ಬುಧವಾರ, ಜನವರಿ 22, 2020
23 °C

‘ಕುಡಿಯುವ ನೀರು ಪೂರೈಕೆ ಇಂದಿನಿಂದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು(ಮುದಗಲ್ಲು): ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿ ಪ್ರದೇಶದ ಎಲ್ಲ ವಾರ್ಡ್‌ಗಳಿಗೆ ಕುಡಿವ ನೀರು ಪೂರೈಸುವ ಪೈಪ್‌ಲೈನ್‌ ಸೋರಿಕೆ­ಯಿಂದ ಕಳೆದೆರಡು ದಿನಗ­ಳಿಂದ ನೀರು ಪೂರೈಸುವಲ್ಲಿ ವ್ಯತ್ಯಯ ಉಂಟಾಗಿತ್ತು. ನಿಯಮಾ­ನುಸಾರ ಇಂದಿನಿಂದ ನೀರು ಪೂರೈಕೆ ಮಾಡ­ಲಾಗುತ್ತದೆ ಎಂದು ಪಪಂ ಅಧ್ಯಕ್ಷ ರಜ್ಜಬಲಿ ಹಳೆಪೇಟೆ ತಿಳಿಸಿದ್ದಾರೆ.ಮಂಗಳವಾರ ಶಾಶ್ವತ ಕುಡಿಯುವ ನೀರಿನ ಪಂಪ್‌ಹೌಸ್‌ನ ನವಲಿ ಬಳಿ ಪೈಪ್‌ಲೈನ ಸೋರಿಕೆ ಕಾಣಿಸಿಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ತಾಂತ್ರಿಕ ದೋಷದಿಂದ ಸೋರಿಕೆ ಕಾಣಿಸಿಕೊಂಡಿತ್ತು. ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದು, ಇಂದಿನಿಂದ ನೀರು ಬಿಡಲಾಗುವುದು.ಜನರು ಯಾವುದೇ ರೀತಿಯ ಆತಂಕರ ಪಡುವ ಅಗತ್ಯವಿಲ್ಲ. ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಹಿರಿಯ ಸದಸ್ಯ ಎಸ್‌. ವೀರೇಶ ವಡ್ಡರ, ಮಹ್ಮದ ಸಾದಿಕ್‌ಅಲಿ. ಮುಖಂಡ ಹಿತೀಶ ಜೈನ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)