ಕನಕಪುರ: ‘ಕಳೆದು ಹೋದ ಗಳಿಗೆ ಮತ್ತೆಂದೂ ತಿರುಗಿ ಬರುವುದಿಲ್ಲ. ಆದ್ದ ರಿಂದ ವಿದ್ಯಾರ್ಥಿಗಳು ಸಮಯ ಪಾಲನೆ ಮಹತ್ವವನ್ನು ಸದಾ ಗಮನಲ್ಲಿ ಇಟ್ಟು ಕೊಳ್ಳಬೇಕು’ ಎಂದು ಅಂಕಣಕಾರ ಹಾಗೂ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ತಿಳಿಸಿದರು.

ಪಟ್ಟಣದ ಆರ್.ಇ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟ ಮತ್ತು ಕಾಲೇಜು ವಾರ್ಷಿ ಕೋತ್ಸವದಲ್ಲಿ ಅವರು ಮಾತನಾ ಡಿದರು.

‘ಕಾಲೇಜು ಜೀವನ ಮೋಜಿಗೆ ಮಾತ್ರವೇ ಸೀಮಿತವಾಗಬಾರದು’ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
‘ಹೆಸರು ಗಳಿಸಲು ವಿದ್ಯೆ, ಹಣವಿದ್ದರೆ ಸಾಲದು. ವಿನಯ, ನಮ್ರತೆಯೂ ಅಗತ್ಯ. ಮನುಷ್ಯ ಬದುಕಲು ಸ್ವಾರ್ಥ ಅಗತ್ಯ. ಅದರ ಜೊತೆಗೆ ಗಳಿಸಿದ್ದನ್ನು ಸಮಾಜಕ್ಕೆ ಹಂಚುವ ಮನಸ್ಸು ಇರ ಬೇಕು. ಆಗಲೇ ಮನುಷ್ಯನ ಜೀವನಕ್ಕೆ ಅರ್ಥ ಬರುತ್ತದೆ. ನುಡಿದಂತೆ ನಡೆದಾಗ ಆಡಿದ ಮಾತಿಗೆ ಬೆಲೆ ಬರುತ್ತದೆ’ ಎಂದು ಹೇಳಿದರು.

‘ಉಪನ್ಯಾಸಕನು ವಿದ್ಯಾರ್ಥಿಗಳೊಂ ದಿಗೆ ವಿದ್ಯಾರ್ಥಿಯಾಗಿರಬೇಕು. ಕಲಿಕೆಗೆ ಕೊನೆಯೇ ಇಲ್ಲ’ ಎಂದು ಅವರು ತಿಳಿಸಿದರು.
ಆರ್.ಇ.ಎಸ್. ಸಂಸ್ಥೆಯ ಅಧ್ಯಕ್ಷ ಕೆ.ಜಿ. ತಿಮ್ಮಪ್ಪ, ಕಾರ್ಯದರ್ಶಿ ರಮೇಶ್, ಖಜಾಂಚಿ ಎಂ.ಎಲ್.ಶಿವ ಕುಮಾರ್, ಸಹ ಕಾರ್ಯದರ್ಶಿ ಎಂ.ನಾಗರಾಜು, ಪ್ರಾಂಶುಪಾಲ ದೇವ ರಾಜು, ಉಪ ನ್ಯಾಸಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.