ಗಜೇಂದ್ರಗಡ: ‘ಕುಗ್ರಾಮಗಳನ್ನು ಸುಗ್ರಾಮಗಳನ್ನಾಗಿಸುವ ಸರ್ಕಾರಗಳ ಯೋಜನೆಗಳು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಂಡರೆ ರಾಜ್ಯದಲ್ಲಿ ಕನಿಷ್ಠ ಮೂಲ ವಂಚಿತ ಕುಗ್ರಾಮಗಳೇ ಕಾಣುತ್ತಿರಲಿಲ್ಲ. ಹೀಗಾಗಿ ಸರ್ಕಾರಗಳು ಸಮರ್ಪಕ ರೀತಿಯಲ್ಲಿ ಸೌಕರ್ಯ ಒದಗಿಸಬೇಕು. ಮಠಾಧೀಶರು ಕೈಗೊಳ್ಳುವ ಸಮಾಜ ಮುಖಿ ಕಾರ್ಯಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲು ಸರ್ಕಾರ ಮುಂದಾಗಬೇಕು’ ಎಂದು ಚಿತ್ರದುರ್ಗದ ಬಸವಕೇಂದ್ರದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ರೋಣ ತಾಲ್ಲೂಕಿನ ಕನಿಷ್ಠ ಮೂಲ ವಂಚಿತ ಕುಗ್ರಾಮಗಳಾದ ಭೈರಾಪುರ ಮತ್ತು ಭೈರಾಪುರ ತಾಂಡಾಗಳ ಮಧ್ಯದಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಬಸವ ಕೇಂದ್ರದಿಂದ ನಿರ್ಮಿಸಲು ಉದ್ಧೇಶಿಸಿರುವ ‘ಬಸವ ಸಮುದಾಯ ಭವನ’ದ ಭೂಮಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿಯೇ ಅತ್ಯಂತ ಕುಗ್ರಾಮಗಳಾದ ಭೈರಾಪುರ ಹಾಗೂ ಭೈರಾಪುರ ತಾಂಡಾ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇಲ್ಲಿನ ಗ್ರಾಮಸ್ಥರ ಬದುಕು ಅತ್ಯಂತ ದುಸ್ತರವಾಗಿದೆ. ನಾಗರಿಕರು ಬದುಕು ಅವಶ್ಯವಿರುವ ಕನಿಷ್ಟ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭೈರಾಪುರ ಹಾಗೂ ಭೈರಾಪುರ ತಾಂಡಾಗಳಿಗೆ 2006 ರಲ್ಲಿ ಭೇಟಿ ನೀಡಿ ಇಲ್ಲಿನ ನಾಗರಿಕರ ದಯನೀಯ ಬದುಕಿನ ಸಮಗ್ರ ಪರಿಚಯ ಮಾಡಿಕೊಂಡೆ. ಅಲ್ಲದೆ, ಅಂದು ಈ ಎರಡು ಗ್ರಾಮಗಳ ನಾಗರಿಕರ ಅನುಕೂಲಕ್ಕಾಗಿ ಎರಡೂ ಗ್ರಾಮಗಳ ಮಧ್ಯ ಸಮುದಾಯ ಭವನ ನಿರ್ಮಿಸುವುದಾಗಿ ಭರವಸೆ ನೀಡಿದ್ದೆ. ಅಲ್ಲದೆ, ಗ್ರಾಮದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಬಸವ ಕೇಂದ್ರದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ಧೇಶ ಹೊಂದಲಾಗಿತ್ತು. ಆದರೆ, ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಮಕ್ಕಳ ಹಾಜರಾತಿ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆ ಸ್ಥಾಪನೆಯಿಂದ ಹಿಂದೆ ಸರಿದೆ’ ಎಂದರು

‘ಕಳೆದ ಮೂರು ವರ್ಷಗಳಿಂದ ಈ ಎರಡು ಗ್ರಾಮಗಳಲ್ಲಿನ ಮಕ್ಕಳ ಪ್ರೌಢ ಹಾಗೂ ಉನ್ನತ ಶಿಕ್ಷಣಕ್ಕೆ ಚಿತ್ರದುರ್ಗದ ಶ್ರೀಮಠದ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ವಸತಿ ಸಹಿತ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಲದೆ 50X70 ವಿಸ್ತೀರ್ಣದಲ್ಲಿ ಅಂದಾಜು 25 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸುವ್ಯವಸ್ಥಿತ ಸಮುದಾಯ ಭವನ ನಿರ್ಮಿಸಲಾಗುವುದು. ಈಗಾಗಲೇ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆದರೆ, ಇಲ್ಲಿ ನೀರಿನ ಸಮಸ್ಯೆ ಇರುವುದರಿಂದ ಸಮುದಾಯ ಭವನ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ’ ಎಂದರು.

ಕುಗ್ರಾಮಗಳಾದ ಭೈರಾಪುರ ಮತ್ತು ಭೈರಾಪುರ ತಾಂಡಾಗಳಿಗೆ ಚಿತ್ರದುರ್ಗದ ಬಸವ ಕೇಂದ್ರದಿಂದ ಸಾಧ್ಯವಾದಷ್ಟು ಎಲ್ಲ ರೀತಿಯ ನೆರವನ್ನು ಒದಗಿಸಲು ಸಿದ್ಧ. ಆದರೆ ಸರ್ಕಾರ ಹೆಚ್ಚಿನ ರೀತಿಯಲ್ಲಿ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಗ್ರಾಮಸ್ಥರ ಬಾಳು ಹಸನುಗೊಳಿಸಲು ಶ್ರಮಿಸಬೇಕಿದೆ’ ಎಂದರು.

ಗಜೇಂದ್ರಗಡ ಬಸವ ಕೇಂದ್ರದ ಅಧ್ಯಕ್ಷ ಬಸವರಾಜ ಹೂಗಾರ, ವೆಂಕಟೇಶ ಮೆಹರವಾಡೆ, ರವಿ ಕುಮಾರ ಹಾಸಿಗಲ್, ಬಸವರಾಜ ಕೊಟಗಿ, ನಾರಾಯನ ಬಾಕಳೆ, ಕುಮಾರ ಸಂಗಮದ, ಸುರೇಶ ಮಾರನಬಸರಿ, ಶ್ರೀಕಾಂತ ತಾಳಿಕೋಟಿ, ಸಿದ್ದು ಪಾಟೀಲ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.