ ಗಂಗಮ್ಮ ಕಳ್ಳಿಮಠ, ಸದಸ್ಯರಾದ ಹಣಮಂತ ಸುಣಗಾರ, ಮಂಜುನಾಥ ಬಿಜಾಪುರ, ಪೌರ ಕಾರ್ಮಿಕರ ಸಂಘಟನೆ ಅಧ್ಯಕ್ಷ ಕಲ್ಲಪ್ಪ ಚೌಧರಿ, ಉಪಾಧ್ಯಕ್ಷೆ ಶಿವಕಾಂತವ್ವ ಡೋಣೂರ, ಮರಲಿಂಗವ್ವ ಇಂಗಳಗಿ, ಬಸವರಾಜ ಕೂಚಬಾಳ, ರಾಮ ಮಾದರ ಉಪಸ್ಥಿತರಿದ್ದರು. ಸನಗೊಂಡ  ನಿರೂಪಿಸಿದರು.‘ಕಾರ್ಮಿಕರು ಸಂಕಷ್ಟದಲ್ಲಿ’

ಸಿಂದಗಿ:
‘ಪ್ರಸ್ತುತ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಯಿಂದಾಗಿ ಕಾರ್ಮಿಕರು ತೀವ್ರವಾದ ಸಂಕಷ್ಟಕ್ಕೆ ಈಡಾಗಿದ್ದಾರೆ’ ಎಂದು ಸಿ.ಐ.ಟಿ.ಯು ಜಿಲ್ಲಾ ಘಟಕದ ಉಪಾಧ್ಯಕ್ಷ ಅಣ್ಣಾರಾಯ ಈಳಗೇರ ಕಳವಳ ವ್ಯಕ್ತಪಡಿಸಿದರು.ಗುರುವಾರ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಕಾರ್ಮಿಕರನ್ನು ಅತ್ಯಂತ ಕನಿಷ್ಠ ವೇತನದಲ್ಲಿ ಯಾವುದೇ ಸೌಲಭ್ಯಗಳನ್ನು ಕೂಡ ನೀಡದೇ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ.  ಕೂಡಲೇ ರಾಜ್ಯ ಸರ್ಕಾರ ಅಗತ್ಯ ಸೇವಾ ಕಾಯ್ದೆ ಜಾರಿಗೆ ತರುವ ಮೂಲಕ ಕಾರ್ಮಿಕರು ತಮ್ಮ ಹಕ್ಕಿಗಾಗಿ ಹೋರಾಟ ಮಾಡದಂತೆ ನಿರ್ಬಂಧ ಹೇರಲಾಗುತ್ತಿದೆ. ಇದರ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದರು

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸರಸ್ವತಿ ಮಠ ಮಾತನಾಡಿ, ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿ ರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ಖಂಡನೀಯ ಎಂದರು.ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಐ.ಗದ್ದಗಿಮಠ, ಗ್ರಾಮ ಪಂಚಾಯ್ತಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ  ವೈ.ಎಸ್.ತಳವಾರ, ಸಂಗೂ ನಾಲ್ಕಮಾನ, ಶರಣಪ್ಪ ಕೊಂಡಗೂಳಿ, ಎಸ್.ಎನ್. ಪತ್ತಾರ, ಕೆ.ಜಿ.ನಾಗಾವಿ, ರೇಷ್ಮಾ ಜಮಾದಾರ, ಎಸ್.ಎಸ್.ಬಿರಾದಾರ, ಎಸ್.ಎಸ್.ಪರೀಟ, ಎಂ.ಬಿ. ಮುಲ್ಲಾ, ಪಿ.ಬಿ.ರಡ್ಡೇರ, ಲಕ್ಷ್ಮಿಬಾಯಿ ಮಡ್ಯಾಳ, ಅಕ್ಷರದಾಸೋಹ ನೌಕರರ ಸಂಘದ ಬಿಸ್ಮಿಲ್ಲಾ, ಬಿ.ಜಿ.ಕಮತಗಿ, ಸುಭದ್ರಾ ತಿಳಗೂಳ, ಶಹನಾಜಲಿ ಮುಲ್ಲಾ, ಗಜಾನನ ತಿವಾರಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರ ಮೆರವಣಿಗೆ ನಡೆಯಿತು.‘ಸಂಘಟಿತರಾಗಲು ಸಲಹೆ’

ಕೊಲ್ಹಾರ:
‘ದೇಶದ ಪ್ರಗತಿಗೆ ಹಗಲಿರುಳು ಶ್ರಮಿಸು ತ್ತಿರುವ ಕಾರ್ಮಿಕರು ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಕ್ಕಾಗಿ ಸಂಘಟಿತ ರಾಗಬೇಕು’ ಎಂದು ಬಾಬುಸಾಬ ತಹಶೀಲ್ದಾರ್ ಹೇಳಿದರು.ಇಂದಿಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು, ಕೆಲಸಕ್ಕೆ ಸಮಾನವಾದ ವೇತನ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಉರುವ ಸೌಲಭ್ಯಗಳು ಇಂದಿಗೂ ಕೆಲಸಗಾರರಿಗೆ ಸರಿಯಾಗಿ ದೊರೆಯುತ್ತಿಲ್ಲ.ಬಂಡವಾಳಶಾಹಿಗಳು ಕೇವಲ ತಮ್ಮ ಹಿತಕ್ಕಾಗಿ ಕಾರ್ಮಿಕರನ್ನು ಬಳಸಿಕೊಂಡು ಅವರನ್ನು ವಂಚಿಸುವ ಮೂಲಕ ತಾರತಮ್ಯ ನೀತಿಯನ್ನು ಅನುಸರಿಸುತ್ತಿವೆ. ಇಂತಹ ನೀತಿಗಳು ದೂರವಾಗಬೇಕಾದರೆ ದೇಶದಲ್ಲಿರುವ ಕಾರ್ಮಿಕರು ತಮ್ಮ ಹಕ್ಕಿಗಾಗಿ ಧ್ವನಿಯೆತ್ತಬೇಕು.ಇದು ಸಂಘಟನೆ ಯಿಂದ ಮಾತ್ರ ಸಾಧ್ಯ ಎಂದರು.ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ನೂರಅಹ್ಮದ್ ತಹಶ ಲ್ದಾರ್,ಬಸೀರಅಹ್ಮದ ಕಡ್ದಾಗೋಳ,ಕುತುಬುದ್ದೀನ ಜಮನಾ,ನೂರಲಿ ಕಡ್ಲಿಮಟ್ಟಿ, ಮೆಹಬೂಬ್ ಗಡದಿನ್ನಿ, ಗೌಸುಸಾಬ ಬಾಗೇವಾಡಿ, ಮೆಹಬೂಬ್  ಖಾನ್, ಮುತ್ತಪ್ಪ ಬ್ಯಾಲ್ಯಾಳ,ಡೋಂಗ್ರಿ ಕಂಕರಪೀರ್, ಗೈಬು ತಾಸಗಾಂವ್, ಎಚ್.ಬಿ.ಪಕಾಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.